ಮೈಸೂರು:ಸ್ಪಂದನ ವತಿಯಿಂದ ನೂತನ ಮೇಯರ್ ಶ್ರೀ ಶಿವಕುಮಾರ್
ರವರಿಗೆ ಅಭಿನಂದನೆ!!
ಮೈಸೂರು ನಗರಪಾಲಿಕೆಯ ಮೇಯರ್ ಸ್ಥಾನ ಅಲಂಕರಿಸಿದ ಶ್ರೀ ಶಿವಕುಮಾರ್, ರವರು ಸುಸಂಸ್ಕೃತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅವರಿಗೆ ನಗರದ ಸ್ಪಂದನ ಸಂಸ್ಥೆಯಿಂದ ಮೇಯರ್ ನಿವಾಸದಲ್ಲಿಯೇ ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ ಜಯಶಂಕರ್
ಹೆಸರಾಂತ ಮಕ್ಕಳ ತಜ್ಞರಾದ ಡಾ.ಪ್ರಭುಲಿಂಗಸ್ವಾಮಿ
ಕ್ಷ- ಕಿರಣ ನುರಿತ ತಜ್ಞರಾದ ಡಾ. ಕೆ ಆರ್ .ಕುಮಾರಸ್ವಾಮಿ
ಮೂಳೆ ತಜ್ಞರಾದ ಡಾ. ಮರುಳ ಸಿದ್ದಪ್ಪ ,ಡಾ. ಕೃಷ್ಣಮೂರ್ತಿ
ಪ್ರೊ ರತ್ನಾಶೇಖರ್, ನಿವೃತ್ತ ಅಡಿಷನಲ್ ಕಮಿಷನರ್
ಶ್ರೀ ಪುಟ್ಟರಾಜು, ನಿವೃತ್ತ ಇಂಜನಿಯರಗಳಾದ ಶ್ರೀ ಶ್ರೀಧರ್ ಮೂರ್ತಿ, ಶ್ರೀ ಪ್ರಕಾಶ್ ರವರುಗಳು ಭಾಗವಹಿಸಿದ್ದರು.
ನೂತನ ಮೇಯರ್ ರವರು ಶ್ರೀ ಶಿವಕುಮಾರ್ ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಕೂರಿಸಿ ಮಾತನಾಡಿಸಿದರು. ಈಗಾಗಲೇ ನಗರದಲ್ಲೆಡೆ ದಸರಾ ಆಚರಣೆಯ ಬಗ್ಗೆ ನಾಗರಿಕರು ಬಹಳ ಉತ್ಸುಕರಾಗಿದ್ದು, ಈ ಹಿನ್ನೆಲೆಯಲ್ಲಲಿ ರಸ್ತೆ, ದುರಸ್ತಿ ಹಾಗೂ ಮುಂದಿನ ಸಮಗ್ರ ಅಭಿವೃದ್ದಿ ಹಾಗೂ ಸಂಬಂಧಿಸಿದ ಯೋಜನೆಗಳ ಬಗ್ಗೆ ಅನಿಸಿಕೆ ವ್ಯಕ್ತಿಪಡಿಸಿದ ಅವರು, ಸಾದ್ಯವಾದಷ್ಟೂ ಎಲ್ಲಾ ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆಯೂ ಸಹ ಗಮನ ಹರಿಸುವು ದಾಗಿ ತಿಳಿಸಿದರು. ಅತ್ಯಂತ ಸರಳ, ನೇರ ಹಾಗೂ ಆತ್ಮೀಯವಾದ ಈ ಸಂವಾದ ಎಲ್ಲರಿಗೂ ಮೆಚ್ಚುಗೆಯಾಯಿತು.
ಇದೇ ಸಂದರ್ಭದಲ್ಲಿ ಸ್ಪಂದನ ಅಧ್ಯಕ್ಷರಾದ ಜಯಶಂಕರ್ ಮಾತನಾಡಿ ಕುವೆಂಪು ನಗರದ ನಿವಾಸಿಗಳೆಲ್ಲಾ ಮೇಯರ್ ಶ್ರೀ ಶಿವಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ತಾವೂ ಸ್ವತ: ಕೇಳಿದ್ದು, ನಿಜಕ್ಕೂ ಇವರು ಮೇಯರ್ ಆಗಿರುವುದು ನಾಗರಿಕರಿಗೆ ಸಂತಷದ ವಿಷಯವೇ ಸರಿ. ಅಲ್ಲದೆ, ಕುವೆಂಪು ಬಸವಣ್ಣ ,ಅಂಬೇಡ್ಕರರ ಆದರ್ಶಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಹಾಗು ಅಭಿನಂದನೀಯ ಎಂದರು. ದೂರವಾಣಿ ಕರೆ ಮಾಡಿದರೆ ತಕ್ಷಣ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ನನಗೆ ಸ್ವತ: ಅನುಭವವಾಗಿದೆ.ಇಂಥಹವರೂ ಮೈಸೂರು ಮಹಾನಗರಪಾಲಿಕೆಗೆ ಮೇಯರ್ ಆಗಿರುವುದು ಕುವೆಂಪು ನಗರ ಮತ್ತು ಮೈಸೂರು ನಗರದ ಅಭಿವೃದ್ದಿಗೆ ಪೂರಕವಾಗಲಿದೆ ಅಭಿಮಾನದಿಂದ ನುಡಿದರು.