Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ ನೋಡಿ..
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೊ ಬಿಗ್ ಬಾಸ್ ಸೀಸನ್ 9 ನಿನ್ನೆ ಆರಂಭವಾಗಿದ್ದು, ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರಿಂದ ಸಖತ್ ಡ್ಯಾನ್ಸ್, ಹಾಸ್ಯ, ಮಾತಿನ ಜೊತೆ ಸ್ಪರ್ಧಿಗಳು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ದೊಡ್ಮನೆ ಕಾಲಿಡೊ ಸದಾವಕಾಶ ಎಲ್ಲರಿಗೂ ಸಿಗಲ್ಲ ಈ ರೀತಿಯ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ ನವಾಜ್. ಅವರಿಗೆ ಇನ್ನೂ 19 ವರ್ಷದವರಾಗಿದ್ದು, ಸಿನಿಮಾ ರಿವ್ಯೂ ಮೂಲಕ ಎಲ್ಲರ ಗಮನ ಸೆಳೆದ್ದಾರೆ. ನವಾಜ್ ಹೇಳುವ ಪಂಚಿಂಗ್ ಡೈಲಾಗ್‌ಗೆ ಸಿನಿ ಸ್ಟಾರ್‌ಗಳು ಫಿದಾ ಆಗಿದ್ದು ಅಲ್ಲದೆ, ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೂ ಸಹ ನವಾಜ್‌ನನ್ನು ಕರೆಯುತ್ತಿದ್ದರು.
ತನ್ನದೆ ವಿಶಿಷ್ಠ ಶೈಲಿಯಲ್ಲಿ ಸಿನಿಮಾಗಳ ರಿವ್ಯೂ ಕೊಡುತ್ತಿದ್ದ ಹುಡುಗ, ಸದ್ಯ ಬಿಗ್ ಬಾಸ್ ಸೀಸನ್ 9 ಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ವೇದಿಕೆ ಏರಿದಾಗಲೇ ನಾನು ಗೆದ್ದೆ. ನನಗೆ ಕಸ ಗುಡಿಸೋಕೂ ಬರಲ್ಲ. ‘ಕಾಮಿಡಿಯನ್ ಆಗಬೇಕು ಎಂಬುದು ನನ್ನ ಆಸೆ, ನಾನು ಬಿಗ್ ಬಾಸ್ ಗೆಲ್ಲಿಸಬೇಕು ಎಂದು ನವಾಜ್ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ಜನರು ನೋಡಿ ಗುರುತಿಸುತ್ತಿದ್ದಾರೆ ಎಂಬುದೇ ಖುಷಿಯ ವಿಚಾರ. ಸಾಮಾನ್ಯವಾಗಿ ಸಿನಿಮಾ ನೋಡಿ ಎಂದರೆ ಯಾರೂ ನೋಡಲ್ಲ. ಆಗ ನಾನು ಈ ಟೆಕ್ನಿಕ್ ಶುರು ಮಾಡಿದೆ. ನನ್ನಿಂದಾಗಿ ಒಂದಷ್ಟು ಮಂದಿ ಕನ್ನಡ ಸಿನಿಮಾ ನೋಡ್ತಾರೆ ಅನ್ನೋದು ಖುಷಿಯ ವಿಚಾರ. ಸುಮಾರಷ್ಟು ಜನರು ನನ್ನ ರಿವ್ಯೂ ನೋಡಿ ಬೈದರು. ನಾನು ಹುಚ್ಚಾನೇ. ಅವಾಗ ಯಾರೂ ಇರಲಿಲ್ಲ. ಈಗ ಥಿಯೇಟರ್ಗೆ ಬಂದ್ರೆ ಎಲ್ಲರೂ ನನಗೆ ಮಾತನಾಡೋಕೆ ಕೊಡ್ತಾರೆ’ ಎಂದು ಹೇಳಿಕೊಂಡಿದ್ದಾರೆ ನವಾಜ್.
ಬಿಗ್ ಬಾಸ್ ಕನ್ನಡ ಸೀಸನ್ 9′ ಆರಂಭ ಆಗಿದೆ. ಕಿಚ್ಚ ಸುದೀಪ್ ಅವರು ಪ್ರತಿಬಾರಿಯಂತೆ ಈ ಬಾರಿಯೂ ಶೋ ನಡೆಸಿಕೊಡುತ್ತಿದ್ದಾರೆ. ಅವರು ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿ ನೀಡಿದ್ದಾರೆ. ಈ ಸೀಸನ್ನಲ್ಲಿ ಹೊಸ ಸ್ಪರ್ಧಿಗಳ ಜತೆ ಹಳೆಯ ಸ್ಪರ್ಧಿಗಳೂ ಇದ್ದು, ಈ ಮೊದಲೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಸ್ಪರ್ಧಿಗಳು ಈ ಬಾರಿಯೂ ಮಿಂಚಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಾಸ ಪದಗಳ ಪಂಚಿಂಗ್ ಡೈಲಾಗ್ ಹೇಳಿ ಫೇಮಸ್ ಆಗಿದ್ದ ರಿವ್ಯೂ ನವಾಜ್ ಸದ್ಯ ಬಿಗ್ ಬಾಸ್ ಹೌಸ್ ಪ್ರವೇಶ ಮಾಡಿದ್ದಾನೆ. ದೊಡ್ಮನೆಗೆ ವಿಚಿತ್ರ ಪ್ರತಿಭೆಗಳ ಪ್ರವೇಶವಾಗುತ್ತಿದ್ದು, ಈ ಸೀಸನ್ ಸಖತ್ ಎಂಟರ್ಟೈನಮೆಂಟ್ ನೀಡಲಿದೆ.