ಹುಡುಗಿ ರೂಮ್ ಮೇಟ್ ಬೇಕಾಗಿದ್ದಾಳೆ | ಕಂಡೀಷನ್ಸ್ ಅಪ್ಲೈ | ಫೇಸ್ಬುಕ್ ನಲ್ಲಿ ನೀಡಿದ ವ್ಯಕ್ತಿಯೋರ್ವನ ಜಾಹೀರಾತು ವೈರಲ್

ಎಲ್ಲರಿಗೂ ತಿಳಿದಿರುವ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಧವಿಧವಾದ ಜಾಹೀರಾತುಗಳು ಪ್ರಕಟವಾಗುತ್ತದೆ. ಅಂದರೆ, ಮಾಧ್ಯಮಗಳಲ್ಲಿ ಕೆಲಸ ಖಾಲಿ ಇದೆ, ಪಿಜಿ ಖಾಲಿ ಇದೆ, ಕೆಲಸಕ್ಕೆ ಜನ ಬೇಕಾಗಿದ್ದಾರೆ ಇತ್ಯಾದಿ. ಆದರೆ ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಜಾಹೀರಾತು ನೋಡಿ ನೆಟ್ಟಿಗರೇ ದಂಗಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಮೆರಿಕದ ಡೆಡ್ರಾಯಿಟ್ ಎಂಬ ಪ್ರದೇಶದ ವ್ಯಕ್ತಿಯೊಬ್ಬ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದು, ಆತನ ಜೊತೆ ವಾಸಿಸಲು ಲೇಡಿ ರೂಮ್‌ಮೇಟ್‌ಗಳು ಬೇಕು ಎಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದಾನೆ. ಇದಿಷ್ಟೇ ಅಲ್ಲದೇ, ಕೆಲವು ಷರತ್ತು ಕೂಡಾ ಹಾಕಿ, ಓದುಗರ ಹುಬ್ಬೇರಿಸುವಂತೆ ಮಾಡಿದ್ದಾನೆ. ಹಾಗಾಗಿ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


Ad Widget

45 ವರ್ಷದ ವ್ಯಕ್ತಿಯೋರ್ವ ಈ ಪೋಸ್ಟ್ ಹಾಕಿದ್ದು, ತನ್ನ ರೂಮ್‌ಮೇಟ್‌ಗಳಾಗಿ ಬರುವವರಿಗೆ ಕೆಲವೊಂದು ಷರತ್ತುಗಳನ್ನು ಹಾಕಿದ್ದು, ಅವುಗಳನ್ನು ಪಾಲಿಸುವವರು ಮಾತ್ರ ಬರಬಹುದು ಎಂದು ಜಾಹೀರಾತಿನಲ್ಲಿ ಹಾಕಿದ್ದಾನೆ. ಆತನ ರೂಮ್‌ಮೇಟ್‌ಗಳಾಗಿ ಬರುವವರು 18 ರಿಂದ 25 ವರ್ಷದವರಾಗಿರಬೇಕು ಜೊತೆಗೆ ನೋಡಲು ಸುಂದರವಾಗಿಬೇಕೆಂದು ಬರೆದಿದ್ದಾನೆ.

Ad Widget

Ad Widget

Ad Widget

ಮನೆಗೆ ಬರುವ ಯುವತಿ ಉತ್ತಮ ಗುಣಗಳನ್ನು ಹೊಂದಿರಬೇಕು, ಮನೆಯನ್ನು ಸ್ವಚ್ಛಗೊಳಿಸಿ, ಅಡುಗೆ ಮಾಡಲು ಕೂಡಾ ಬರಬೇಕು. ಅಷ್ಟು ಮಾತ್ರವಲ್ಲ, ಆಕೆ ಸಿಗರೇಟ್ ಸೇದಬಾರದು, ಮದ್ಯವ್ಯಸನಿಯಾಗಿರಬಾರದು, ನಾಯಿ ಸಾಕಬಾರದು ಮುಖ್ಯವಾಗಿ ಅಂದರೆ ಅತಿ ಮುಖ್ಯವಾಗಿ ಆಕೆಯ ಬಾಯ್ ಫ್ರೆಂಡ್ಸ್ ಯಾರೂ ಮನೆಗೆ ಬರಬಾರದು ಎಂದು ಷರತ್ತು ಹಾಕಿದ್ದಾನೆ.

ಈ ವ್ಯಕ್ತಿ ಸಿಂಗಲ್ ಬೆಡ್‌ರೂಮ್ ಫ್ಲಾಟ್‌ನಲ್ಲಿ ವಾಸವಾಗಿರುವುದರಿಂದ ಆತನ ರೂಮ್‌ಮೇಟ್ ಆಗಿರುವವರು ಹಾಲ್‌ನಲ್ಲಿರುವ ಸೋಫಾದಲ್ಲಿ ಮಲಗಬಹುಂತೆ. ಅಲ್ಲದೇ ಆಕೆ ಆತನ ಬೆಡ್‌ರೂಂನಲ್ಲೂ ಬಂದು ಮಲಗಲು ಅವಕಾಶವಿದೆ ಎಂದು ಹೇಳಿಕೊಂಡಿದ್ದಾನೆ.

ಈ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವಾರು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಈತನ ಕಂಡೀಷನ್ ಗಳನ್ನು ಒಪ್ಪಿ, ಲೇಡಿರೂಮ್‌ಮೇಟ್‌ಗಳು ಬಂದಿದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ.

error: Content is protected !!
Scroll to Top
%d bloggers like this: