ಉತ್ತಮ ಆರೋಗ್ಯಕ್ಕಾಗಿ ಈ ಕಂದು ಬಣ್ಣದ ಆಹಾರ ಸೇವಿಸಿ | ಬದಲಾವಣೆ ನೀವೇ ಗಮನಿಸಿ

ಹೆಚ್ಚಿನವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗಿಂತ ರೋಡ್ ಸೈಡ್ ಸಿಗುವ ಅನಾರೋಗ್ಯಕರ ಜಂಕ್ ಫುಡ್ ಅಥವಾ ಎಣ್ಣೆಯ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಎಂದರೆ ಎಲ್ಲಿಲ್ಲದ ಪ್ರೀತಿ! ಇದರಿಂದ ಆರೋಗ್ಯ ಕೆಟ್ಟು, ಇಲ್ಲದ ರೋಗಗಳಿಗೆ ಎಡೆ ಮಾಡಿಕೊಡುವ ಪ್ರಮೇಯ ಹೆಚ್ಚು. ಹಾಗಾಗಿ, ಆರೋಗ್ಯಕಾರಿ ಜೀವನ ನಡೆಸಲು ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಜೊತೆಗೆ ಸರಿಯಾದ ಆಹಾರ ಕ್ರಮ ಪಾಲಿಸಬೇಕು. ಕಂದು ಬಣ್ಣದಿಂದ ಕೂಡಿದ ಆಹಾರ ಉತ್ಪನ್ನಗಳು ಅನೇಕ ಪ್ರಯೋಜನಗಳನ್ನು ಒಳಗೊಂಡಿವೆ.

ಸುವರ್ಣ ಗೆಡ್ಡೆ, ನೋಡಲು ದಪ್ಪವಾಗಿ ಮೈತುಂಬಾ ಮಣ್ಣು ಮೆತ್ತಿಕೊಂಡಿರುವ ಕಂದು ಬಣ್ಣದ ಸುವರ್ಣ ಗೆಡ್ಡೆ ಆರೋಗ್ಯಕ್ಕೆ ಉತ್ತಮವಾಗಿದ್ದು, ಈ ತರಕಾರಿಯಲ್ಲಿ ವಿಟಮಿನ್ಸ್ ಅಂಶಗಳು ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿ ಕಂಡುಬರುವುದರ ಜೊತೆಗೆ ಫೈಟೋನ್ಯೂಟ್ರಿಯೆಂಟ್ಸ್ ಎನ್ನುವ ನೈಸರ್ಗಿಕ ಅಂಶಗಳು ಈ ತರಕಾರಿಯಲ್ಲ ಯಥೇಚ್ಛ ವಾಗಿ ಸಿಗುವುದರಿಂದ, ದೀರ್ಘಕಾಲದಿಂದ ಬಳಲುತ್ತಿರುವ ಸಾಕಷ್ಟು ಆರೋಗ್ಯ ಸಮಸ್ಯೆಗಳು, ನಿಯಂತ್ರಣಕ್ಕೆ ಬರುತ್ತದೆ. ವಿಶೇಷವಾಗಿ ಸೇವನೆ ಮಾಡುವ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುವುದು ಮಾತ್ರವಲ್ಲದೆ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಹೃದಯದ ಸಮಸ್ಯೆಗಳು, ಮಧುಮೇಹ, ಕ್ಯಾನ್ಸರ್, ದೇಹ ಬೊಜ್ಜು ಇತ್ಯಾದಿ ಸಮಸ್ಯೆಗಳು ಈ ಕಂದುಬಣ್ಣದ ಸುವರ್ಣಗೆಡ್ಡೆ ಸೇವನೆಯಿಂದ ವಾಸಿಯಾಗುತ್ತದೆ .

ಡ್ರೈಫ್ರೂಟ್ಸ್ ಗಳಲ್ಲಿ ಒಂದಾದ ವಾಲ್ನಟ್ ದೇಹದ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವವನ್ನುಂಟು ಮಾಡುವ ಗುಣ ಲಕ್ಷಣಗಳನ್ನು ಒಳಗೊಂಡಿದ್ದು, ಈ ಕಂದು ಬಣ್ಣದಲ್ಲಿರುವ ವಾಲ್ನಟ್ ಬೀಜಗಳಲ್ಲಿ ಕಂಡು ಬರುವ ಪಾಲಿಫಿನಾಲ್ ಅಂಶಗಳು ದೇಹದ ಉರಿಯೂತದ ಸಮಸ್ಯೆಯ ವಿರುದ್ಧ ಹೋರಾಡುವ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ ಮತ್ತು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಣೆಗೆ ಸಹಕಾರಿಯಾಗಿದೆ.

ಬಾದಾಮಿ ಬೀಜಗಳು ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಆಗಾಗ ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದರಿಂದ ಪರಿಹಾರ ಪಡೆಯಬಹುದು. ಮೊಟ್ಟೆಯಲ್ಲಿ ಇರುವಷ್ಟೇ ಪ್ರೋಟೀನ್ ಅಂಶಗಳು ಕಡಲೆ ಕಾಳಿನಲ್ಲಿ ಸಿಗುವುದರಿಂದ, ದೇಹದ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅಧಿಕಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಕಡಲೆಕಾಳುಗಳು ಆರೋಗ್ಯಕ್ಕೆ ಬೇಕಾಗುವ ಕಬ್ಬಿಣಾಂಶ ಹಾಗೂ ಪ್ರೋಟೀನ್ ಅಂಶಗಳು ಕೊರತೆಯಾಗಂತೆ ನೋಡಿ ಕೊಳ್ಳುತ್ತದೆ. ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ವಿಟಮಿನ್ ಬಿ6 ಹಾಗೂ ಕರಗುವ ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ ಜೀರ್ಣಶಕ್ತಿಗೆ ನೆರವಾಗಿ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಬಿಳಿ ಬಣ್ಣದ ಅಕ್ಕಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ಕಂಡು ಬರುತ್ತದೆ. ಇದಕ್ಕೆ ಬದಲಾಗಿ ಕಂದು ಬಣ್ಣದ ಅಕ್ಕಿಯಿಂದ ತಯಾರು ಮಾಡಿದ ಅನ್ನವನ್ನು ಸೇವನೆ ಮಾಡಿದರೆ ಅಪಾರ ಪ್ರಮಾಣದ ಆರೋಗ್ಯ ಪ್ರಜೋಜನಗಳು ದೊರೆಯುತ್ತವೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಕಂದು ಬಣ್ಣದ ಅನ್ನ ಊಟ ಮಾಡಿದರೆ ಬಹಳ ಒಳ್ಳೆಯದು. ಇವು ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ಮೇಲೆ ತಿಳಿಸಿದ ಕಂದು ಬಣ್ಣದ ಆಹಾರ ಪದಾರ್ಥ ಗಳನ್ನು ಹಿತಮಿತವಾಗಿ, ನಿಯಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಹುದಾಗಿದೆ.

Leave A Reply

Your email address will not be published.