ಗಾಂಜಾ ವಿವಾದ |ದುಷ್ಕರ್ಮಿಗಳಿಂದ ಪೊಲೀಸರ ಮೇಲೆ ಹಲ್ಲೆ !!!

ಕಮಲಾಪುರ (ಕಲಬುರಗಿ ಜಿಲ್ಲೆ): ಗಾಂಜಾ ಮಾರಾಟ ಸಂಬಂಧಿಸಿದಂತೆ ಮಹಾರಾಷ್ಟ್ರದ ತುರೂರಿ ಸಮೀಪದ ವಾಡಿ ಹಾಗೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲ್ಲೂಕಿನ ಹೊನ್ನಾಳಿಯ ಜಮೀನಿನಲ್ಲಿ ಶುಕ್ರವಾರ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ಸುಮಾರು 40 ಜನರು ಮಾಡಿ ಹಲ್ಲೆ ಘಟನೆ, ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ತೀವ್ರ ಗಾಯಗೊಂಡಿದ್ದಾರೆ.

ಬಸವಕಲ್ಯಾಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತಡರಾತ್ರಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಪೊಲೀಸರು ಬಚಾವಾಗಿದ್ದಾರೆ.

ನವೀನ ಎಂಬಾತನ್ನು ಎರಡು ದಿನಗಳ ಹಿಂದೆ ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ನ್ನು ಗುರುವಾರ ಬಂಧಿಸಿದ್ದರು.
ಇನ್ನೊಬ್ಬ ಬಸವಕಲ್ಯಾಣ ತಾಲ್ಲೂಕಿನ ಭೋಸಗಾದ ಸಂತೋಷ ಎಂಬಾತನನ್ನು ಶುಕ್ರವಾರ ಬಂಧಿಸಿದ್ದರು.
ಇವರನ್ನು ವಿಚಾರಣೆ ನಡೆಸಿದಾಗ ಮಹಾರಾಷ್ಟ್ರ ಗಡಿಯ ಹೊನ್ನಾಳಿ ಸಮೀಪದ ಜಮೀನೊಂದರಲ್ಲಿ ಗಾಂಜಾ ಬೆಳೆದಿರುವುದಾಗಿ ಬಾಯಿಬಿಟ್ಟಿದ್ದ.
ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಮಹಾಗಾಂವ ಪಿಎಸ್‌ಐ ಆಶಾ ರಾಠೋಡ ಸೇರಿದಂತೆ 10 ಜನರ ತಂಡ ಕಾರ್ಯಾಚರಣೆಗೆ ತೆರಳಿದ್ದರು.

ಮಹಾರಾಷ್ಟ್ರಗಡಿಯ ಪೊಲೀಸರ ಸಹಕಾರ ನೀಡುವಂತೆ ಸೇರಿ ಕೆಲವರು ತೆರಳಿದ್ದರು. ಸ್ಥಳಕ್ಕೆ ಭೇಟಿ ನೀಡಿದಾಗ ಗಾಂಜಾ ಗಿಡಗಳು ಕಂಡು ಬಂದಿದ್ದು, ಮಹಾರಾಷ್ಟ್ರ ಪೊಲೀಸರಿಗೆ ಕಾಯುತ್ತಿದ್ದರು. ಅಷ್ಟರಲ್ಲೆ ದುಷ್ಕರ್ಮಿಗಳ ಗುಂಪು ಕಟ್ಟಿಕೊಂಡು ಬಂದು ಬಡಿಗೆ,ಕಲ್ಲು ತೂರಾಟ ಹಲ್ಲೆ ನಡೆಸಿದ್ದಾರೆ

Leave A Reply

Your email address will not be published.