ನಿಮಗೆ ಯಾರನ್ನಾದರೂ ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿದ ಅನುಭವ ಆಗಿದೆಯಾ ? ಹಾಗಾದರೆ ವೈಜ್ಞಾನಿಕ ಕಾರಣ ತಿಳಿಯಿರಿ!!!
ಕೆಲವೊಮ್ಮೆ ಕಚೇರಿಯ ಡೋರ್ಗಳನ್ನು ಮುಟ್ಟಿದಾಗ, ಇಲ್ಲವೇ ಚೇರ್ ಮುಟ್ಟಿದಾಗ ವಿದ್ಯುತ್ ಪ್ರವಹಿಸಿದ ಅನುಭವ ಹೆಚ್ಚಿನವರಿಗೆ ಆಗಿರಬಹುದು. ಕೆಲವೊಮ್ಮೆ ಸ್ನೇಹಿತರ ಕೈಕುಲುಕಿದಾಗಲೂ ಈ ಅನುಭವವಾಗಿರಬಹುದು. ಒಂದು ರೀತಿಯಲ್ಲಿ ನಿಜವಾದ ವಿದ್ಯುತ್ ಅಲ್ಲದಿದ್ದರೂ ಕೂಡ ಕರೆಂಟ್ ಹೊಡೆದ ರೀತಿಯ ಅನುಭವ ವಾಗುತ್ತದೆ. ಆದರೆ ಇದು ಹೇಗೆ ಸಂಭವಿಸುತ್ತದೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದೀರಾ?
ಈ ರೀತಿಯ ಘಟನೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಏಕೆಂದರೆ ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಇರುತ್ತದೆ. ಇದರಿಂದಾಗಿ ಸ್ವಲ್ಪ ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಜಗತ್ತಿನಲ್ಲಿ ಇರುವ ಎಲ್ಲಾ ವಸ್ತುಗಳು ಪರಮಾಣುವಿನಿಂದ ಮಾಡಲ್ಪಟ್ಟಿದೆ ಮತ್ತು ಪರಮಾಣು ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳಿಂದ ಮಾಡಲ್ಪಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಎಲೆಕ್ಟ್ರಾನ್ ಋಣಾತ್ಮಕ ಆವೇಶವನ್ನು , ಪ್ರೋಟಾನ್ ಧನಾತ್ಮಕ ಆವೇಶವನ್ನು ಮತ್ತು ನ್ಯೂಟ್ರಾನ್ ತಟಸ್ಥವಾಗಿದೆ. ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿ ಪ್ರೋಟಾನ್‌ಗಳು ನೆಲೆಸಿದರೆ, ಎಲೆಕ್ಟ್ರಾನ್‌ಗಳು ನ್ಯೂಕ್ಲಿಯಸ್‌ನ ಸುತ್ತ ಸುತ್ತುತ್ತಿರುತ್ತವೆ. ಪರಮಾಣು ಸಮಾನ ಸಂಖ್ಯೆಯ ಎಲೆಕ್ಟ್ರಾನ್‌ಗಳು ಮತ್ತು ಪ್ರೋಟಾನ್‌ಗಳನ್ನು ಹೊಂದಿರುವಾಗ ಅದು ಸ್ಥಿರವಾಗಿರುತ್ತದೆ. ಈ ಎರಡರ ಸಂಖ್ಯೆಯಲ್ಲಿ ವ್ಯತ್ಯಾಸವಾದಾಗ, ಎಲೆಕ್ಟ್ರಾನ್‌ಗಳು ಪುಟಿಯಲು ಪ್ರಾರಂಭಿಸುತ್ತವೆ ಮತ್ತು ಪರಮಾಣುವಿನಲ್ಲಿ ಚಲನೆ ಇರುತ್ತದೆ.
ನಮ್ಮ ದೇಹದಲ್ಲಿ ಯಾವಾಗಲೂ ಒಂದೇ ಸಂಖ್ಯೆಯ ಎಲೆಕ್ಟ್ರಾನ್‌ಗಳು ಮತ್ತು ಪ್ರೋಟಾನ್‌ಗಳು ಇರುತ್ತವೆ. ಇದರಿಂದಾಗಿ ಪರಮಾಣುಗಳು ಸ್ಥಿರವಾಗಿರುತ್ತವೆ. ಆದರೆ ಅವು ಅಸಮತೋಲನಗೊಂಡಾಗ , ಸಮಾನವಾಗಿಲ್ಲದಿದ್ದಾಗ ಎಲೆಕ್ಟ್ರಾನ್‌ಗಳು ಸಾಕಷ್ಟು ಚಲನೆಯನ್ನು ಸೃಷ್ಟಿಸುತ್ತವೆ. ವಿಜ್ಞಾನದ ನಿಯಮದ ಪ್ರಕಾರ, ಎಲೆಕ್ಟ್ರಾನ್‌ಗಳ ಸಂಖ್ಯೆ ಹೆಚ್ಚಾದಂತೆ, ಅವು ಋಣಾತ್ಮಕ ಆವೇಶವನ್ನು ಸೃಷ್ಟಿಸಿ ಧನಾತ್ಮಕ ಎಲೆಕ್ಟ್ರಾನ್‌ಗಳಂತೆ ಚಲಿಸುತ್ತವೆ.
ಒಬ್ಬ ವ್ಯಕ್ತಿ ಅಥವಾ ವಸ್ತುವನ್ನು ಸ್ಪರ್ಶಿಸಿದರೆ, ಅದರಲ್ಲಿ ಧನಾತ್ಮಕ ಎಲೆಕ್ಟ್ರಾನ್ಗಳಿದ್ದು,ನಕಾರಾತ್ಮಕ ಎಲೆಕ್ಟ್ರಾನ್‌ಗಳು ದೇಹದಿಂದ ಹೊರಹೋಗುತ್ತವೆ. ಇದರಿಂದಾಗಿ ವಿದ್ಯುತ್ ಪ್ರವಾಹವಾದ ಅನುಭವವಾಗುತ್ತದೆ. ಕೆಲವು ದೈಹಿಕ ಚಟುವಟಿಕೆಗಳಲ್ಲಿ ಕೆಲವು ಇಂಚುಗಳಷ್ಟು ದೂರದಿಂದಲೂ ಇಂತಹ ಕಂಪನವನ್ನು ಅನುಭವಿಸಬಹುದು. ಕೆಲವೊಮ್ಮೆ ಸ್ವೆಟರ್ ಅಥವಾ ಬೇರೆ ಬಟ್ಟೆ ತೆಗೆದಾಗ ವಿದ್ಯುತ್ ಉತ್ಪಾದನೆಯಾದಂತಾಗಿ ಕೂದಲಿನಲ್ಲೂ ಗೋಚರಿಸುತ್ತದೆ.
ಉತ್ತಮ ವಾಹಕವಾಗಿರುವ ವಸ್ತುಗಳು ಎಲೆಕ್ಟ್ರಾನ್‌ಗಳು ಸುಲಭವಾಗಿ ಹೊರಹೋಗಲು ಅನುಮತಿಸುವುದಿಲ್ಲ. ಅದಕ್ಕಾಗಿಯೇ ಪರಮಾಣುವಿನಲ್ಲಿ ಎಲೆಕ್ಟ್ರಾನ್‌ಗಳು ಓಡುತ್ತಲೇ ಇರುತ್ತವೆ ಮತ್ತು ಆ ವಸ್ತುವಿನಲ್ಲಿ ಪ್ರವಾಹವೂ ಓಡುತ್ತಲೇ ಇರುತ್ತದೆ. ಒಂದು ವಸ್ತುವಿನಲ್ಲಿ ಎಲೆಕ್ಟ್ರಾನ್‌ಗಳ ಸಂಖ್ಯೆಯು ಹೆಚ್ಚಾದಾಗ, ಆ ವಸ್ತುವಿನ ಋಣಾತ್ಮಕ ಆವೇಶವೂ ಹೆಚ್ಚಾಗುತ್ತದೆ. ಅಂತಹ ವಸ್ತುವನ್ನು ಸ್ಪರ್ಶಿಸಿದಾಗ, ದೇಹದ ಧನಾತ್ಮಕ ಎಲೆಕ್ಟ್ರಾನ್ಗಳು ಆ ವಸ್ತುವಿನ ಎಲೆಕ್ಟ್ರಾನ್ ಅನ್ನು ತನ್ನ ಕಡೆಗೆ ಎಳೆಯಲು ಪ್ರಾರಂಭಿಸುತ್ತವೆ. ಈ ಎಲೆಕ್ಟ್ರಾನ್‌ಗಳ ವೇಗವರ್ಧಿತ ಚಲನೆಯಿಂದಾಗಿ ಕರೆಂಟ್ ಶಾಕ್ ಹೊಡೆದ ಅನುಭವವಾಗುತ್ತದೆ.