ವಿಟ್ಲ : ಬೈಕ್-ಪಿಕಪ್ ಡಿಕ್ಕಿ ,ಬೈಕ್ ಸವಾರ ಮೃತ್ಯು

Share the Article

ವಿಟ್ಲ: ಬೈಕ್ ಮತ್ತು ಪಿಕಪ್ ವಾಹನ ಢಿಕ್ಕಿಯಾದ ಘಟನೆ ವಿಟ್ಲದ ಮೈರ ಎಂಬಲ್ಲಿ ನಡೆದಿದೆ. ಬಜಾಜ್ ಪಲ್ಸರ್ ಬೈಕ್ ಬೈಕ್ ಹಾಗೂ ಪಿಕಪ್ ವಾಹನ ಡಿಕ್ಕಿಯಾಗಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ.

ಮೃತಪಟ್ಟ ಯುವಕನನ್ನು ಬದಿಯಡ್ಕ ಕಿನ್ನಿಮಾಣಿ ದೈವಸ್ಥಾನದ ಹತ್ತಿರದ ನಿವಾಸಿ, ಬದಿಯಡ್ಕ ಪೇಪರ್ ಸ್ಟಾಲ್‌ನ ರಾಮಚಂದ್ರ ಎಂಬವರ ಪುತ್ರ ಸಂದೇಶ್ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಲಾಗಿದೆ. ಸಂದೇಶ್ ಅವರು ಶಿಲ್ಪಿ ಆಗಿದ್ದರು. ಕೆಲವು ಸಮಯಗಳಿಂದ ಟಿಪ್ಪರ್ ಡ್ರೈವರ್ ಆಗಿದ್ದರು. ಬಿಜೆಪಿ ಕಾರ್ಯಕರ್ತ ಆಗಿ ಗುರುತಿಸಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave A Reply