Viral Video : ಶಾಲೆಯಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ ವೀಡಿಯೊ ವೈರಲ್ | ಏನಿದು ಅಸಭ್ಯ…

ಮಕ್ಕಳು ಶಾಲೆಗೆ ಹೋದರೆ ಬುದ್ಧಿ ಒಳ್ಳೆಯದಾಗುತ್ತೆ. ಚೆನ್ನಾಗಿ ಕಲಿತು ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂಬ ಮಾತು ಎಲ್ಲ ತಂದೆ ತಾಯಿಗಳದ್ದು.

 

ಹಾಗಾಗಿಯೇ, ಶಾಲೆಯನ್ನು ವಿದ್ಯಾಮಂದಿರ, ಸರಸ್ವತಿ ಮಂದಿರ ಎಂದು ಕರೆಯುವುದು. ಶಾಲೆ ಎಂದರೆ ಅದು ಒಂದು ದೇವಸ್ಥಾನಕ್ಕೆ ಸಮ. ಸಮಚಿತ್ತ ಮನಸ್ಸಿನಿಂದ ಓದಿ ಕಲಿತು ಉತ್ತಮ ಮನುಷ್ಯರನ್ನಾಗಿ ಮಾಡಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುವ ಕೆಲಸ ಶಾಲೆಯದ್ದು. ಅದೇ ಕಾರಣಕ್ಕೆ ಮಕ್ಕಳಿಗೆ ಶಾಲೆ ಒಳಗೆ ಹೋಗಬೇಕಾದರೆ ಕೈ ಮುಗಿದು ತಲೆ ಬಾಗಿ ಹೋಗಬೇಕು ಎಂದು ಹೇಳಿಕೊಡಲಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇನೆಂದರೆ ಶಾಲೆಗಳಲ್ಲಿ, ತರಗತಿಗಳಲ್ಲಿ ಮಕ್ಕಳು ತಮ್ಮ ದುರ್ವರ್ತನೆ ಮಾಡಲಾರಂಭಿಸಿದ್ದಾರೆ. ಅದೇನೆಂದರೆ ಈ ಪ್ರೀತಿ ಪ್ರೇಮದ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸಲು ಶುರು ಮಾಡಲು ತೊಡಗಿದ್ದಾರೆ. ನಾವು ಎಂತಹ ಪುಣ್ಯ ಸ್ಥಳದಲ್ಲಿ ಇದ್ದೀವಿ ಎನ್ನುವುದನ್ನು ಕೂಡಾ ತಿಳಿಯದೆ ಮೈಮರೆತು ಕೆಲವೊಂದು ಆಟಾಟೋಪಗಳನ್ನು ಮಾಡಲು ಶುರು ಮಾಡುತ್ತಾರೆ ವಿದ್ಯಾರ್ಥಿಗಳು.

ಹದಿ ಹರೆಯದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಆಕರ್ಷಣೆ ಎಲ್ಲವೂ ಸಹಜ. ಅದು ಇತಿ ಮಿತಿಯಲ್ಲಿದ್ದರೆ ಚೆಂದ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಮಾತ್ರ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ಶಿಕ್ಷಕರು ಬಾರದೆ ಹೋದಾಗ, ಅಥವಾ ಬೇರೆ ಬೇರೆ ಕಾರಣಗಳಿಗೆ ವಿದ್ಯಾರ್ಥಿಗಳಿಗೆ ಫ್ರೀ ಪೀರಿಯೇಡ್ ಸಿಗುತ್ತದೆ. ಆದರೆ ಈ ಅವಧಿಯಲ್ಲಿಯೂ ವಿದ್ಯಾರ್ಥಿಗಳು ಏನು ಮಾಡುತ್ತಿರುತ್ತಾರೆ ಎನ್ನುವುದರ ಬಗ್ಗೆ ಶಾಲಾ ಸಿಬ್ಬಂದಿ ಗಮನ ಹರಿಸುವ ಅಗತ್ಯವಿದೆ. ವಿದ್ಯಾರ್ಥಿಗಳ ಇಂಥಹ ವರ್ತನೆಗೆ ಅವರೆಷ್ಟು ಜವಾಬ್ದಾರರೋ, ಅವರ ನಡವಳಿಕೆಯನ್ನು ಗಮನಿಸದೆ ಇರುವ ಶಾಲಾ ಶಿಕ್ಷಕರು, ಶಾಲಾ ಸಿಬ್ಬಂದಿ ಕೂಡಾ ಅಷ್ಟೇ ಜವಾಬ್ದಾರರು.

ಈ ವೀಡಿಯೋದಲ್ಲಿ ಓರ್ವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಶಾಲೆಯ ಬಾಗಿಲ ಬಳಿ ನಿಂತು ಮುದ್ದಾಡುತ್ತಾ, ಲಲ್ಲೆಗೆರೆಯುತ್ತಾ ಯಾರ ಭಯನೂ ಇಲ್ಲದೇ ಈ ದುರ್ವತನೆಯಲ್ಲಿ ತೊಡಗಿರುವ ವೀಡಿಯೋ ವೈರಲ್ ಆಗಿದೆ.

https://www.instagram.com/reel/CivIuLcgLd1/?utm_source=ig_web_copy_link

Leave A Reply

Your email address will not be published.