Smelly Feet : ಶೂ ಅಥವಾ ಚಪ್ಪಲಿ ಧರಿಸಿದರೆ ಕಾಲಿನಿಂದ ಬರುವ ದುರ್ವಾಸನೆ ನಿವಾರಣೆಗೆ ಸುಲಭ ಟ್ರಿಕ್ಸ್ ಇಲ್ಲಿದೆ!!!

ನಾವು ಧರಿಸುವ ಉಡುಗೆ – ತೊಡುಗೆಗಳು ಹೆಚ್ಚಿನ ಮೆರುಗು ನೀಡುವುದು ಸುಳ್ಳಲ್ಲ. ಹಾಗಾಗಿ ಹೆಚ್ಚಿನವರು ಧರಿಸುವ ಬಟ್ಟೆಯಿಂದ ಹಿಡಿದು ಹಾಕುವ ಚಪ್ಪಲಿಯವರೆಗೂ ವಿಶೇಷ ಗಮನ ಕೊಡುವುದು ಸಾಮಾನ್ಯ. ಆದರೆ ದಿನವಿಡೀ ಶೂ, ಸಾಕ್ಸ್ ಹಾಕಿಕೊಳ್ಳುವ ಅಭ್ಯಾಸದಿಂದ ಹೆಚ್ಚಿನವರಿಗೆ ಕಾಲಿನಲ್ಲಿ ದುರ್ವಾಸನೆ ಬರುವ ಸಮಸ್ಯೆಯಿದೆ. ಇದಕ್ಕೆ ಮನೆಯಲ್ಲೇ ಸರಳ ವಿಧಾನಗಳನ್ನು ಅನುಸರಿಸಿದರೆ ಪರಿಹಾರ ಕಂಡುಕೊಳ್ಳಬಹುದು.

 

ಇಡೀ ದಿನ ಕಾಲು ಸಾಕ್ಸ್ ಅಥವಾ ಶೂ, ಚಪ್ಪಲಿಗಳಿಂದ ಮುಚ್ಚಿದ್ದರೆ ಅಲ್ಲಿ ಸುಲಭವಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. ಕಾಲಿನ ಉಷ್ಣತೆ ಹಾಗೂ ತೇವಾಂಶ ಕಾಲಿನಲ್ಲಿ ವಾಸನೆಯನ್ನು ಉಂಟುಮಾಡಬಹುದು. ಪಾದಗಳಿಂದ ಬರುವ ಈ ವಾಸನೆಯನ್ನು ಬ್ರೋಮಿಹೈಡ್ರೋಸಿಸ್ ಎಂದೂ ಕರೆಯಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಜನರು ತಮ್ಮ ಶೂ ತೆಗೆದ ತಕ್ಷಣ ವಾಸನೆ ಸುತ್ತಲೂ ಹರಡಿ ಮುಜುಗರಕ್ಕೆ ಈಡಾಗುವ ಸಾಧ್ಯತೆ ಹೆಚ್ಚಿದೆ.

ಕೆಲವರು ಬೂಟು, ಚಪ್ಪಲಿಗಳು ಏನನ್ನೇ ಧರಿಸಿ ಸ್ವಲ್ಪ ದೂರ ನಡೆದರೂ ಕೂಡ ದುರ್ವಾಸನೆ ಬರುತ್ತದೆ. ಕಾಲಿನ ಪಾದಗಳಲ್ಲಿ ಹೆಪ್ಪುಗಟ್ಟಿದ ಬ್ಯಾಕ್ಟೀರಿಯಾದಿಂದ ಈ ವಾಸನೆ ಬರುವುದಲ್ಲದೆ, ವ್ಯಕ್ತಿ ಅತಿಯಾಗಿ ಬೆವರಿದರೂ ಕೂಡ ಪಾದಗಳಿಂದ ದುರ್ವಾಸನೆಯ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಈ ಸಮಸ್ಯೆ ಪರಿಹರಿಸಲು ಶೂ ಹಾಗೂ ಸಾಕ್ಸ್ ಗಳನ್ನು ಶುಚಿಯಾಗಿಡಬೇಕು. ಇದಲ್ಲದೆ, ಹಾರ್ಮೋನ್ ಗಳ ತೊಂದರೆ ಅತಿಯಾದ ಒತ್ತಡ, ಚಿಕಿತ್ಸೆಗಳೂ ಕೂಡ ಕಾಲಿನಲ್ಲಿ ಉಂಟಾಗುವ ವಾಸನೆಗಳಿಗೆ ಕಾರಣವಾಗಬಹುದು.

ಪಾದಗಳ ಸ್ವಚ್ಛತೆ ಕಡೆ ಗಮನ ನೀಡದಿರುವುದು, ಸೂಕ್ತವಲ್ಲದ ಪಾದರಕ್ಷೆ ನಡೆಸುವುದು, ತೇವವಾದ ಶೂ ಧರಿಸುವುದು, ಪ್ರತಿದಿನ ಒಂದೇ ಶೂ ಧರಿಸಿಸುವುದು, ಸಾಕ್ಸ್ ಬಲಾಯಿಸದಿರುವುದು ಇವೆಲ್ಲಾ ಪಾದಗಳು ದುರ್ವಾಸನೆ ಬೀರಲು ಪ್ರಮುಖ ಕಾರಣಗಳಾಗಿದ್ದು, ಮನೆಗೆ ಬಂದು ಪಾದರಕ್ಷೆ ಕಳಚಿದ ತಕ್ಷಣ ಕಾಲು ತೊಳೆಯುವ ಅಭ್ಯಾಸ ಪಾಲಿಸದಿದ್ದರೆ ಕೂಡ ಪಾದ ದುರ್ವಾಸನೆ ಬೀರುವುದು.

ಸರಳ ವಿಧಾನಗಳನ್ನು ಅನುಸರಿಸಿದರೆ ಪರಿಹಾರ ಕಂಡುಕೊಳ್ಳಬಹುದು.
ಸ್ವಲ್ಪ ಬಿಸಿ ನೀರಿಗೆ ಅಡಿಗೆ ಸೋಡವನ್ನು ಬೆರೆಸಿ ಕಾಲನ್ನು ತೊಳೆದರೆ ವಾಸನೆಯನ್ನು ಹೋಗಲಾಡಿಸಬಹುದು. ಕಾಲಿನ ದುರ್ಗಂಧವನ್ನು ಹೋಗಲಾಡಿಸಲು ಸಾಕ್ಸನ್ನು ವಿನೆಗರ್ ಬೆರೆಸಿದ ನೀರಿನಲ್ಲಿ ಅದ್ದು ತೊಳೆದರೆ ವಾಸನೆ ದೂರವಾಗುತ್ತದೆ. ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಕಪ್ ವಿನೆಗರ್ ಹಾಕಿ ಆ ಬಕೆಟ್ನಲ್ಲಿ ಪಾದಗಳನ್ನು ಸ್ವಲ್ಪ ಸಮಯದವರೆಗೆ ಮುಳುಗಿಸಿ 10 ರಿಂದ 15 ನಿಮಿಷಗಳ ನಂತರ ಪಾದಗಳನ್ನು ಒರೆಸಿದರೆ ದುರ್ನಾತ ಕಡಿಮೆಯಾಗುತ್ತದೆ.

ವಾಸನೆಯನ್ನು ತೆಗೆದುಹಾಕಲು ಉಪ್ಪು ನೀರು ಕೆಲಸ ಮಾಡುತ್ತದೆ. ಪ್ರತಿದಿನ ಕೆಲಸದಿಂದ ಬಂದ ಮೇಲೆ ಸ್ವಲ್ಪ ಹೊತ್ತು ಪಾದಗಳನ್ನು ಉಪ್ಪು ನೀರಿನಿಂದ ತೊಳೆದರೆ ಪಾದಗಳಿಂದ ಬರುವ ವಾಸನೆಯನ್ನು ಸ್ವಲ್ಪ ಮಟ್ಟಿಗೆ ಹೋಗಲಾಡಿಸಬಹುದು. ಇದಕ್ಕಾಗಿ ಅರ್ಧ ಲೀಟರ್ ನೀರಿಗೆ ಅರ್ಧ ಕಪ್ ಉಪ್ಪನ್ನು ಹಾಕಿ ಅದರಲ್ಲಿ ಕಾಲಿಟ್ಟು, 15 ರಿಂದ 20 ನಿಮಿಷಗಳ ನಂತರ ಪಾದಗಳನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು.

ಲ್ಯಾವೆಂಡರ್ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿ ಮಸಾಜ್‌ ಮಾಡಿದರೆ ಪಾದಗಳು ದುರ್ವಾಸನೆ ಬೀರುವ ಬ್ಯಾಕ್ಟೀರಿಯಾಗಳನ್ನು ಕೊಂದು ಪರಿಹಾರ ನೀಡುತ್ತದೆ. ಪಾದದ ವಾಸನೆ ಹೋಗಲಾಡಿಸಲು ವೈದ್ಯರ ಸೂಚನೆಯ ಮೇರೆಗೆ ಆ್ಯಂಟಿಬ್ಯಾಕ್ಟೀರಿಯಲ್ ಸೋಪಿನ ಬಳಕೆ ಮಾಡಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಪುದೀನಾ ಎಲೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಸಕ್ಕರೆ ಮಿಶ್ರ ಮಾಡಿ ಸ್ಕ್ರಬ್ ಮಾಡಿದರೆ ಇದರಿಂದ ಪಾದಗಳನ್ನು ಎಕ್ಸ್‌ಫೋಲೆಟ್‌ ಮಾಡಿದಂತಾಗಿ, ದುರ್ವಾಸನೆ ಬೀರುವ ಬ್ಯಾಕ್ಟಿರಿಯಾ ನಾಶವಾಗುವುದು.

ಬೂಟುಗಳು ಮತ್ತು ಸಾಕ್ಸ್‌ಗಳನ್ನು ಸ್ವಚ್ಛವಾಗಿಡುವುದರ ಜೊತೆಗೆ ಚರ್ಮದ ಬೂಟುಗಳನ್ನು ಸೂರ್ಯನ ಬೆಳಕಿಗೆ ಸ್ವಲ್ಪ ಹೊತ್ತು ಇಡುವುದು ಒಳ್ಳೆಯದು.ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ಬಿಸಿ ನೀರು ಹಾಕಿ ಅದಕ್ಕೆ ಬೇಕಿಂಗ್ ಸೋಡಾ ಹಾಗೂ ನಿಂಬೆ ರಸವನ್ನು ಬೆರೆಸಿ ಅದರಲ್ಲಿ ಪಾದಗಳನ್ನು 10 ನಿಮಿಷ ಇಡುವ ಅಭ್ಯಾಸ ವಾರದಲ್ಲಿ ಒಮ್ಮೆ ಮಾಡಿದರೆ, ಪಾದಗಳು ದುರ್ವಾಸನೆ ಬೀರುವುದನ್ನು ತಡೆಗಟ್ಟಬಹುದು. ಹೀಗೆ ಸರಳ ವಿಧಾನಗಳನ್ನು ಬಳಸಿ ಪಾದ ದುರ್ವಾಸನೆ ಬೀರುವುದನ್ನು ತಪ್ಪಿಸಬಹುದು.

Leave A Reply

Your email address will not be published.