ನೀವು ಕೂಡ ಮೊಬೈಲ್ ಬಳಕೆಗೆ ಅಡಿಕ್ಟ್ ಆಗಿದ್ದೀರಾ? | ಹಾಗಿದ್ರೆ, ಈ ಸಮಸ್ಯೆ ಎದುರಾಗೋದು ಗ್ಯಾರಂಟಿ!

ಕಾಲ ಹೇಗೆ ಬದಲಾಗಿದೆ ಅಂದ್ರೆ, ಮೊದಲೆಲ್ಲ ಯಾರ ಜೊತೆ ಮೊಬೈಲ್ ಇದೆ ಅನ್ನೋ ಪ್ರಶ್ನೆ ಕೇಳಬೇಕಾಗಿತ್ತು. ಆದ್ರೆ, ಇದೀಗ ಯಾರ ಜೊತೆ ಇಲ್ಲ ಅನ್ನುವ ಮಟ್ಟಿಗೆ ಬದಲಾವಣೆಯಾಗಿದೆ. ಯಾಕಂದ್ರೆ ಇಂದು ಮೊಬೈಲ್ ಬಳಸದ ಜನಗಳೇ ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ಜೊತೆನೂ ಮೊಬೈಲ್ ಇದೆ. ಮೊಬೈಲ್ ಇಲ್ಲ ಅಂದಾಗ ಒಮ್ಮೆ ಶಾಕ್ ಆಗುವಂತಹ ಪರಿಸ್ಥಿತಿ.

ಆದ್ರೆ, ವಿಷಯ ಏನಪ್ಪಾ ಅಂದ್ರೆ, ಈ ಮೊಬೈಲ್ ನಮ್ಮ ಆರೋಗ್ಯಕ್ಕೆ ಹೇಗೆ ತೊಂದರೆ ಬೀಳುತ್ತೆ ಅನ್ನುವಂತದ್ದು. ಕೆಲವರು ಉಪಯೋಗಕ್ಕೆ ತಕ್ಕಂತೆ ಮೊಬೈಲ್ ಬಳಸಿದರೆ ಇನ್ನೂ ಕೆಲವರು ಅದರಲ್ಲೇ ನೇತಾಡುತ್ತಾ ಇರುತ್ತಾರೆ. ಇದೇ ನೋಡಿ ಸಮಸ್ಯೆ ಆಗಿದ್ದು. ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಿದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬುದನ್ನು ಮುಂದಕ್ಕೆ ಓದಿ..

ಅತೀ ಹೆಚ್ಚು ಮೊಬೈಲ್ ಬಳಸುವವರಲ್ಲಿ ಕಾರ್ಡಿಯೋ-ವಿಷಕಾರಿ ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಶೇ.70 ರಷ್ಟು ಯುವಕ- ಯುವತಿಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದ ಮಾಹಿತಿ. ಈ ಸಮಸ್ಯೆಗೆ ಒಳಗಾದವರು ಯಾವೆಲ್ಲ ಲಕ್ಷಣಗಳನ್ನು ಎದುರಿಸುತ್ತಾರೆ ಎಂಬುದನ್ನು ಮನಃಶಾಸ್ತ್ರಜ್ಞರು ತಿಳಿಸಿದ್ದಾರೆ ನೋಡಿ..

ಸ್ಮಾರ್ಟ್ ಫೋನ್ ಗಳು ಹಾರ್ಮೋನ್ಸ್ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಆದ್ರೆ ಜಡವಾದ ಜೀವನ ಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ ಶುರುವಾಗುತ್ತದೆ. ಒಂದೇ ಪೊಸಿಶನ್ ನಲ್ಲಿ ಬಹಳ ಹೊತ್ತು ಕೂರುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ತೂಕ ಹೆಚ್ಚಾಗುವುದರ ಜೊತೆಗೆ ಯುವತಿಯರಲ್ಲಿ ಪಾಲಿಸಿಸ್ಟಿಕ್ ಓವರಿಯನ್ ರೋಗ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಒಂದೇ ಚಟುವಟಿಕೆಗೆ ಮೆದುಳನ್ನು ಮಿತಿಮೀರಿ ಬಳಸುವುದರಿಂದ ದೇಹದ ಉಳಿದ ಅಂಗಾಂಗಗಳ ಆಯಕ್ಟಿವಿಟಿ ಕುಂಠಿತವಾಗಬಹುದು. ಇದರಿಂದ ಹಾರ್ಮೋನುಗಳಲ್ಲೂ ವ್ಯತ್ಯಾಸವಾಗಿ ನಿದ್ರಾಹೀನತೆ ಕಾಣಿಸಿಕೊಳ್ಳುತ್ತದೆ.

ಒತ್ತಡದ ನಡುವೆ ಹಾರ್ಮೋನುಗಳು ದೇಹವನ್ನು ರಕ್ಷಿಸಲು ಶ್ರಮಿಸುವುದರಿಂದ ಇಂಬ್ಯಾಲೆನ್ಸ್ ಉಂಟಾಗುತ್ತದೆ. ಹಾಗಾಗಿ ಮೊಬೈಲ್ ಚಟದಿಂದ ದೀರ್ಘಕಾಲದ ಖಾಯಿಲೆ ನಿಮ್ಮನ್ನು ಆವರಿಸಿಕೊಳ್ಳಬಹುದು. ಸಕ್ಕರೆ ಖಾಯಿಲೆ, ಫರ್ಟಿಲಿಟಿ ಸಮಸ್ಯೆ ಹಾಗೂ ಕಿಬ್ಬೊಟ್ಟೆಯ ಸ್ಥೂಲಕಾಯ ಬರುವ ಸಾಧ್ಯತೆ ಇದೆ. ದಿನಕ್ಕೆ 6-8 ಗಂಟೆಗೂ ಅಧಿಕ ಸಮಯ ಮೊಬೈಲ್ ಬಳಸುವುದು ಕೂಡ ಒಂದು ಖಾಯಿಲೆ. ಅತಿಯಾದ ಮೊಬೈಲ್ ಬಳಕೆ ಕೂಡ ಒಂದು ರೋಗ ಎನ್ನುತ್ತಾರೆ ವೈದ್ಯರು.

ಅಷ್ಟೇ ಅಲ್ಲದೆ, ಕ್ಷುಲ್ಲಕ ಕಾರಣಕ್ಕೆ ಜಗಳ ಇವೆಲ್ಲವೂ ಒತ್ತಡದ ಲಕ್ಷಣಗಳು. ಚಿಕ್ಕ ಚಿಕ್ಕ ವಿಷಯಗಳನ್ನು ಹ್ಯಾಂಡಲ್ ಮಾಡಲಾಗದೆ ಒದ್ದಾಡೋದು, ಹೆಚ್ಚಿನ ಆತಂಕ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಕೂಡ ಒತ್ತಡ ಹೆಚ್ಚಾಗಲು ಒಂದು ಪ್ರಮುಖ ಕಾರಣ. ಹೀಗಾಗಿ, ಮೊಬೈಲ್ ಚಟದ ರೋಗವು ನಿಮ್ಮನ್ನು ಅವರಿಸುವ ಮೊದಲು ಜಾಗೃತರಾಗಿರಿ.. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ…

Leave A Reply

Your email address will not be published.