ಉಪ್ಪಿನಂಗಡಿಯ ಕೂಟೇಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಲಾರಿ

ಪುತ್ತೂರು :ಉಪ್ಪಿನಂಗಡಿಯ ಕೂಟೇಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ.

 

ಲಾರಿಯಲ್ಲಿದ್ದ ಚಾಲಕ ಸೇರಿದಂತೆ ಲಾರಿಯಲ್ಲಿದ್ದ ನಾಲ್ವರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಲಾರಿಯ ಡೀಸೆಲ್ ಟ್ಯಾಂಕ್ ಒಡೆದು ರಸ್ತೆಯಲ್ಲಿ ಡೀಸೆಲ್ ಸೋರಿಕೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ 75 ನಲ್ಲಿ ಚತುಷ್ಪತ ಕಾಮಗಾರಿ ನಡೆಸುವ ANR ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು ಲಾರಿಯಲ್ಲಿ ಮಧ್ಯಪ್ರದೇಶ ಮೂಲದ ಚಾಲಕ ನಾರಾಯಣ್, ಕ್ಲೀನರ್ ಪುಷ್ಟೇಂದ್ರ ಹಾಗೂ ಇತರ ಇಬ್ಬರಿದ್ದರು. ಇದು ಕಾಂಕ್ರೀಟ್ ಹಾಕುವ ಮಿಶಿನ್ ನನ್ನು ಹೊಂದಿದ್ದ ಲಾರಿಯಾಗಿದ್ದು ಇದು 34 ನೆಕ್ಕಿಲಾಡಿ ಬಳಿಯ ಕುಮಾರಧಾರ ನದಿಗೆ ನಿರ್ಮಾಣವಾಗುತ್ತಿರುವ ನೂತನ ಸೇತುವೆಯ ಕಾಮಗಾರಿ ಮುಗಿಸಿ ನೆಲ್ಯಾಡಿ ಕಡೆ ಹೋಗುತ್ತಿತ್ತು. ಈ ಸಂದರ್ಭ ಅತೀ ವೇಗದಿಂದ ಬಂದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೂಟೇಲು ಬಳಿ ಮಗುಚಿಬಿದ್ದಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.