Alert : ತಲೆದಿಂಬಿನ ಕೆಳಗೆ ಫೋನ್ ಇಟ್ಟು ಮಲಗೋ ಅಭ್ಯಾಸ ಇದೆಯೇ ? ಅಪಾಯ ಕಟ್ಟಿಟ್ಟ ಬುತ್ತಿ!!!

ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ದಿನದ ಆರಂಭದಿಂದ ದಿನಾಂತ್ಯದವರೆಗೂ ಜೊತೆಯಾಗಿದ್ದು, ಅರೆ ಕ್ಷಣವೂ ಬಿಟ್ಟಿರಲಾಗದಷ್ಟು ಜನಜೀವನದ ಜೊತೆ ಬೆಸೆದುಕೊಂಡಿದೆ ಎಂದರೂ ತಪ್ಪಾಗದು.

 

ಮೊಬೈಲ್ ರಿಂಗಣಿಸಿದರೆ, ಇಲ್ಲವೆ ಬೇಗ ಏಳಲು ಅಲಾರಂ ಇಡಲು , ಹೆಚ್ಚಿನವರು ದಿಂಬಿನ ಕೆಳಗೆ ಫೋನ್ ಇಟ್ಟು ಮಲಗುವ ಪರಿಪಾಠ ಇಂದಿಗೂ ಹೆಚ್ಚಿನವರಿಗಿದೆ. ಆದರೆ, ಈ ರೀತಿ ಮಲಗುವುದು ತುಂಬಾ ಅಪಾಯಕಾರಿಯಾಗಿದೆ. ಮೊಬೈಲ್‌ ಬಳಸುವ ವೇಳೆ ನಾವು ಮಾಡುವ ಕೆಲವೊಂದು ತಪ್ಪುಗಳು, ನಮ್ಮ ಪ್ರಾಣಕ್ಕೆ ಮುಳುವಾಗಬಹುದು. ಇತ್ತೀಚೆಗೆ ಹಲವು ಫೋನ್ ಸ್ಫೋಟಗೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥಹ ಘಟನೆಗಳು ಹೆಚ್ಚಾಗಿ ಬಳಕೆದಾರರ ತಪ್ಪಿನಿಂದಲೇ ನಡೆಯುತ್ತಿದೆ ಎಂಬ ಅಂಶವನ್ನು ಗಮನಿಸಲೇಬೇಕು.

ಬೆಳಿಗ್ಗೆ ಎದ್ದ ಕೂಡಲೇ ಫೋನ್​​ ಬಳಸುವ ಅಭ್ಯಾಸ ಜೊತೆಗೆ ರಾತ್ರಿ ಮಲಗುವಾಗ ಕೂಡ ಮೊಬೈಲ್ ನೋಡಿಕೊಂಡು ಇರುವುದರಿಂದ ನಿದ್ರಾಹೀನತೆ,ಕಣ್ಣಿನ ಮೇಲೂ ಪ್ರಭಾವ ಬೀರುತ್ತದೆ. ಹೀಗೆ ರಾತ್ರಿ ಮೊಬೈಲ್ ಬಳಸಿ, ಮಲಗುವಾಗ ದಿಂಬಿನ ಅಡಿಯಲ್ಲಿ ಇಟ್ಟು ಮಲಗುವುದರಿಂದ ಅಪಾಯವನ್ನು ಆಹ್ವಾನಿಸಿದಂತೆ ಎಂಬುದನ್ನು ಮರೆಯಬಾರದು. 2011 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಗಳನ್ನು ಮಾಡಿದ್ದು, ಮೊಬೈಲನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ, ರೇಡಿಯೊ ಆವರ್ತನವು ನಿದ್ರೆಗೆ ಅಡ್ಡಿಯಾಗುತ್ತದೆ ಅಲ್ಲದೆ ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಇದಲ್ಲದೆ ಹೆಚ್ಚಿನವರಿಗೆ ನೀಲಿ ಬೆಳಕಿನಿಂದ ತೊಂದರೆಗೆ ಈಡಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪದೇ ಪದೇ ಫೋನ್‌ನ ನೀಲಿ ಬೆಳಕನ್ನು ಕತ್ತಲೆಯಲ್ಲಿ ನೋಡುವುದರಿಂದ ಕಣ್ಣಿಗೆ ಹಾನಿಯಾಗುತ್ತದೆ. ಸಂಶೋಧನೆಯ ಪ್ರಕಾರ, ಫೋನ್ ರಿಂಗಣಿಸುವುದು ನಮ್ಮ ಸಂಪೂರ್ಣ ನಿದ್ರೆಯನ್ನು ಹಾಳು ಮಾಡುತ್ತದೆ. ಅದರ ರೇಡಿಯೊ ಆವರ್ತನವು ನಿದ್ರೆಯ ಮಾದರಿಯನ್ನು ಬದಲಾಯಿಸುತ್ತದೆ.

ಫೋನ್​ನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವ ದೊಡ್ಡ ಅಪಾಯವೆಂದರೆ ಮೊಬೈಲ್ ಫೋನ್ ಬಿಸಿಯಾಗಿರುವಾಗ ಮತ್ತು ಅದನ್ನು ದಿಂಬಿನ ಕೆಳಗೆ ಇಟ್ಟ ನಂತರ ಸ್ಫೋಟಗೊಳ್ಳುವ ಇಲ್ಲವೇ ಬೆಂಕಿಯ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ತಮ್ಮ ಬಳಿಯೇ ಮೊಬೈಲ್ ಚಾರ್ಜಿಂಗ್‌ ನಲ್ಲಿಟ್ಟು ಮಲಗುವ ಅಭ್ಯಾಸ ತುಂಬಾ ಅಪಾಯಕಾರಿಯಾಗಿದ್ದು, ಅನಾಹುತಗಳು ಜರುಗುವ ಸಾಧ್ಯತೆ ಹೆಚ್ಚಿದೆ.

ಇತ್ತೀಚಿಗೆ ಶರ್ಟ್ ಜೇಬಿನಲ್ಲಿ ಇಟ್ಟಿದ್ದ ಫೋನ್‌ಗಳು ಸ್ಫೋಟಗೊಂಡ ಪ್ರಕರಣಗಳು ನಡೆಯುತ್ತಿವೆ . ಅಂಗಿಯ ಜೇಬಿನಲ್ಲಿ ಮೊಬೈಲ್ ಫೋನ್ ಇಡುವ ಅಭ್ಯಾಸವನ್ನು ಬದಲಿಸುವುದು ಒಳ್ಳೆಯದು. ಮೊಬೈಲ್ ಚಾರ್ಜ್‌ಗಾಗಿ ಲೋಕಲ್ ಚಾರ್ಜರ್ ಅನ್ನು ಬಳಸಬಾರದು. ಯಾವಾಗಲೂ ಮೊಬೈಲ್‌ನ ಮೂಲ ಚಾರ್ಜರ್ ಅನ್ನು ಬಳಸಬೇಕು. ಕಳಪೆ ಗುಣಟ್ಟದ ಚಾರ್ಜರ್ ಬಳಕೆ ಕೂಡಾ ತೊಂದರೆ ಉಂಟುಮಾಡಬಹುದು.

Leave A Reply

Your email address will not be published.