ಮಂಗಳೂರು : ದಸರಾ ಪ್ರಯುಕ್ತ ಶಾಲಾಮಕ್ಕಳಿಗೆ ನಾಲ್ಕು ದಿನ ಹೆಚ್ಚುವರಿ ರಜೆ ಘೋಷಣೆ

ಮಂಗಳೂರು : ತಾಲೂಕಿನಲ್ಲಿ ದಸರಾ ಸೆಪ್ಟೆಂಬರ್ 26 ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದ್ದು ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಸೆ.28 ರಿಂದ ಅಕ್ಟೋಬರ್ 16ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಆದರೆ ಈ ರಜೆ ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ ಹಾಗೂ ಇದು ಕೇವಲ ಮಂಗಳೂರು ತಾಲೂಕಿಗೆ ಅನ್ವಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ದಸರಾ ರಜೆ ರಾಜ್ಯದಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ ನೀಡಲಾಗಿದೆ. ಮಂಗಳೂರು ನಗರದಲ್ಲಿ ಶಾಲಾ ಕಾಲೇಜುಗಳಿಗೆ ದಸರಾ ಆರಂಭಗೊಳ್ಳುವ ಸಂದರ್ಭದಲ್ಲೇ ರಜೆ ಕೊಡಬೇಕೆಂದು ಆಗ್ರಹ ಇತ್ತೆನ್ನಲಾಗಿದೆ.

ಇದೀಗ ಶಿಕ್ಷಣ ಸಚಿವರು ತಾಲೂಕಿನಲ್ಲಿ ಹೆಚ್ಚುವರಿ ನಾಲ್ಕು ದಿನ ರಜೆ ಘೋಷಿಸಿರುವುದರಿಂದ ಮಂಗಳೂರು ತಾಲೂಕಿನಲ್ಲಿ ಮಾತ್ರ ಸೆ.28 ರಿಂದ ಅಕ್ಟೋಬರ್ 1ರ ತನಕ ಹೆಚ್ಚುವರಿ ರಜೆ ನೀಡಲಾಗಿದೆ. ಈ ಮೂಲಕ ಅಕ್ಟೋಬರ್ 19ರವರೆಗೆ ದಸರಾ ರಜೆ ನೀಡಿದಂತಾಗಿದೆ.

ಹಾಗೆನೇ ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ. ಹಾಗೂ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನೀಡಿರುವ 4 ದಿನಗಳ ರಜೆಯನ್ನು ನವೆಂಬರ್ 2022 ತಿಂಗಳಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Leave A Reply