BBK 9: ‘ಬಿಗ್ ಬಾಸ್ ಕನ್ನಡ 9’ ಬರಲು ರೆಡಿ : ‘ಗಿಣಿರಾಮ’, ‘ಲಕ್ಷಣ’ ಧಾರಾವಾಹಿಗಳ ಸಮಯ ಬದಲಾವಣೆ
ಬಿಗ್ ಬಾಸ್ ಕನ್ನಡ ಓಟಿಟಿ 1 ( Bigg Boss Kannada OTT ) ಕಾರ್ಯಕ್ರಮ ಮುಗಿದಿದ್ದು, ಬಿಗ್ ಬಾಸ್ ಕನ್ನಡ 9 (Bigg Boss Kannada 9) ಕಾರ್ಯಕ್ರಮ ಸೆ.24 ರಂದು ಶನಿವಾರ ಆರಂಭವಾಗಲಿದೆ. ನಾಳೆ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದೆ. ಭಾನುವಾರದಿಂದ ಪ್ರತಿ ರಾತ್ರಿ 9:30ಕ್ಕೆ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಟೆಲಿಕಾಸ್ಟ್ ಆಗಲಿದೆ.
ಕಲರ್ಸ್ ಕನ್ನಡ ( Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿಯ ಸಮಯದಲ್ಲಿ ಬಿಗ್ ಬಾಸ್ ಕನ್ನಡ ಪ್ರಸಾರವಾಗಲಿದೆ.
ಹೀಗಾಗಿ, ಸೆಪ್ಟೆಂಬರ್ 26 ರಿಂದ ‘ಲಕ್ಷಣ’ ಧಾರಾವಾಹಿಯನ್ನು 8:30ಕ್ಕೆ ಪ್ರಸಾರ ಮಾಡಲಾಗುತ್ತದೆ. ಹಾಗೆನೇ ಗಿಣಿರಾಮ’ ಧಾರಾವಾಹಿ 8:30ಕ್ಕೆ ಪ್ರಸಾರವಾಗುತ್ತಿತ್ತು. ಇದೀಗ ಅದೇ ಸಮಯಕ್ಕೆ ‘ಲಕ್ಷಣ’ ಪ್ರಸಾರವಾಗಲಿದೆ. ಹೀಗಾಗಿ ಸೆಪ್ಟೆಂಬರ್ 26 ರಿಂದ ‘ಗಿಣಿರಾಮ’ ಸೀರಿಯಲ್‌ಅನ್ನು 5:30ಕ್ಕೆ ಪ್ರಸಾರ ಮಾಡಲಾಗುವುದು.
ನಮ್ಮನೆ ಯುವರಾಣಿ 2019 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇಲ್ಲಿಯವರೆಗೂ ಸಾವಿರಕ್ಕೂ ಅಧಿಕ ಸಂಚಿಕೆಗಳ ಪ್ರಸಾರವಾಗಿದೆ. ಈಗ ‘ನಮ್ಮನೆ ಯುವರಾಣಿ’ ಧಾರವಾಹಿ ಅಂತ್ಯಗೊಳ್ಳಲಿದೆ. ಸದ್ಯಕ್ಕೆ ಸಂಜೆ 5:30ಕ್ಕೆ ‘ನಮ್ಮನೆ ಯುವರಾಣಿ’ ಧಾರಾವಾಹಿ ಪ್ರಸಾರವಾಗುತ್ತಿದೆ. ನಾಳೆ (ಸೆಪ್ಟೆಂಬರ್ 24) ‘ನಮ್ಮನೆ ಯುವರಾಣಿ’ ಧಾರಾವಾಹಿಯ ಅಂತಿಮ ಸಂಚಿಕೆ ಸಂಜೆ 5:30ಕ್ಕೆ ಟೆಲಿಕಾಸ್ಟ್ ಆಗಲಿದೆ. ‘ನಮ್ಮನೆ ಯುವರಾಣಿ’ ಅಂತ್ಯವಾಗುತ್ತಿರುವುದರಿಂದ ಅದೇ ಸ್ಲಾಟ್‌ನಲ್ಲಿ ‘ಗಿಣಿರಾಮ’ ಸೀರಿಯಲ್ ಪ್ರಸಾರವಾಗಲಿದೆ.
ಇತ್ತೀಚೆಗೆ ಶುರುವಾದ ‘ಕನ್ಯಾಕುಮಾರಿ’ ಧಾರಾವಾಹಿ 300 ಸಂಚಿಕೆಗಳನ್ನು ಪೂರೈಸಿದೆ. ಹಾಗೆನೇ, ಕನ್ಯಾಕುಮಾರಿ ಸೀರಿಯಲ್ ಕೂಡ ಅಂತ್ಯವಾಗಲಿದೆ. ಸೆಪ್ಟೆಂಬರ್ 23 ರಂದು ‘ಕನ್ಯಾಕುಮಾರಿ’ ಧಾರಾವಾಹಿಯ ಕೊನೆಯ ಸಂಚಿಕೆ ರಾತ್ರಿ 10:30ಕ್ಕೆ ಪ್ರಸಾರವಾಗಲಿದೆ.
ಬರೋಬ್ಬರಿ 600 ಸಂಚಿಕೆಗಳನ್ನು ಪೂರೈಸಿರುವ ‘ನನ್ನರಸಿ ರಾಧೆ’ ಧಾರಾವಾಹಿ ಕೂಡಾ ಮುಗಿಯಲಿದೆ.
‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಎಲ್ಲಾ ಸತ್ಯಗಳು ರಿವೀಲ್ ಆಗಿದೆ. ಹಾಗಾಗಿ ಇಂದು ರಾತ್ರಿ 10 ಗಂಟೆಗೆ ಕ್ಲೈಮ್ಯಾಕ್ಸ್ ಸಂಚಿಕೆ ಪ್ರಸಾರವಾಗಲಿದೆ.
ಈ ಬಾರಿ ಪ್ರವೀಣರ ಜೊತೆ ನವೀನರು ;
ಸೀನಿಯರ್ಸ್ ಹಾಗೂ ಹೊಸಬರ ನಡುವಿನ ಹಣಾಹಣಿ ಆಗಿರುವ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಟಾಪ್ 4 ಹಂತ ತಲುಪಿರುವ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯ ಅಯ್ಯರ್ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಕ್ಕೆ ಎಂಟ್ರಿ ಪಡೆದಿದ್ದಾರೆ. ಹಾಗೆನೇ 9 ಮಂದಿ ಸೀನಿಯರ್ಸ್ ಇದ್ದಾರೆ. 9 ಮಂದಿ ಹೊಸ ಕಂಟೆಸ್ಟೆಂಟ್ ಇರಲಿದ್ದಾರೆ. 9 ಮಂದಿ ಸೀನಿಯರ್ಸ್ ಪೈಕಿ ಈಗಾಗಲೇ 4 ಮಂದಿ ಆಯ್ಕೆ ಆಗಿದ್ದಾರೆ.