ಕರಾವಳಿ ಸೇರಿದಂತೆ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರಕ್ಕೆ ಗುಪ್ತಚರ ಇಲಾಖೆ ಸೂಚನೆ | ಹಿಂದೂ ಕಾರ್ಯಕರ್ತರಿಗೆ ಹೈ ಅಲರ್ಟ್‌ಗೆ ಸೂಚನೆ

ಮಂಗಳೂರು : ಕರಾವಳಿ ಸೇರಿದಂತೆ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಸಂಘಪರಿವಾರದ ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮಂದಿಯನ್ನು ಎನ್‌ಐಎ ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದು ಗಲಭೆ ಸಾಧ್ಯತೆಯ ಮುನ್ನೆಚ್ಚರಿಕೆಯಾಗಿ ಅಲರ್ಟ್ ಇರುವಂತೆ ಗುಪ್ತಚರ ಇಲಾಖೆ ರಾಜ್ಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ.

ಹಿಂದೂ ಸಂಘಟನೆಯ ಪ್ರಮುಖರು, ಹಿಂದೂ ಕಾರ್ಯಕರ್ತರಿಗೆ ಸಂದೇಶ ರವಾನಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ಕೆಲವೊಂದು ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಯಕಟ್ಟಿನ ಪ್ರದೇಶಲ್ಲಿ ನಾಕಾಬಂಧಿ ಅಳವಡಿಸಲಾಗಿದೆ.

Leave A Reply