ಹೊಸ ಬಾಳಿಗೆ ಎಂಟ್ರಿ ಕೊಡುವ ಮೊದಲು ರಸ್ತೆ ಗುಂಡಿಗಳ ನಡುವೆ ಫೋಟೋ ಶೂಟ್ ಮಾಡಿಸಿದ ನವ ವಧು!!!

ಫೋಟೋ ತೆಗೆಯುವ ಕ್ರೇಜ್ ಎಲ್ಲರಿಗೂ ಇರುವಂತದ್ದೆ. ಬೇರೆ ಊರಿಗೆ ಹೋದಾಗ ಪರಿಸರದ ನಡುವೆ, ಮದುವೆ, ಎಂಗೇಜ್ಮೆಂಟ್, ನಾಮಕರಣ ಹೀಗೆ ಪ್ರತಿ ಸುಮಧುರ ಕ್ಷಣವನ್ನು ನೆನಪಿನಲ್ಲಿ ಹಚ್ಚ ಹಸಿರಾಗಿ ಉಳಿಸಲು ಫೋಟೋಶೂಟ್ ಮಾಡುವ ಟ್ರೆಂಡ್ ಕಾಮನ್ ಆಗಿರುವ ವಿಚಾರ.

 

ಪ್ರೀ – ವೆಡ್ಡಿಂಗ್, ಎಂಗೇಜ್ಮೆಂಟ್ ಸಮಯದಲ್ಲಿ ಫೋಟೊ ಶೂಟ್ ಮಾಡುವಾಗ ಎಲ್ಲರೂ ವಿಶೇಷ ಗಮನ ಕೊಡುವುದು ಸುತ್ತಲಿನ ಪರಿಸರ, ಕಣ್ಮನ ಸೆಳೆಯುವ ಪ್ರಕೃತಿಯ ಮಡಿಲಲ್ಲಿ, ಈಜುಕೊಳ, ಇಲ್ಲವೇ ಬೀಚ್ , ರೆಸಾರ್ಟ್ , ಹೀಗೆ ವಧು – ವರರ ಅಭಿರುಚಿಗೆ ತಕ್ಕಂತೆ ಕ್ಯಾಮರಾ ಕಣ್ಣಲ್ಲಿ ಫೋಟೋ ಕ್ಲಿಕ್ಕಿಸುವುದು ತಿಳಿದಿರುವ ವಿಷಯವೇ!!..ಹದಗೆಟ್ಟ ರಸ್ತೆಯಲ್ಲಿ ಫೋಟೋ ಕ್ಕಿಕಿಸಿಕೊಂಡರೆ ಹೇಗಿರಬಹುದು? ಊಹಿಸಿದ್ದೀರಾ??

ಕೇರಳದ ವಧುವೊಬ್ಬರು ತಮ್ಮ ಮದುವೆ ಫೋಟೋಶೂಟ್ ಅನ್ನು ರಸ್ತೆ ಗುಂಡಿಗಳ ನಡುವೆ ಮಾಡಿಸಿಕೊಂಡು ವಿಭಿನ್ನ ಶೈಲಿಯಲ್ಲಿ ಸ್ಥಳೀಯಾಡಳಿತದ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ವರ – ವಧು ಪ್ರಕೃತಿಯ ಸುಂದರ ತಾಣಗಳಲ್ಲಿ ತಮ್ಮ ಫೋಟೋ ಶೂಟ್ ಮಾಡಿಸಿಕೊಂಡರೆ, ಕೇರಳದ ವಧು ನೆಪ ಮಾತ್ರಕ್ಕೆ ಹದಗೆಟ್ಟಿರುವ ರಸ್ತೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಕೆಂಪು ಸೀರೆಯುಟ್ಟ ವಧು ಗುಂಡಿ ಗೊಟರುಗಳಿಂದ ಕೂಡಿದ ರಸ್ತೆಯಲ್ಲಿ ನಡೆದು ಬರುವ ವಿಡಿಯೋದಲ್ಲಿ ಫೋಟೋಗ್ರಾಫರ್ ಹದಗೆಟ್ಟ ರಸ್ತೆಯನ್ನೂ ಕೂಡ ಫೋಕಸ್ ಮಾಡಿರುವುದು ವಿಶೇಷ. ಈ ಮೂಲಕ ಸ್ಥಳೀಯಾಡಳಿತಕ್ಕೆ ಚುರುಕು ಮುಟ್ಟಿಸುವ ಪ್ರಯತ್ನಕ್ಕೆ ವಧುವಿನ ನಡೆಗೆ ಮೆಚ್ಚುಗೆ ಸಲ್ಲಿಸಲೇಬೇಕು.

ಹದಗೆಟ್ಟ ರಸ್ತೆಗಳ ಕುರಿತ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಸಾಮಾನ್ಯ. ಆದರೆ, ಹದಗೆಟ್ಟ ರಸ್ತೆ ನಡುವೆ ವಧುವಿನ ಫೋಟೋ ಶೂಟ್ ಮಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ ಜೊತೆಗೆ ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ವಧುವಿನ ಸೃಜನಶೀಲತೆ ಕುರಿತು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಈ ವಿಡಿಯೋಗೆ ವಿಭಿನ್ನ ಕಮೆಂಟ್ ಗಳು ಬರುತ್ತಿದ್ದು, ಸ್ಥಳೀಯಾಡಳಿತ ಎಚ್ಚೆತ್ತು ಕ್ರಮ ಕೈಗೊಂಡರೆ ವಧುವಿನ ಪ್ರಯತ್ನ ಸಾರ್ಥಕವಾಗಬಹುದು.

Leave A Reply

Your email address will not be published.