ಬಟ್ಟೆಯನ್ನು ಹೇಗೇಗೋ ಹೊಲಿದ ಟೈಲರ್ | ಬ್ರ್ಯಾಂಡೆಡ್ ಬಟ್ಟೆಯ ಅಂದ ಕೆಡಿಸಿದ್ದಕ್ಕೆ ಬಿತ್ತು ಭಾರೀ ದಂಡ
ದಿನನಿತ್ಯ ನಾವು ಬಳಸುವ ಉಡುಪುಗಳು ನಮಗೆ ಬೇಕಾದ ವಿನ್ಯಾಸ ಅಗತ್ಯಕ್ಕೆ ತಕ್ಕ ಪಿಟ್ಟಿಂಗ್ ಬೇಕಾದಾಗ ಟೈಲರ್ ನ ಮೊರೆ ಹೋಗುವುದು ವಾಡಿಕೆ. ಆದರೆ, ನಾವು ಕೊಟ್ಟ ಬಟ್ಟೆ ನಾವು ಊಹಿಸಿದ ರೀತಿಯಲ್ಲಿ ಹೊಲಿಯದಿದ್ದರೆ, ಗ್ರಾಹಕನಿಗೆ ಕೋಪ, ನಿರಾಶೆಯಾಗುವುದು ಖಚಿತ. ಅಕಸ್ಮಾತ್ ಬ್ರಾಂಡೆಡ್ ಬಟ್ಟೆ ಹೊಲಿಯಲು ಕೊಟ್ಟಾಗ ಬಟ್ಟೆಯನ್ನು ಕತ್ತರಿಸಿ, ಅದರ ವಿನ್ಯಾಸವೆ ಹಾಳಾಗಿ ಹೋದರೆ ಗ್ರಾಹಕ ಟೈಲರ್ ಗೆ ಬೈಯುದ ಬಿಟ್ಟು ಬೇರೆ ವಿಧಿಯಿಲ್ಲ ಎಂದುಕೊಳ್ಳುವವರೆ ಹೆಚ್ಚು. ಆದರೆ, ಇಲ್ಲೊಬ್ಬ ಟೈಲರ್ ಬ್ರಾಂಡೆಡ್ ಬಟ್ಟೆಯನ್ನು ಗ್ರಾಹಕ ಹೇಳಿದ ಹಾಗೆ ಹೊಲಿಯಲಿಲ್ಲ ಎಂಬ ಕಾರಣದಿಂದ ಗ್ರಾಹಕ ಹಕ್ಕು ನ್ಯಾಯಲಯದ ಮೊರೆ ಹೋಗಿದ್ದು, ಈಹ ನ್ಯಾಯಲಯವು ಆತನಿಗೆ ಬರೋಬ್ಬರಿ 10,000 ದಂಡ ಗೆ ವಿಧಿಸಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ವಿಜಯಪುರದ ನಿವಾಸಿ ರಾಯಣ್ಣ ಗೌಡ ಎಂಬುವರು 2016 ರಲ್ಲಿ ಬೆಂಗಳೂರಿನಲ್ಲಿ 1988 ರೂ. ಗಳ ಬ್ರ್ಯಾಂಡೆಡ್ ಪ್ಯಾಂಟ್ ಬಟ್ಟೆ ಖರೀದಿಸಿ ಅದೇ ಅಂಗಡಿಯ ಟೈಲರ್ ಬಳಿ ಹೊಲಿಯಲು ಕೊಟ್ಟಿದ್ದಾರೆ. ನಂತರ ಒಂದು ವರ್ಷದ ಬಳಿಕ, ಪ್ಯಾಂಟ್ ಕಾಲಿನ ಭಾಗದಲ್ಲಿ ಹರಿದು ಹೋಗಿ ಬಟ್ಟೆವಿನ್ಯಾಸ ಹಾಳಾಗಿದೆ.
ಟೈಲರ್ ಹೊಸ ಪ್ಯಾಂಟ್ ಹೊಲಿದು ಕೊಡುವುದಾಗಿ ಗ್ರಾಹಕನಿಗೆ ಭರವಸೆ ನೀಡಿದ್ದಾನೆ. ಹಾಗಾಗಿ ಕೆಲ ದಿನಗಳ ನಂತರ ಹೋದ ಗ್ರಾಹಕನಿಗೆ ಟೈಲರ್ ಪ್ಯಾಂಟ್ ಹೊಲಿದಿಲ್ಲ ಎಂದು ಸಬೂಬು ನೀಡಿದ್ದಾನೆ. ಹೀಗೆ ಐದಾರು ಬಾರಿ ಹೋದಾಗಲೂ ಕೂಡ ಒಂದಲ್ಲ ಒಂದು, ಸಬೂಬು ನೀಡಿ ಸತಾಯಿಸಿದ ಟೈಲರ್, ರಾಯಣ್ಣನನ್ನು ಅಲೆದಾಡಿಸಿದ್ದಾನೆ. ಇದರಿಂದ ಬೇಸರಗೊಂಡ ರಾಯಣ್ಣ ಮತ್ತೆ ಒಂದು ವರ್ಷದ ಬಳಿಕ ಟೈಲರ್ ನನ್ನು ಸಂಪರ್ಕಿಸಿದಾಗ ಬಟ್ಟೆಯ ಗುಣಮಟ್ಟ ಸರಿ ಇಲ್ಲವೆಂದು ಆರೋಪಿಸಿದ್ದಾನೆ. ಇದರಿಂದ ಬೇಸರಗೊಂಡ ರಾಯಣ್ಣ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
ಗುಣಮಟ್ಟದ ಬಟ್ಟೆ ನೀಡಿದರೂ ಒಂದು ವರ್ಷದಲ್ಲೇ ಬಟ್ಟೆ ಹರಿದು ಹೋಗಿ ವಿನ್ಯಾಸ ಹಾಳಾಗಿದ್ದಲ್ಲದೆ, ಬೇರೆ ಬಟ್ಟೆಯಲ್ಲಿ ಪ್ಯಾಂಟ್ ಹೊಲಿಸಿಕೊಡುವುದಾಗಿ ಭರವಸೆ ನೀಡಿ, ಒಂದು ವರ್ಷದ ಕಾಲ ವಿನಾ ಕಾರಣ ಅಲೆಯುವಂತೆ ಮಾಡಿ, ಗುಣಮಟ್ಟ ಸರಿಯಿಲ್ಲವೆಂದು ದೂರಿದಕ್ಕಾಗಿ, ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು 10,000 ರೂ ದಂಡ ವಿಧಿಸಿದ್ದಾರೆ. ಈ ಮೂಲಕ ನ್ಯಾಯಲಯ ಟೈಲರ್ ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.