ತಾಜ್‌ಮಹಲ್‌ ವೀಕ್ಷಣೆಗೆ ಬಂದಿದ್ದ ಮಹಿಳೆಗೆ ‘ಮಂಗ’ದ ಕಾಟ!!

ತಾಜ್‌ಮಹಲ್‌ ಒಂದು ಅದ್ಭುತವಾದ ಪ್ರವಾಸಿತಾಣವಾಗಿದ್ದು, ಸುಂದರವಾದ ದೃಶ್ಯ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇದೀಗ ತಾಜ್‌ಮಹಲ್ ಗೆ ಆಗಮಿಸೋ ಜನರಿಗೆ ದೊಡ್ಡ ಸಂಕಷ್ಟವೇ ಎದುರಗಿದೆ.

ಹೌದು. ಪ್ರವಾಸಿಗರಿಗೆ ಮಂಗದ ಕಾಟ ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸ್ಪೇನ್ ಮಹಿಳೆಯೊಬ್ಬರು ವಿಶ್ವ ವಿಖ್ಯಾತ ತಾಜ್‌ಮಹಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ವೇಳೆ ಮಂಗಗಳು ದಾಳಿ ನಡೆಸಿವೆ.

ಕಳೆದ 10 ದಿನಗಳಲ್ಲಿ ವಿಶ್ವ ಪಾರಂಪರಿಕ ತಾಣದಲ್ಲಿ ಪ್ರವಾಸಿಗರ ಮೇಲೆ ಮೇಲೆ ಮಂಗಗಳು ದಾಳಿ ನಡೆಸುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ತಾಜ್‌ಮಹಲ್ ಮುಂಭಾಗದ ರಾಯಲ್ ಗೇಟ್ ಬಳಿ ನಿಂತಿದ್ದ ಯುವತಿಗೆ ಮಂಗಗಳ ದಾಳಿಯಿಂದ ಎಡಗಾಲಿಗೆ ಗಾಯಗಳಾಗಿವೆ. ಮಹಿಳೆ ನೋವಿನಿಂದ ಅಳುತ್ತಿರುವ ಮತ್ತು ಛಾಯಾಗ್ರಾಹಕರು ಹಾಗೂ ಸ್ಮಾರಕದ ರಕ್ಷಣಾ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಕುರಿತು ಛಾಯಾಗ್ರಾಹಕ ಯೋಗೇಶ್ ಪರಾಸ್ ಪ್ರತಿಕ್ರಿಯಿಸಿ, “ಬೆಳಿಗ್ಗೆ 7 ಗಂಟೆ ಸುಮಾರಿಗೆ ಮುಖ್ಯ ಸಮಾಧಿ ಬಳಿ ಮಹಿಳೆ ನೋವಿನಿಂದ ಅಳುತ್ತಿರುವುದನ್ನು ನಾನು ನೋಡಿದೆ. ಆಕೆಯ ಮೇಲೆ ಮಂಗಗಳು ದಾಳಿ ಮಾಡಿದವು. ಒಂದು ಆಕೆಯ ಎಡಗಾಲಿಗೆ ಕಚ್ಚಿದೆ. ನಾವು ಮುಲಾಮು ಹಚ್ಚಿ ಗಾಯದ ಭಾಗಕ್ಕೆ ಬ್ಯಾಂಡೇಜ್ ಹಾಕಿದೆವು ಎಂದರು.

ಕೆಲವರು ಮಂಗಗಳೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದರಿಂದ ಸಮಸ್ಯೆ ಎದರಾಗುತ್ತಿದ್ದು, ಪ್ರವಾಸಿಗರು ಮಂಗಗಳಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ. ತಾಜ್‌ಮಹಲ್‌ನ ಎಎಸ್‌ಐನ ಸಂರಕ್ಷಣಾ ಸಹಾಯಕ ರಾಜಕುಮಾರ ವಾಜಪೇಯಿ ಮಾತನಾಡಿ, ಕೋತಿಯ ಚಿತ್ರ ತೆಗೆಯುವಾಗ ಅದು ಮಹಿಳೆಯ ಮೇಲೆ ದಾಳಿ ಮಾಡಿದೆ ಎಂದು ಹೇಳಿದರು. ತಕ್ಷಣವೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಕೋತಿಗಳಿಂದ ಪ್ರವಾಸಿಗರನ್ನು ರಕ್ಷಿಸಲು ಸಿಬ್ಬಂದಿಗಳ ಮೀಸಲು ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Leave A Reply

Your email address will not be published.