ಮಂಗಳೂರು : ಹಾಸ್ಟೆಲ್ ನ ಕಿಟಕಿ ಮುರಿದು ಹಾರಿ ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿನಿಯರು | ನಸುಕಿನಲ್ಲಿ ನಡೆದ ಘಟನೆ, ಪತ್ರ ಬರೆದಿಟ್ಟು ನಾಪತ್ತೆ

ಮಂಗಳೂರು : ಹಾಸ್ಟೆಲ್ ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದಲೇ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಹಾಸ್ಟೆಲ್ ನಿಂದ ಪರಾರಿಯಾಗಿದ್ದಾರೆ.

 

ಬೆಂಗಳೂರು ಮೂಲದ ಯಶಸ್ವಿನಿ, ದಕ್ಷತಾ ಮತ್ತು ಚಿತ್ರದುರ್ಗ ಮೂಲದ ಸಿಂಚನಾ ಪರಾರಿಯಾದ ವಿದ್ಯಾರ್ಥಿನಿಯರು.

ಇಂದು ಮುಂಜಾನೆ ಮೂರು ಗಂಟೆಯ ಸುಮಾರಿಗೆ ಹಾಸ್ಟೆಲ್‌ ಕಿಟಕಿ ಮುರಿದು ಹೊರಕ್ಕೆ ಹಾರಿ, ವಿದ್ಯಾರ್ಥಿನಿಯರು ಪರಾರಿಯಾಗಿದ್ದು ನಿಜಕ್ಕೂ ಆತಂಕ ಮೂಡಿಸಿದೆ.

“ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಅಂತ ಪತ್ರ ಬರೆದಿಟ್ಟು ತೆರಳಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ, ಯಾರ ಉತ್ತೇಜನದಿಂದ ಹೊರ ತೆರಳಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.