Health tips : ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಆಹಾರ ಸೇವಿಸಿ

ಎಲ್ಲ ವಯೋಮಾನದವರಿಗೂ ಕಾಣಿಸುವ ಸಾಮಾನ್ಯ ಸಮಸ್ಯೆ ಮರೆವು. ಗಡಿಬಿಡಿಯಲ್ಲಿ ಆಫೀಸ್ ಗೆ ಹೊರಟಾಗ ಬೈಕ್ ಕೀ ಯನ್ನೋ, ಶಾಲೆಗೆ ಹೋಗುವ ಮಕ್ಕಳು ನೋಟ್ಸ್ ಗಳನ್ನು, ಹೆಂಗೆಳೆಯರು ಟಿವಿ ನೋಡುತ್ತ ಗ್ಯಾಸ್ ನಲ್ಲಿ ಹಾಲಿಟ್ಟು ಅದು ಉಕ್ಕಿ ಚೆಲ್ಲಿ ಹೋದ ಮೇಲೆ ನೆನಪಾಗುವ, ಎಲ್ಲೋ ಇಟ್ಟು ಮತ್ತೆಲ್ಲೋ ಹುಡುಕುವ ಅಜ್ಜನ ಕನ್ನಡಕ ಹೀಗೆ ನಾನಾ ರೀತಿಯಲ್ಲಿ ಮರೆವಿನ ಪ್ರಹಸನ ದಿನಂಪ್ರತಿ ನಡೆಯುತ್ತಿರುತ್ತದೆ. ಪ್ರತಿದಿನ ಸೇವಿಸುವ ಆಹಾರವು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ನಮ್ಮ ಜ್ಞಾಪಕಶಕ್ತಿ ಮತ್ತು ಸ್ಮರಣಶಕ್ತಿ ಮೇಲೂ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಕಾಡುವ ಮರೆವಿನ ಸಮಸ್ಯೆ ಹೋಗಲಾಡಿಸಿ, ಬುದ್ಧಿಶಕ್ತಿ ಚುರುಕುಗೊಳಿಸಲು ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿಯಾಗಿವೆ. ಎಲ್ಲ ಪೋಷಕಾಂಶಗಳನ್ನು ಒಳಗೊಂಡು ಸಮೃದ್ಧವಾಗಿರುವ ಆರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ ಸ್ಮರಣೆಯನ್ನು ಬಲಪಡಿಸುವುದರ ಜೊತೆಗೆ ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ.

 

ದೈನಂದಿನ ಆಹಾರದಲ್ಲಿ ಮೀನುಗಳಾದ ಸಾಲ್ಮನ್, ಟ್ಯೂನ ಮತ್ತು ಕಾಡ್ ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿದ್ದು, ಒಮೆಗಾ -3 ಸ್ಮರಣೆಯನ್ನು ತೀಕ್ಷ್ಣಗೊಳಿಸುವ ಮತ್ತು ಮನಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿಗೆ ಪ್ರಮುಖ ಪೋಷಕಾಂಶಗಳಾಗಿವೆ. ದಾಲ್ಚಿನ್ನಿಅಥವಾ ಚಕ್ಕೆ ಪುಡಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುವುದು, ಜೊತೆಗೆ ಮೈ ಬೊಜ್ಜು ಕೂಡ ಕರಗುತ್ತದೆ.

ದೈನಂದಿನ ಆಹಾರದಲ್ಲಿ ಮೀನುಗಳಾದ ಸಾಲ್ಮನ್, ಟ್ಯೂನ ಮತ್ತು ಕಾಡ್ ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿದೆ. ಬರುವುದಿಲ್ಲ. ಇತರರು ತಮ್ಮ ಸ್ಮರಣೆಯನ್ನು ಸುಧಾರಿಸಲು ಬಯಸುತ್ತಾರೆ. ದೇಹಕ್ಕೆ ಆಹಾರದ ಜೊತೆಗೆ ಮೆದುಳಿಗೆ ಆಹಾರವೂ ಬಹಳ ಮುಖ್ಯ. ಇದಕ್ಕಾಗಿ ಪೌಷ್ಠಿಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನೆನಪಿನ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಿದರೆ ಒಳಿತು.

ತರಕಾರಿಗಳು ಜೀವಸತ್ವಗಳು, ಕಬ್ಬಿಣ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇದು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ಸರಿದೂಗಿಸುತ್ತದೆ. ಪಾಲಕ್, ಕೋಸುಗಡ್ಡೆ, ಹಸಿರು ಎಲೆಗಳ ತರಕಾರಿಗಳು ಮತ್ತು ಕೆಂಪು ತರಕಾರಿಗಳು ಮೆದುಳಿಗೆ ತುಂಬಾ ಒಳ್ಳೆಯದಾಗಿದ್ದು, ಇದನ್ನು ಸೇವಿಸುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.
ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಫೋಲೇಟ್, ಕೋಲೀನ್ ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ. ಕೋಲೀನ್ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಹೆಚ್ಚಿನ ಸೇವನೆಯು ಮೆಮೊರಿ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಹಾಲು ಕುದಿಸಿ, ಅದಕ್ಕೆ ಬಾದಾಮಿ, ಕಲ್ಲು ಸಕ್ಕರೆ ಹಾಕಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುವುದು.
ಧಾನ್ಯಗಳಲ್ಲಿ ಕಂಡುಬರುವ ಫೈಬರ್ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಮತ್ತು ಮಿದುಳಿಗೆ ಅತ್ಯಗತ್ಯ. ಇದು ರಕ್ತದೊತ್ತಡ ನಿಯಂತ್ರಿಸುವುದರ ಜೊತೆಗೆ ಮಿದುಳಿನ ಉರಿಯೂತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳಲು, ಪ್ರತಿದಿನವೂ ಆಹಾರದಲ್ಲಿ ಧಾನ್ಯಗಳನ್ನು ಸೇರಿಸುವುದು ಒಳ್ಳೆಯದು.

ಬಾದಾಮಿ, ವಾಲ್ನಟ್ಸ್, ಒಣದ್ರಾಕ್ಷಿಗಳು ಕ್ಯಾಲ್ಸಿಯಂ, ವಿಟಮಿನ್ಗಳು ಮತ್ತು ಶಕ್ತಿಯಿಂದ ಸಮೃದ್ಧವಾಗಿವೆ. ಈ ಆಹಾರಗಳನ್ನು ಪ್ರತಿದಿನ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಕುಂಬಳಕಾಯಿ ಬೀಜಗಳು ಮತ್ತು ವಿವಿಧ ರೀತಿಯ ಬೀಜಗಳನ್ನು ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.
ಅರಿಶಿನವು ಆಯುರ್ವೇದ ಪರಿಹಾರಗಳಲ್ಲಿ ಬಹಳ ಜನಪ್ರಿಯವಾಗಿದೆ. ಅರಿಶಿನವು ಕರ್ಕ್ಯುಮಿನ್​ನ್ನು ಹೊಂದಿರುತ್ತದೆ. ಇದು ಮೆದುಳಿನ ಕೋಶಗಳಿಗೆ ಒಳ್ಳೆಯದು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅವಕಾಡೊ ನಿರಂತರ ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯೋಜನಕಾರಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಹೆಚ್ಚುವರಿಯಾಗಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ ಯನ್ನು ಹೊಂದಿರುತ್ತದೆ. ಇದಲ್ಲದೆ ಮೆದುಳಿನ ಅರಿವಿನ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ವೃಕ್ಷಾಸನ, ಪ್ರಾಣಯಾಮ ಜ್ಞಾಪಕ ಶಕ್ತಿ, ಏಕಾಗ್ರತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

Leave A Reply

Your email address will not be published.