ಮಹಿಳೆಯರೇ 30 ವರ್ಷ ಆಗುತ್ತಿದ್ದಂತೆ ಮಾಡಿಸಿಕೊಳ್ಳಿ ಈ ಪರೀಕ್ಷೆ | ಇಲ್ಲವಾದಲ್ಲಿ ಎದುರಾಗಬಹುದು ಈ ಸಮಸ್ಯೆ!

ಮನೆ, ವೃತ್ತಿ ಹೀಗೆ ಹಲವಾರು ಜವಾಬ್ದಾರಿಗಳನ್ನು ಹೊಂದಿರುವಂತಹ ಮಹಿಳೆಯು ತನ್ನ ಆರೋಗ್ಯದ ಕಡೆ ಗಮನಹರಿಸುವುದು ಬಹಳ ವಿರಳ. ಅದರಲ್ಲಿಯೂ 30 ವರ್ಷಗಳಾದ ನಂತರ ಆಕೆ ವೈದ್ಯರಲ್ಲಿ ಕೆಲವೊಂದಷ್ಟು ತಪಾಸಣೆಯನ್ನು ಮಾಡಿಸಲೇಬೇಕು. ಇಲ್ಲದಿದ್ದಲ್ಲಿ, ನಾನಾ ರೀತಿಯ ರೋಗರುಚಿನಗಳಿಗೆ ಭಾಗಿಯಾಗುವುದಂತೂ ಖಂಡಿತ. ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ರೋಗಗಳಿಗೆ ಒಳಗಾಗುತ್ತಿರುವುದು ಮಹಿಳೆಯರೇ ಸಂಖ್ಯೆ ಹೆಚ್ಚು. ಅವು ಯಾವೆಲ್ಲ ಅಪಾಯ ಮತ್ತು ಅವುಗಳ ತಪಾಸಣೆ ಎಂದು ತಿಳಿಯೋಣ.

ಭಾರತದಲ್ಲಿ ವರ್ಷಕ್ಕೆ ಶೇಕಡ 80ರಷ್ಟು ಬ್ರೆಸ್ಟ್ ಕ್ಯಾನ್ಸರ್ ಗೆ ತುತ್ತಾಗಿ ಮಹಿಳೆಯರು ಸಾವನ್ನಪ್ಪಿರುವುದು ಉದಾಹರಣೆಗಳಿವೆ. ಮೊದಲಿಗೆ ಎದೆ ನೋವು ಬಂದಾಗ ವೈದ್ಯರಲ್ಲಿ ಹೋಗಲು ಹಿಂಜರಿಯುತ್ತಾರೆ. ತದನಂತರ ಇದರ ತಿಳುವಳಿಕೆ ಇಲ್ಲದೆ ನೋವನ್ನ ತಡೆದುಕೊಳ್ಳುತ್ತಾರೆ. ಸ್ತನ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರು ಪ್ರತಿ ಎರಡು ವರ್ಷಗಳಿಗೊಮ್ಮೆ ಮ್ಯಾಮೊಗ್ರಾಮ್ ಮಾಡಿಸಿಕೊಳ್ಳಬೇಕು. ಇದರಲ್ಲಿ ಎರಡು ಎಕ್ಸ್-ರೇ ಪ್ಲೇಟ್‌ಗಳ ನಡುವೆ ಸ್ತನಗಳನ್ನು ಇರಿಸುವ ಮೂಲಕ ಸ್ತನ ಕ್ಯಾನ್ಸರ್ ಅನ್ನು ಕಂಡುಹಿಡಿಯಬಹುದು. ಇದರಿಂದ ಟ್ರೀಟ್ಮೆಂಟ್ ಕೂಡ ಕೊಡಬಹುದು.

30 ವರ್ಷ ಮೇಲ್ಪಟ್ಟ ಮಹಿಳೆಯರು ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನೂ ಮಾಡಿಸಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿರುವ ಗರ್ಭಕಂಠದ ಕೋಶಗಳ ಮೂಲಕ ಅಂಡಾಶಯದ ಕ್ಯಾನ್ಸರ್ ಅಪಾಯದ ಬಗ್ಗೆ ಪರೀಕ್ಷೆಯಲ್ಲಿ ಹೇಳುತ್ತದೆ. ಇದರ ಜೊತೆಗೆ, ಪ್ಯಾಪ್ ಸ್ಮೀಯರ್ ಪರೀಕ್ಷೆಯು ಮಹಿಳೆಯ ಯೋನಿ, ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ಗಳು, ಗರ್ಭಾಶಯ, ಯೋನಿ ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಸಹ ತಿಳಿಸುತ್ತದೆ.

30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗರ್ಭಧಾರಣೆ ಮತ್ತು ರಕ್ತದೊತ್ತಡದಲ್ಲಿ ಏರುಪೇರು ಆಗಬಹುದು ಅದಕ್ಕಾಗಿ ಪರೀಕ್ಷೆಗಳು ಕಡ್ಡಾಯ.

ಮಹಿಳೆಯರು ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇದರಲ್ಲಿ ದೇಹದಲ್ಲಿ ಇರುವ ಥೈರಾಯ್ಡ್ ಹಾರ್ಮೋನುಗಳು ಹೆಚ್ಚು ಕಡಿಮೆ ಕೆಲಸ ಮಾಡಲು ಪ್ರಾರಂಭಿಸುತ್ತವೆ. ವಯಸ್ಸಾದಂತೆ ಮಹಿಳೆಯರಲ್ಲಿ ಥೈರಾಯ್ಡ್ ಬೆಳವಣಿಗೆಯ ನಕರಾತ್ಮಕ ಬೆಳವಣಿಗೆಯು ಕಂಡು ಹಿಡಿಯಲು ಥೈರಾಯ್ಡ್ ಪರೀಕ್ಷೆಯು ಮುಖ್ಯ. ಈ ಆರೋಗ್ಯ ತಪಾಸಣೆ ಮಹಿಳೆಯರನ್ನು ದೊಡ್ಡ ಅಪಾಯದಿಂದ ಪಾರು ಮಾಡಬಹುದು. ರೋಗವು ಸಮಯಕ್ಕೆ ಪತ್ತೆಯಾದರೆ, ಸಮಯಕ್ಕೆ ಚಿಕಿತ್ಸೆ ನೀಡಬಹುದು.

ಹೀಗೆ ಮಹಿಳೆಯರು ಮುಜುಗರವನ್ನು ಪಡೆದೆ ಸಣ್ಣಪುಟ್ಟ ದೇಹದಲ್ಲಿ ನೋವುಗಳು ಕಂಡರೂ ವೈದ್ಯರನ್ನು ಸಂಪರ್ಕಿಸಲೇಬೇಕು ಇಲ್ಲದಿದ್ದಲ್ಲಿ ಸಾವು ಕಟ್ಟಿಟ್ಟ ಬುತ್ತಿ.

Leave A Reply

Your email address will not be published.