ವಿದ್ಯಾರ್ಥಿಯೋರ್ವನ ತಾಯಿಯ ಫೋಟೋ ದುರ್ಬಳಕೆ ಮಾಡಿದ ಸಹಪಾಠಿಗಳು | ರಾಡ್ ತಗೊಂಡು ಉಪನ್ಯಾಸಕರ ಎದುರೇ ಮಾರಾಮಾರಿ

Share the Article

ತಾಯಿಯ ಫೋಟೋವನ್ನು ಸ್ಟೇಟಸ್ ನಲ್ಲಿ ಹಾಕಿ ದುರ್ಬಳಕೆ ಮಾಡಿದ್ದಕ್ಕೆ ಉಪನ್ಯಾಸಕರ ಎದುರೇ ವಿದ್ಯಾರ್ಥಿಗಳ ಮಾರಾಮಾರಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಉಪನ್ಯಾಸಕರ ಎದುರೇ ರಾಡ್ ಹಿಡಿದು ಮಾರಾಮಾರಿ ಮಾಡಿದ ಘಟನೆಯೊಂದು ರಾಯಚೂರಿನ ನವೋದಯ ಸಂಸ್ಥೆಯಲ್ಲಿ ನಡೆದಿದೆ‌.

ಬಿಎಸ್‍ಸಿ ನರ್ಸಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳೇ ಈ ರೀತಿಯ ಹಲ್ಲೆಮಾಡಿದ ವಿದ್ಯಾರ್ಥಿಗಳು. ಶಂಕರ್ ಮತ್ತು ಶಂಭುಲಿಂಗ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು, ಇಬ್ಬರ ಮೇಲೂ ರಾಡ್‍ನಿಂದ ರೋಹಿತ್ ಹಲ್ಲೆ ನಡೆಸಿದ್ದಾನೆ.

ಶಂಭುಲಿಂಗ, ಶಂಕರ್ ರೋಹಿತ್ ನನ್ನು ಸತತವಾಗಿ ರೇಗಿಸುವ ಪರಿಪಾಠ ಬೆಳೆಸಿಕೊಂಡಿದ್ದರು. ಆದರೂ‌ ರೋಹಿತ್ ಸಹಿಸಿಕೊಂಡಿದ್ದ. ಇತ್ತೀಚೆಗೆ ರೋಹಿತ್ ತನ್ನ ತಾಯಿ ಬರ್ತ್‍ಡೇಗೆ ಸ್ಟೇಟಸ್ ಹಾಕಿದ್ದ. ಆದರೆ ರೋಹಿತ್ ತಾಯಿಯ ಫೋಟೋವನ್ನು ಶಂಕರ್ ಮತ್ತು ಶಂಭುಲಿಂಗ ದುರ್ಬಳಕೆ ಮಾಡಿದ್ದರು. ಆದರೆ ಮೊದಲೇ ಇವರ ಉಪಟಳದಿಂದ ರೋಸಿಹೋಗಿದ್ದ ರೋಹಿತ್, ತಾಯಿಯ ಅಪಹಾಸ್ಯ ಸಹಿಸದೇ ಹೋದ. ಹಾಗಾಗಿ ರೊಚ್ಚಿಗೆದ್ದ ರೋಹಿತ್ ಕಾಲೇಜಿನ ಟೆರೆಸ್ ಮೇಲಿದ್ದ ರಾಡ್ ತೆಗೆದುಕೊಂಡು ಬಂದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.

ಉಪನ್ಯಾಸಕರ ಕಣ್ಣೆದುರೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯು ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply