9 ಮಕ್ಕಳ ಮುಸ್ಲಿಂ ತಂದೆ ತಾಯಿ ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ಮರು ಮದುವೆಯಾದರು!!!
ಮದುವೆ ಎಂಬ ಅನುಬಂಧ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಕ್ರಮ ಪ್ರಕಾರ ಆಚಾರ ವಿಚಾರಗಳನ್ನು ಪಾಲಿಸಿ ಮದುವೆಯನ್ನು ನಡೆಸುವುದು ವಾಡಿಕೆ.
ಜನ್ಮತಃ ಮುಸಲ್ಮಾನರಾಗಿ, ಹಿಂದೂ ಸಂಸ್ಕೃತಿಗೆ ಮರುಳಾಗಿ ಹಿಂದೂ ವಿಧಿ ವಿಧಾನಗಳ ಪ್ರಕಾರ ಸಾರ್ವಜನಿಕವಾಗಿ ಕಾಶಿಯ ಪ್ರಸಿದ್ಧ ದೇಗುಲದಲ್ಲಿ ಸತಿ – ಪತಿಗಳಾಗಿ ಜನತೆಯ ಗಮನ ಸೆಳೆದ ಘಟನೆ ಉತ್ತರಪ್ರದೇಶದಲ್ಲಿ ಜರುಗಿದೆ.
ವರ ಕಿಯಾಮಾ ದಿನ್ ಖಲೀಫಾ ಮತ್ತು ವಧು ಕೇಶಾ ಖಲೀಫಾ , ಇಬ್ಬರೂ ಅಮೆರಿಕನ್ ಪೌರರಾಗಿದ್ದು, ಜನ್ಮತಃ ಮುಸ್ಲಿಮರಾದರೂ ಕೂಡ ಅವರಿಬ್ಬರೂ ಹಿಂದು ಸಂಪ್ರದಾಯದಂತೆ ವಿವಾಹವಾಗಲು ನಿರ್ಧರಿಸಿ ಉತ್ತರಪ್ರದೇಶದ ಜಾನ್‍ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ.
ಭಾರತ ಪ್ರವಾಸಕ್ಕೆ ಬಂದಾಗ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯದ ಜೊತೆಗೆ ವಾರಣಾಸಿಯ ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಅಮೆರಿಕ ಮೂಲದ ಮುಸ್ಲಿಂ ಜೋಡಿ ಹಿಂದೂ ಸಂಸ್ಕೃತಿಯಿಂದ ಆಕರ್ಷಿತರಾಗಿ, ಈ ಹಿನ್ನೆಲೆಯಲ್ಲಿ ಮಹಾದೇವ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಲ್ಲಿ ಮರುಮದುವೆಯಾಗಿದ್ದಾರೆ.
ದಂಪತಿಗೆ 18 ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು 9 ಮಕ್ಕಳಿದ್ದಾರೆ. ವರ ಕಿಯಾಮಾ ದಿನ್ ಖಲೀಫಾ ಅವರ ಅಜ್ಜ ಕೂಡ ಭಾರತೀಯ ಮೂಲದ ಹಿಂದೂ ಆಗಿದ್ದರು. ಈ ಹಿಂದೆ ವಾರಣಾಸಿಗೆ ಭೇಟಿ ಕೊಟ್ಟಾಗ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗುವ ಕನಸನ್ನು ಖಲೀಫಾ ಹೊಂದಿದ್ದರೂ ಕೂಡ ಅವರ ಕನಸು ಈ ಬಾರಿ ನೆರವೇರಿದೆ ಅಲ್ಲದೆ ಈ ವಿವಾಹ ನೆರವೇರಲು ಸಹಕರಿಸಿದವರಿಗೂ ಕೂಡ ಕೃತಜ್ಞತೆ ಸಲ್ಲಿಸಿದ್ದಾರೆ.