ಬೆಳ್ತಂಗಡಿ : ತರಕಾರಿ ಅಂಗಡಿಗೆ ಆಕಸ್ಮಿಕ ಬೆಂಕಿ | ಪಕ್ಕದ ಅಂಗಡಿಗೂ ತಗುಲಿದ ಬೆಂಕಿ

ಬೆಳ್ತಂಗಡಿ : ತಾಲೂಕಿನ ಉಜಿರೆಯ ಜನಾರ್ಧನ ದೇವಸ್ಥಾನದ ದ್ವಾರದ ಎದುರಿನ ಬಳಿ ಇರುವ ತರಕಾರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಈ ಘಟನೆ ಇಂದು ನಡೆದಿದ್ದು, ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿದೆ.

ಬೆಂಕಿ ಹೆಚ್ಚಾಗಿದ್ದು, ಪಕ್ಕದಲ್ಲೇ ಇರುವ ಹತ್ತಿಯ ಬೆಡ್ ಸ್ಟಾಕ್ ಅಂಗಡಿಗೂ ಬೆಂಕಿ ತಗುಲಿದೆ. ಒಟ್ಟು ಎರಡು ಅಂಗಡಿಗೆ ಬೆಂಕಿ ತಗುಲಿ ಧಗಧಗನೆ ಉರಿಯುತ್ತಿದೆ.

ಈ ಘಟನೆಯಿಂದ ಉಜಿರೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರೇ ನೀರು ಹಾಕಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಉಜಿರೆಯಲ್ಲಿ ತಿಂಗಳ ಹಿಂದೆ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಬೆಂಕಿ ಅವಘಡ ಸಂಭವಸಿದೆ. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ಬಂದಿದ್ದು, ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ಪಿಡಿಓ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply

Your email address will not be published.