ಬೆಳ್ತಂಗಡಿ : ತಾಲೂಕಿನಲ್ಲಿ ಹೆಚ್ಚಿದ ಅಡಿಕೆ ಕಳ್ಳರ ಹಾವಳಿ | ಕಳ್ಳನ ಬಂಧನ

Share the Article

ಬೆಳ್ತಂಗಡಿ : ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತಲಿದೆ. ಕ್ವಿಂಟಾಲ್ ಗಟ್ಟಲೆ ಅಡಿಕೆ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಹೌದು, ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತೆ ಅಂಗಡಿಯ ಶೀಟ್ ಜಾರಿಸಿ ಕಳ್ಳರು ನುಗ್ಗಿ ಎರಡು ಕ್ವಿಂಟಾಲ್ ಅಡಿಕೆ ಕದ್ದಿದ್ದಾರೆ. ಕಳ್ಳ ಯಾರೆಂದು ತಿಳಿಯದೆ ಪೊಲೀಸರಿಗೂ ತಲೆನೋವಾಗಿತ್ತು.

ಆದರೆ ಈಗ ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಡಿಯಲಾಗಿದೆ. ಕಳ್ಳ ಕಳ್ಳತನ ಮಾಡಲು ತಂದಿದ್ದ ಏಣಿಯಿಂದ ಕಳ್ಳನನ್ನು ಪತ್ತೆ ಹಚ್ಚಲು ಸಹಾಯವಾಗಿದೆ.
ಸಂತೋಷ್ ಎಂಬಾತನೇ ಈ ಕಳ್ಳತನದ ಕೃತ್ಯ ಮಾಡಿದ ಆರೋಪಿ.

ಘಟನೆ ವಿವರ : ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ನಗರದ ಪಂಚಾಯತ್ ನೀರಿನ ಟ್ಯಾಂಕ್ ಹೋಗುವ ರಸ್ತೆಯಲ್ಲಿರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲಕತ್ವದ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ತೊಂಬತ್ತು ಸಾವಿರ ಮೌಲ್ಯದ ಎರಡು ಕ್ವಿಂಟಾಲ್ ಅಡಿಕೆ ಕಳ್ಳತನವಾಗಿತ್ತು.

ಸೋಮವಾರ ಎಂದಿನಂತೆ ಅಂಗಡಿಯಲ್ಲಿ ಅಡಿಕೆ ಲೋಡ್ ಮಾಡಲು ಹೋದಾಗ, ಅಂಗಡಿಯ ಮೇಲ್ಭಾಗದ ಸಿಮೆಂಟ್ ಶೀಟ್ ಜಾರಿದ್ದು ಕಂಡಿದೆ. ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಹಿಂಭಾಗದಲ್ಲಿ ಕಳ್ಳತನ ಮಾಡಿದ್ದು ಗೊತ್ತಾಗಿದೆ. ತಕ್ಷಣ ಮಾಲಕರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Leave A Reply