ದಾರಿ ಮಧ್ಯೆಯಾದ ಹೆರಿಗೆಗೆ ಸಹಾಯವಾಯ್ತು ಎರಡು ಮೊಬೈಲ್ ಚಾರ್ಜರ್ | ʻಅತ್ಯಂತ ಅರ್ಜೆಂಟಲ್ಲಿ ನಮ್ಮ ಮನೆಯೊಳಗೆ ಕಾಲಿಟ್ಟ ಹುಡುಗಿ’ ಎಂದ ದಂಪತಿ!!

ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಚಾರ್ಜರ್ ಗಳನ್ನು ಫೋನ್ ಚಾರ್ಜ್ ಮಾಡಲು ಬಳಸುತ್ತೇವೆ. ಅದನ್ನು ಬಿಟ್ಟು ಅಂತಹ ಯಾವುದೇ ಕೆಲಸಕ್ಕೂ ಬಳಸುವುದು ವಿರಳವೇ. ಆದ್ರೆ, ಇಲ್ಲೊಂದು ಕಡೆ ಎರಡು ಮೊಬೈಲ್ ಚಾರ್ಜರ್ ಗಳು ಹೆರಿಗೆಯನ್ನೇ ಮಾಡಿಸಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಹೌದು. ಇದು ನಂಬಲು ಅಸಾಧ್ಯ. ಆದ್ರೆ, ನಂಬಲೇ ಬೇಕಾಗಿದೆ. ಇಂತಹದೊಂದು ಘಟನೆ ಯುಎಸ್‌ನಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತ ಇರುವಾಗ ಇಂತಹ ಪರಿಸ್ಥಿತಿ ಎದುರಾಗಿದ್ದು, ಈ ಕುರಿತು ಸ್ವತಃ ದಂಪತಿಗಳೇ ‘ ಇದೊಂದು ಮರೆಯಲಾಗದ ಅದ್ಭುತ ಅನುಭವ’ ಎಂದು ಹೇಳಿಕೊಂಡಿದ್ದಾರೆ.


Ad Widget

ಎಮಿಲಿ ವಾಡೆಲ್‌ ಎಂಬಾಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ, ʻಅತ್ಯಂತ ಅರ್ಜೆಂಟಲ್ಲಿ ನಮ್ಮ ಮನೆಯೊಳಗೆ ಕಾಲಿಟ್ಟ ಹುಡುಗಿʼ ಎಂದು ಬರೆದುಕೊಂಡು ಆಕೆಯ ಫೋಟೋ ಶೇರ್‌ ಮಾಡಿದ್ದಾಳೆ. ಆಕೆ ಹೇಳಿಕೊಂಡಂತೆ, ಅಲ್ಲಿ ನಡೆದಿದ್ದೇನು ಎಂಬುದನ್ನು ಮುಂದಕ್ಕೆ ಓದಿ..ಇತ್ತೀಚೆಗೆ ಇದ್ದಕ್ಕಿದ್ದಂತೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯ ಗಂಡ ಸ್ಟೀಫನ್‌ ವಾಡೆಲ್‌ ಆಕೆಯನ್ನು ಕಾರಿನಲ್ಲಿ ಕೂರಿಸಿ ಆಸ್ಪತ್ರೆಯ ದಾರಿ ಹಿಡಿದಿದ್ದಾನೆ. ಆದರೆ ಆಸ್ಪತ್ರೆ ಸೇರುವ ಮೊದಲೇ ಹೈವೇಯಲ್ಲಿ ಈಕೆಯ ಹೆರಿಗೆ ನೋವು ತೀವ್ರವಾಗಿದೆ. ಇದರ ಕುರಿತು ಎಮಿಲಿ ವಾಡೆಲ್‌ ಇದರ ಅನುಭವವನ್ನು ಬಿಚ್ಚಿಟ್ಟಿದ್ದು ಹೀಗಿದೆ ನೋಡಿ..

‘ಕಾರಿನಲ್ಲಿ ನನ್ನನ್ನು ನನ್ನ ಗಂಡ ಆಸ್ಪತ್ರೆಯ ದಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ನನ್ನ ನೋವು ತೀವ್ರವಾಯಿತು. ಮಗು ಇನ್ನೇನು ಹೊರಗೆ ಬಂದೇಬಿಡುತ್ತದೆ ಎಂದು ಅನಿಸಿತು. ನನ್ನ ನೀರಿನ ಚೀಲ ಒಡೆದಿರಲಿಲ್ಲವಾದರೂ, ನನಗೆ ಆಕೆಯ ತಲೆ ಇನ್ನೇನು ಹೊರಗೆ ಬಂದೇ ಬಿಟ್ಟಿತು ಅನಿಸಲು ಶುರುವಾಯಿತು. ಅದಕ್ಕಾಗಿ, ‘ಮಗು ಹೊರಗೆ ಬರುತ್ತಿದೆ, ದಯವಿಟ್ಟು ಹೆಲ್ಪ್ ಮಾಡು’ ಎಂದು ನನ್ನ ಸ್ಟೀಫನ್‌ನನ್ನು ಕೂಗಿದೆ.

ಆತ ಕೂಡಲೇ ಅಲ್ಲೇ ಬದಿಯಲ್ಲಿ ಕಾರ್ ಪಾರ್ಕ್ ಮಾಡಿ, ಹೆರಿಗೆಗೆ ಸಹಾಯ ಮಾಡಿದ. ಆದರೆ ಮಗುವಿನ ಬಾಯಿ ಹಾಗೂ ಮೂಗಿನಲ್ಲಿ ಸೇರಿಕೊಂಡಿದ್ದ ದ್ರವವನ್ನು ನಾನು ಕೂಡಲೇ ಹೊರತೆಗೆಯಬೇಕಾಗಿತ್ತು. ನನ್ನ ಬಾಯಿಯಿಂದಷ್ಟೇ ಇದನ್ನು ಮಾಡಬೇಕಿತ್ತು. ಆಗ ಏನು ಮಾಡಬೇಕೆಂದೇ ತಿಳಿಯದೆ, ಕೈಕಾಲೇ ಆಡಲಿಲ್ಲ. ಸ್ಟೀಫನ್ ಆಗ ಕಾರಿನಲ್ಲಿದ್ದ ಎರಡು ಫೋನ್ ಚಾರ್ಜರ್ ಮೂಲಕ ಮಗುವಿನ ಹೊಕ್ಕಳ ಬಳ್ಳಿಯನ್ನು ಕಟ್ಟಿದ. ಆ ಮೂಲಕ ನನಗೆ ಆಕೆಯ ಬಾಯಿ ಹಾಗೂ ಮೂಗಿಗೆ ಹೊಕ್ಕಿದ್ದ ನೀರನ್ನು ಹೊರತೆಗೆಯಲು ಸಹಾಯವಾಯಿತು. ಕಾರಿನೊಳಗೆ ಇದನ್ನೆಲ್ಲ ಮಾಡಲು ಕಷ್ಟವಾಗಿತ್ತು. ಆದರೆ, ಇದ್ದುದರಲ್ಲೇ ಹೇಗೋ ಮಾಡಿದೆವು’ ಎಂದು ಬರೆದುಕೊಂಡಿದ್ದಾಳೆ.

ಹೆರಿಗೆಯಾದ ತಕ್ಷಣ ಮಗುವನ್ನು ಹಾಗೆಯೇ ಎದೆಗವಚಿಕೊಂಡು ಹಾಲು ಕುಡಿಸಿದ್ದಾಳೆ. ಸುಮಾರು ಅರ್ಧ ಗಂಟೆ ನಾನು ಹೀಗೆ ಮಾಡಿದೆ ಎಂದು ಆಕೆ ವಿವರಿಸಿದ್ದಾಳೆ. ಮಗುವಿಗೆ ಹುಟ್ಟಿದ ತಕ್ಷಣ ಅಮ್ಮನ ಚರ್ಮದ ಸ್ಪರ್ಷ ಕೂಡಾ ಬಹಳ ಮುಖ್ಯ. ಹಾಗಾಗಿ ಕೂಡಲೇ ಈ ರೀತಿ ಮಾಡಿದ್ದು, ಮಗು ಯಾವುದೇ ತೊಂದರೆಯಿಲ್ಲದೆ ಹಾಲು ಕುಡಿದಿದ್ದಾಳೆ. ಜೊತೆಗೆ ಮೊದಲ ಹಾಲು ಕುಡಿಸುವುದು ಬಹಳ ಅಗತ್ಯ ಕೂಡಾ ಎಂದು ವಿವರಿಸಿದ್ದಾಳೆ.

ಇಡೀ ಘಟನೆಯ ಸಂದರ್ಭ ಫೋನ್ ಮುಖಾಂತರ ತನ್ನ ಸಹೋದರಿಯ ಜೊತೆ ಸಂಪರ್ಕದಲ್ಲಿದ್ದು, ಆಕೆ ಫೋನ್‌ನಲ್ಲಿ ವಿವರಿಸಿದಂತೆಯೇ ಆಕೆಯ ಗಂಡ ಸ್ಟೀಫನ್ ಮಾಡಿದ್ದಾನೆ. ಜೊತೆಗೆ ಆಂಬ್ಯುಲೆನ್ಸ್‌ಗೂ ಫೋನ್ ಮಾಡಿದ್ದಾರೆ. ಆಂಬ್ಯುಲೆನ್ಸ್ ಬರುವಷ್ಟರಲ್ಲಿ ಹೆರಿಗೆಯಾಗಿದ್ದು ಈ ಎಲ್ಲ ಕೆಲಸಗಳೂ ಮುಗಿದಿದ್ದವು. ಹೈವೇ ಮಧ್ಯೆ ಹೀಗಾಗಿದ್ದರಿಂದ ನಮಗೆ ಬೇರೆ ದಾರಿಯೇ ಇರಲಿಲ್ಲ’ ಎಂದು ಹೇಳಿಕೊಂಡಿದ್ದಾಳೆ.

ಅವರದೇ ಕಾರಿನೊಳಗೆ ಎಮಿಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಮಗು ಹಾಗೂ ಅಮ್ಮ ಇಬ್ಬರೂ ಆರೋಗ್ಯವಾಗಿದ್ದಾರೆ. ಹೀಗಾಗಿ, ʻಅತ್ಯಂತ ಅರ್ಜೆಂಟಲ್ಲಿ ನಮ್ಮ ಮನೆಯೊಳಗೆ ಕಾಲಿಟ್ಟ ಹುಡುಗಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ, ಚಾರ್ಜರ್ ಒಂದು ಮಗುವಿನ ಜನನದಲ್ಲೂ ಸಹಾಯ ಮಾಡಿದ್ದು, ಅಚ್ಚರಿಯ ವಿಷಯವೇ ಸರಿ…

error: Content is protected !!
Scroll to Top
%d bloggers like this: