ಡಿ. ಬಾಸ್ ಅಭಿಮಾನಿಗಳಿಂದ ಕಾಮಿಡಿ ಕಿಲಾಡಿ ದೀಕ್ಷಿತ್ ಗೌಡ ಗೆ ಅಭಿಮಾನದ ಮಹಾಪೂರ!! ಹಳ್ಳಿ ಪ್ರತಿಭೆಯ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕರುನಾಡು!!

ಕಡಬ ತಾಲೂಕಿನ ಕುಂತೂರು ಪದವು ನಿವಾಸಿ, ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್-04 ರ ಸ್ಪರ್ಧಿ ದೀಕ್ಷಿತ್ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಡಿ. ಬಾಸ್ ಅಭಿಮಾನಿಗಳಿಂದ ಅಭಿನಂದನೆಯ ಜೊತೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುವುದರೊಂದಿಗೆ, ಹಳ್ಳಿ ಪ್ರತಿಭೆಯನ್ನು ಕರುನಾಡೇ ಮೆಚ್ಚಿ ಹಾರೈಸಿದೆ.

 

ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ದೀಕ್ಷಿತ್ ಮಾಡಿದ ಖ್ಯಾತ ನಟ ದರ್ಶನ್ ಅವರ ಮಿಮಿಕ್ರಿಗೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದು, ದೀಕ್ಷಿತ್ ಪ್ರತಿಭೆಯನ್ನು ಮೆಚ್ಚಿದ ಕರುನಾಡು ದರ್ಶನ್ ಅವರ ಇನ್ನಷ್ಟು ಮಿಮಿಕ್ರಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯವಾಗಿದೆ.

ಈ ನಡುವೆ ಕೆಲ ಕಿಡಿಗೇಡಿಗಳು ಫೇಕ್ ಅಕೌಂಟ್ ಮೂಲಕ ದೀಕ್ಷಿತ್ ಅವರ ಪ್ರತಿಭೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು, ದರ್ಶನ್ ಅಭಿಮಾನಿಗಳೆಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರ ಬೆನ್ನಲ್ಲೇ ನಟ ದರ್ಶನ್ ಅವರ ನೈಜ ಅಭಿಮಾನಿಗಳು ಯುವ ಕಲಾವಿದ ದೀಕ್ಷಿತ್ ಅವರನ್ನು ಪ್ರೋತ್ಸಾಹಿಸಿದ್ದು,ಇನ್ನಷ್ಟು ಮಿಮಿಕ್ರಿ ಮಾಡುವ ಮೂಲಕ ಕರುನಾಡನ್ನು ರಂಜಿಸಲು ಸಾಮಾಜಿಕ ಜಾಲತಾಣದಲ್ಲೇ ಕೇಳಿಕೊಳ್ಳಲಾಗಿದೆ.

Leave A Reply

Your email address will not be published.