60 ವಿದ್ಯಾರ್ಥಿನಿಯರ ವೀಡಿಯೋ ಸೋರಿಕೆ ಪ್ರಕರಣ : ಸ್ಫೋಟಕ ಮಾಹಿತಿ ಬಹಿರಂಗ
ಭಾರೀ ಸಂಚಲನವನ್ನುಂಟು ಮಾಡಿದ ಖಾಸಗಿ ವಿಶ್ವವಿದ್ಯಾಲಯದ ಸಹಪಾಠಿಗಳ ಅಶ್ಲೀಲ ವೀಡಿಯೋಗಳ ಸೋರಿಕೆ ಪ್ರಕರಣ ಈಗ ಭಾರೀ ಸ್ಫೋಟಕ ತಿರುವೊಂದು ದೊರೆತಿದೆ. ಈ ಆರೋಪದ ಅಡಿಯಲ್ಲಿ ಮೊಹಾಲಿ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ಚಂಡೀಗಢ ಪೊಲೀಸರು ಭಾನುವಾರ ( ಇಂದು) ಬಂಧಿಸಿದ್ದಾರೆ. MMS ವಿಡಿಯೋ ವೈರಲ್ ಆಗಿದೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ ನಂತರ, ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಪ್ರಕರಣವೀಗ ಬೇರೆ ತಿರುವು ಪಡೆದುಕೊಂಡಿದೆ.
ಆರೋಪಿ ವಿದ್ಯಾರ್ಥಿನಿಯ ಒಂದೇ ಒಂದು ವೀಡಿಯೊ ಮಾತ್ರ ಸೋರಿಕೆಯಾಗಿರುವುದು, ಹಾಗೂ ಆಕೆ ಆ ವೀಡಿಯೋವನ್ನು ಆರೋಪಿ ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದು, ಉಳಿದಂತೆ ಯಾವುದೇ ವೀಡಿಯೋ ಸೋರಿಕೆಯಾಗಿಲ್ಲ ಎಂದು ಘಟನೆ ನಡೆದ ಪಂಜಾಬಿನ ಖಾಸಗಿ ವಿಶ್ವವಿದ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವೀಡಿಯೋ ಸೋರಿಕೆ ಆಗಿದೆ ಎಂದು ಗೊತ್ತಾದ ಕೂಡಲೇ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿವಿ ಕ್ಯಾಂಪಸ್‌ಗೆ ಜಮಾಯಿಸಿ, ಘಟನೆಯ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿನಿಯರು ಹೇಳುವ ಪ್ರಕಾರ, ಹಾಸ್ಟೆಲ್‌ನಲ್ಲಿ ಸ್ನಾನ ಮಾಡುವಾಗ ಆರೋಪಿ ವಿದ್ಯಾರ್ಥಿನಿ ರಹಸ್ಯವಾಗಿ ಚಿತ್ರೀಕರಣ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಾದಾಗ, ಪೊಲೀಸರು ಎಫ್‌ಐಆರ್ ದಾಖಲಿಸಿ, ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರ 50 ರಿಂದ 60 ವೀಡಿಯೋಗಳಿವೆ. ಆಕೆ ಅದನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದು, ನಾವು ಘಟನೆಯ ಬಗ್ಗೆ ಪ್ರಶ್ನಿಸಿದಾಗ ವೀಡಿಯೋ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಿದ್ದು, ಕೂಡಲೇ ವೀಡಿಯೋ ಡಿಲೀಟ್ ಮಾಡಿದ್ದಾಳೆ ಎಂದು ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ.
ರಹಸ್ಯವಾಗಿ ಈ ವೀಡಿಯೋ ಚಿತ್ರೀಕರಣ ಆಗಿರುವುದು ನಿಜ. ಆದರೆ ಕಾಲೇಜು ಆಡಳಿತ ಮಂಡಳಿ ವಿವಿಗೆ ಕೆಟ್ಟ ಹೆಸರು ಬರುತ್ತದೆ ಅಂತಾ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಪೊಲೀಸರು ಈ ಎಂಎಂಎಸ್ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿ, ಆರೋಪಿಯ ಒಂದು ವೀಡಿಯೊ ಮಾತ್ರ ಸೋರಿಕೆಯಾಗಿದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಯಾವುದೇ ಹುಡುಗಿಯ ಅಂತಹ ವೀಡಿಯೋ ನಮ್ಮ ಗಮನಕ್ಕೆ ಬಂದಿಲ್ಲ. ಇದೊಂದು ವದಂತಿ ಎಂದು ಪೊಲೀಸರು ಹೇಳಿದ್ದಾರೆ.