ಕಬ್ಬನ್ ಪಾರ್ಕ್ ನಲ್ಲಿ ಆಹಾರ ಸೇವನೆ ನಿಷೇಧಕ್ಕೆ ಸಾರ್ವಜನಿಕರ ವಿರೋಧ | ತೋಟಗಾರಿಕಾ ಇಲಾಖೆ ನಿರ್ಧಾರಕ್ಕೆ ಆಕ್ಷೇಪ

ಕಬ್ಬನ್ ಉದ್ಯಾನವನದಲ್ಲಿ ಊಟ ಮತ್ತು ತಿಂಡಿ ಸೇವಿಸುವವರು ಸ್ವಚ್ಛತೆ ಕಾಪಾಡಬೇಕೆಂದು ಅರಿವು ಮೂಡಿಸಬೇಕಿದ್ದ ತೋಟಗಾರಿಕೆ ಇಲಾಖೆಯೂ ಆಹಾರ ಸೇವನೆಯನ್ನೇ ನಿಷೇಧ ಸೇರಿಸಿರುವುದರಿಂದ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ತೋಟಗಾರಿಕೆ ಇಲಾಖೆಯ ಆದೇಶವು ನೆಗಡಿ ಬಂದರೆ, ಮೂಗನ್ನೇ ಕೊಯ್ದು ಹಾಕಬೇಕು ಎಂಬಂತಿದೆ. ಆಹಾರ ಸೇವನೆ ನಿಷೇಧದಿಂದಾಗಿ ರಾಜ್ಯದ ನಾನಾ ಭಾಗಗಳಿಂದ ಉದ್ಯಾನ ನಗರಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಿ ಪರಿಣಮಿಸಿದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ ಇರುವ ಕಬ್ಬನ್ ಪಾರ್ಕ್ ರಾಜ್ಯದ ನಾನಾ ಭಾಗಗಳಿಂದ ನಿತ್ಯ ಸಹಸ್ರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಪ್ರತಿಷ್ಠಿತ ಉದ್ಯಾನದೊಳಗೆ ಆಹಾರ ಸೇವನೆ ನಿಷೇಧ ಮಾಡುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ.

ಉದ್ಯಾನದೊಳಗೆ ಆಹಾರ ಸೇವನೆ ನಿಷೇಧಿಸಲಾಗಿದೆ ಎಂದು ಪ್ರವೇಶ ದ್ವಾರಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಪ್ರವೇಶ ದ್ವಾರಗಳಲ್ಲಿರುವ ಭದ್ರತಾ ಸಿಬ್ಬಂದಿ ಪ್ರವಾಸಿಗರ ಬ್ಯಾಗ್ ಗಳನ್ನು ಚೆಕ್ ಮಾಡಿ ಊಟ ಮತ್ತು ತಿಂಡಿ ಕೊಂಡೊಯ್ಯುತ್ತಿದ್ದರೆ ಅದನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಸೂಚಿಸುತ್ತಿದ್ದಾರೆ.

ಇದು ವಾಗ್ವಾದಕ್ಕೂ ಕಾರಣವಾಗಿದೆ ಮತ್ತು ಹೈ ಕೋರ್ಟ್ ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಪೈಕಿ ಹೆಚ್ಚಿನವರು ಕಬ್ಬನ್ ಉದ್ಯಾನದಲ್ಲೇ ಮಧ್ಯಾಹ್ನದ ಊಟ ಮಾಡುತ್ತಾರೆ. ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು, ಚಿತ್ರದುರ್ಗ, ಮೈಸೂರು, ಕೋಲಾರ ಹೀಗೆ ಬೇರೆ ಬೇರೆ ಭಾಗಗಳಿಂದ ಹೈಕೋರ್ಟು ವಾದ್ಯಗಳಿಗಾಗಿಯೂ ಅಥವಾ ವಿಧಾನಸೌಧದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳನ್ನು ಭೇಟಿಯಾಗುವುದು ಸೇರಿದಂತೆ ನಾನಾ ಕೆಲಸಗಳಿಗಾಗಿ ಜನರು ನಗರಕ್ಕೆ ಬರುತ್ತಾರೆ.

ಹೀಗೆ ಬರುವವರು ಅಲ್ಲಿಂದಲೇ ಊಟದ ಬುತ್ತಿ ಕಟ್ಟಿಕೊಂಡು ಬರುವುದು ವಾಡಿಕೆ. ಹೋಟೆಲ್ ಗೆ ಹೋಗಿ ತಿನ್ನಲು ಸಮಯ ಮತ್ತು ಹಣದ ಕೊರತೆಯೂ ಇರುತ್ತದೆ. ಹೀಗಾಗಿ ಕೆಲಸದ ನಿಮಿತ್ತ ಬಂದವರು ರೊಟ್ಟಿ ಬುತ್ತಿಯನ್ನು ಕಾಪಾಡಬಾರಕ್ ನಲ್ಲಿ ಕೂತು ತಿಂದು ಹೋಗುತ್ತಾರೆ. ಹೀಗಿರುವಾಗ ಇದೀಗ ಕಬ್ಬನ್ ಪಾರ್ಕ್ ನಲ್ಲಿ ಊಟ ಮತ್ತು ತಿಂಡಿ ತಿನ್ನುವುದನ್ನು ನಿಷೇಧಿಸಲು ಎಷ್ಟು ಸರಿ ಎಂಬುದು ಹಲವರು ಪ್ರಶ್ನೆ.

ಉದ್ಯಾನಕ್ಕೆ ಏಳು ಪ್ರವೇಶ ದ್ವಾರಗಳಿವೆ. ಎಲ್ಲ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಅಲ್ಲದೆ ಉದ್ಯಾನದೊಳಗೆ ಸಾಕಷ್ಟು ವ್ಯಾಪಾರಿಗಳು ತಿಂಡಿ ಮತ್ತು ತಿನಿಸುಗಳನ್ನು ಮಾರುತ್ತಾರೆ. ಕೆಲವು ಸಸ್ಯಾಹಾರಿ ಹಾಗೂ ಮಾಂಸಾಹಾರಿ ಹೋಟೆಲ್ ಗಳು ಕೂಡ ಇವೆ. ಇವುಗಳಿಂದ ಸ್ವಚ್ಛತೆಗೆ ಧಕ್ಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.

Leave A Reply

Your email address will not be published.