ಇಂದು ನಡೆಯಿತು ಪ್ರಬಲ ಭೂಕಂಪ | 6.8 ತೀವ್ರತೆಯ ಭೂಕಂಪನ | ಸುನಾಮಿ ಎಚ್ಚರಿಕೆ‌ ನೀಡಿದ ಹವಾಮಾನ ಸಂಸ್ಥೆ

ತೈವಾನ್‌ನ (Taiwan) ಆಗ್ನೆಯ ಭಾಗದಲ್ಲಿರುವ ತೈಪೆ ಎಂಬಲ್ಲಿ ( ಭಾನುವಾರ) 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ದ್ವೀಪ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪ ಸುನಾಮಿ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು 300 ಕಿ.ಮೀ ಆಳದಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಮೆರಿಕದ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ.

ಭೂಕಂಪದಿಂದಾಗಿ ಕೆಲವೆಡೆ ಕಟ್ಟಡಗಳು ಕುಸಿತವಾಗಿರುವುದು ಕೂಡಾ ವರದಿಯಾಗಿದೆ. ಪೂರ್ವ ಕರಾವಳಿ ಭಾಗದ ರೈಲ್ವೇ ನಿಲ್ದಾಣದಲ್ಲಿ ರೈಲೊಂದು ಹಳಿ ತಪ್ಪಿದ್ದಾಗಿ ತಿಳಿದುಬಂದಿದೆ. ಇಲ್ಲಿಯವರೆಗೆ ಪ್ರಾಣ ಹಾನಿ
ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಇವೆಲ್ಲದರ ನಡುವೆ, ತೈವಾನ್‌ನಲ್ಲಿ ನಡೆದ ಪ್ರಬಲ ಭೂಕಂಪದ ಬಳಿಕ ಜಪಾನ್‌ನಲ್ಲಿ 1 ಮೀ. ಎತ್ತರದ ಸುನಾಮಿ ಬರೋ‌ ಸಾಧ್ಯತೆ ಇದೆ ಎಂದು ಅಲ್ಲಿನ ಜನರಿಗೆ ಹವಾಮಾನ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.

ಸತತ ಎರಡು ಬಾರಿ ಭೂಮಿ ಕಂಪಿಸಿದ್ದರಿಂದ ತೈವಾನ್ ಜನರು ಆತಂಕದಲ್ಲಿದ್ದಾರೆ. ಸುನಾಮಿ ಬರಲಿದೆಯೇ ಎಂಬ ಭಯ ಅವರನ್ನು ಆವರಿಸಿ ಬಿಟ್ಟಿದೆ. ಆದರೂ ಸಣ್ಣಪುಟ್ಟ ಹಾನಿಯಾಗಬಹುದು. ಜಪಾನ್ ನಲ್ಲಿಯೂ ಬಹುತೇಕ ಇದೇ ರೀತಿಯ ಪರಿಸ್ಥಿತಿ ಇದೆ. ಅಲ್ಲಿಯೂ ಕೂಡ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಭೂಕಂಪದ ತೀವ್ರತೆ 7.0 ಆಗುವವರೆಗೆ ತೈವಾನ್‌ನಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗುವುದಿಲ್ಲ. 6.0 ರ ತೀವ್ರತೆಯ ಭೂಕಂಪಗಳು ಸಹ ಕೆಲವೊಮ್ಮೆ ಗಣನೀಯ ವಿನಾಶವನ್ನು ಉಂಟುಮಾಡಬಹುದು, ಇದು ಭೂಕಂಪದ ಸ್ಥಳ ಮತ್ತು ಆಳವನ್ನು ಅವಲಂಬಿಸಿರುತ್ತದೆ.

Leave A Reply

Your email address will not be published.