ಒಂದು ಸೀರೆಯಲ್ಲಿ ಜೀವವನ್ನೇ ಅಂತ್ಯವಾಗಿಸಿಕೊಂಡ ದಂಪತಿಗಳು | ಕಾರಣ ಕೇಳಿದ್ರೆ ಅಯ್ಯೋ ಅನಿಸದೆ ಇರದು!

ಇಂದು ಆತ್ಮಹತ್ಯೆ ಎಂಬುದು ಎಲ್ಲಾ ಸಮಸ್ಯೆಗಳಿಂದ ಹೊರ ಬರಲಿರುವ ಅಸ್ತ್ರ ಎಂಬಂತೆ ಆಗಿದೆ. ಯಾಕೆಂದರೆ ಪ್ರತಿಯೊಂದು ವಿಷಯಕ್ಕೂ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೇ. ಅದೇ ರೀತಿ ಇಲ್ಲೊಂದು ಕಡೆ ದಂಪತಿಗಳು ಒಂದು ಸೀರೆಯಲ್ಲಿ ಜೀವವನ್ನೇ ಅಂತ್ಯವಾಗಿಸಿದ್ದಾರೆ.

 

ಆಟೋಚಾಲಕನಾಗಿದ್ದ ಚಂದ್ರಶೇಖರ್​ (28) ಮತ್ತು ಶಶಿಕಲಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಚಿಕ್ಕಬಳ್ಳಾಪುರದ ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಿಲ್ಲ ಎಂಬ ಕೊರಗಿನಿಂದಾಗಿ ಇವರು ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯೊಳಗಿದ್ದ ದಂಪತಿ ಎಷ್ಟು ಹೊತ್ತಾದರೂ ಹೊರಗೆ ಕಾಣಿಸಿಕೊಳ್ಳದ್ದರಿಂದ ಅನುಮಾನಗೊಂಡ ಸ್ಥಳೀಯರು ಬಾಗಿಲು ತೆರೆದು ನೋಡಿದಾಗ ಇಬ್ಬರೂ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

Leave A Reply

Your email address will not be published.