ಜೀ ವಾಹಿನಿಯ ಕಾಮಿಡಿ ಕಿಲಾಡಿ ಕಡಬದ ದೀಕ್ಷಿತ್ ರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ!! ಡಿ.ಬಾಸ್ v/s ದೀಕ್ಷಿತ್ ಅಭಿಮಾನಿಗಳಿಂದ ಚಾಟ್ ವಾರ್!!

Share the Article

ಕಡಬ:ಕನ್ನಡದ ಅತೀ ಹೆಚ್ಚು ವೀಕ್ಷಣೆಯ ‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್-04ರಲ್ಲಿ ಆಯ್ಕೆಯಾದ ಕಡಬ ತಾಲೂಕಿನ ಕುಂತೂರು ಪದವು ನಿವಾಸಿ ದೀಕ್ಷಿತ್ ಗೌಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ವರದಿಯಾಗಿದೆ.

ಜೀ ವಾಹಿನಿ ಪ್ರಸಾರ ಮಾಡುವ ಕಾಮಿಡಿ ಕಿಲಾಡಿಗಳು ಸೀಸನ್-04 ರಲ್ಲಿ ಸ್ಪರ್ಧಿಸಿದ ದೀಕ್ಷಿತ್ ಗೌಡ, ಮೊದಲ ಎಂಟ್ರಿಯಲ್ಲೇ ತೀರ್ಪುಗಾರರ ಸಹಿತ ವೀಕ್ಷರನ್ನು ರಂಜಿಸಿ ಎಲ್ಲರ ಮನೆಮಾತಾಗಿರುವ ಹೊತ್ತಲ್ಲೇ,ದರ್ಶನ್ ಅಭಿಮಾನಿ ಬಳಗವೊಂದು ಮೂಗು ತೂರಿಸಿರುವುದು ಬೆಳಕಿಗೆ ಬಂದಿದೆ.

ಖ್ಯಾತ ನಟ ದರ್ಶನ್ ಅವರನ್ನು ಮಿಮಿಕ್ರಿ ಮಾಡಿದ ಎನ್ನುವ ಕಾರಣಕ್ಕಾಗಿ ವ್ಯಕ್ತಿಯೊಬ್ಬ ದೀಕ್ಷಿತ್ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು,ಇದರ ಬೆನ್ನಲ್ಲೇ ದೀಕ್ಷಿತ್ ಅಭಿಮಾನಿಗಳ ಬಳಗವೂ ತಿರುಗೇಟು ನೀಡಿದೆ. ಸದ್ಯ ಎರಡೂ ಕಡೆಯವರರಿಂದ ಪರಸ್ಪರ ಚಾಟ್ ಮೂಲಕ ಮಾತಿನ ಚಕಮಕಿ ನಡೆದಿದ್ದು,ಜೀವ ಬೆದರಿಕೆ, ಎಚ್ಚರಿಕೆ ನೀಡುವ ಮಟ್ಟಕ್ಕೆ ತಲುಪಿದೆ.

ಈ ನಡುವೆ ದೀಕ್ಷಿತ್ ಅಭಿಮಾನಿಗಳ ಬಳಗವು ಅವಾಚ್ಯವಾಗಿ ನಿಂದಿಸಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದು,ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದು, ಬೆಳೆಯುತ್ತಿರುವ ನಟನ ಏಳಿಗೆ ಸಹಿಸದೆ ಕಾಲು ಎಳೆಯುತ್ತಿದ್ದಾರೆ ಎನ್ನುವ ಮಾತುಗಳು ನೆಟ್ಟಿಗರಿಂದ ಕೇಳಿಬರುತ್ತಿದೆ.

Leave A Reply