Shocking ಮತ್ತು ಸತ್ಯ | ಸತ್ತ ಮನೆಯ ಹಿರಿಯ ವ್ಯಕ್ತಿಯನ್ನು ಮಧ್ಯದಲ್ಲಿಟ್ಟುಕೊಂಡು ನಗುತ್ತಾ ಗ್ರೂಪ್ ಸೆಲ್ಫಿ ತೆಗೆದುಕೊಂಡ 40 ಜನ !

ಕೇರಳ ಕುಟುಂಬದ ಅಂತ್ಯಕ್ರಿಯೆಯ ಸಂದರ್ಭ ಕುಟುಂಬ ಸದಸ್ಯರೆಲ್ಲಾ ಸೇರಿಕೊಂಡು ಸ್ಮೈಲ್ಸ್ ಕೊಟ್ಟು ಫೋಟೋ ತೆಗೆಸಿಕೊಂಡ ‘ ಸ್ಮೈಲ್ಸ್ ಸೆಲ್ಫಿ ” ಈಗ ವೈರಲ್ ಆಗಿದೆ ‘.ಇದು ಆ ಬಗೆಗಿನ ಸ್ಟೋರಿ.

ಸಾಮಾನ್ಯವಾಗಿ ಮನೆಯಲ್ಲಿ ಸಂಬಂಧಿಕರು ಮೃತಪಟ್ಟಾಗ  ಸೂತಕದ ಛಾಯೆ ಆವರಿಸಿ, ಮನೆ ಮಂದಿಯೆಲ್ಲಾ ದುಃಖದಲ್ಲಿರುವುದು ಸಹಜ. ಆದರೆ ಇಲ್ಲಿ ಸಾವಿನ ಮನೆಯಲ್ಲಿ ಮನೆಯಲ್ಲಿ ಹೆಣವನ್ನು ಮುಂದಿಟ್ಟುಕೊಂಡು ಮನೆಮಂದಿ ಸಂತೋಷದಲ್ಲಿ ತೇಲಾಡುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು,ನೋಡಿದವರ ಮನದಲ್ಲಿ ಅನುಮಾನ ಮತ್ತು ಗೊಂದಲ ಸೃಷ್ಟಿಯಾಗಿದೆ. ಏನಿದು, ಸಾವನ್ನೂ ಕೂಡಾ ಸಂಭ್ರಮಿಸುವ ಜನ ಇದ್ದಾರಾ ಎಂಬ ಭಾವ ಮೂಡೋದು ಸಹಜ.

ಈ ವಿಚಿತ್ರ ಘಟನೆ , ಕೇರಳದಲ್ಲಿ ನಡೆದಿದ್ದು, 90ರ ಹರೆಯದ ಆ ಮನೆಯ ಅಜ್ಜಿ ತೀರಿಕೊಂಡಿದ್ದು, ಕುಟುಂಬದ  ಸದಸ್ಯರೆಲ್ಲರೂ ಮೃತ ದೇಹದ ಸುತ್ತ ಕುಳಿತು ನಗುತ್ತಿರುವ ಫೋಟೋ, ವಿಡಿಯೋ ತುಣಕುಗಳು ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿದೆ. 90ರ ಹರೆಯದ ಅಜ್ಜಿಯ ಮೃತ ದೇಹದ ಮದ್ಯೆ ಕುಟುಂಬದ ನಲವತ್ತು ಸದಸ್ಯರು  ನಗುತ್ತಾ  ಫೋಟೋ ತೆಗೆಸಿಕೊಂಡಿದ್ದಾರೆ. ಬಹುತೇಕ ಇಡೀ ಕುಟುಂಬ ಏಕೆ ಹೀಗೆ ನಗುತ್ತಿದೆ?
ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ವೈರಲ್ ಆಗುತ್ತಿದೆ. ಆದರೆ ಈ ಚಿತ್ರ ವೈರಲ್ ಆಗುವುದರೊಂದಿಗೆ, ಈ ಚಿತ್ರದಲ್ಲಿ ಒಂದು “ವಿಚಿತ್ರ ದುಃಖವಿದೆ” – ಎಂದು ಅನೇಕರು ಹೇಳುತ್ತಿದ್ದಾರೆ. ಹಾಗೆ ಮತ್ತೆ ಕೆಲವರು ಇದು  ವಿಚಿತ್ರ ದುಃಖದ ‘ ಮತ್ತು “ವಿಭಿನ್ನ ಸಂತೋಷದ’ ವಿಕ್ಷಿಪ್ತ ನಡವಳಿಕೆ ಎಂದಿದ್ದಾರೆ ಕೆಲವರು. ನಿಜಕ್ಕೂ ಮನೆಯವರು ಮನೆಯ ಹಿರಿಯರ ಸಾವನ್ನೂ ಸಂಭ್ರಮಿಸುತ್ತಿದ್ದಾರೆಯೇ, ಏನಿದು ಎಂಬ ಅನುಮಾನ ಆತಂಕ ಸೃಷ್ಟಿ ಆಗಿತ್ತು.

ಕುಟುಂಬ ಸದಸ್ಯರನ್ನು ಪ್ರಶ್ನಿಸಿದಾಗ ಸತ್ಯ ಹೊರಕ್ಕೆ ಬಂದಿದೆ. ಕುಟುಂಬದ ಸದಸ್ಯರಾದ, ಬಾಬು ಉಮನ್ ಎಂಬವರು ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೀರಿಕೊಂಡ ‘ಅಜ್ಜಿ’ ತನ್ನ ಜೀವಿತಾವಧಿಯಲ್ಲಿ ತುಂಬಾ ಚೆನ್ನಾಗಿ ಬಾಳಿ ಬದುಕಿದ್ದಾರೆ. ಮೂರು ತಲೆಮಾರಿನವ ರೊಂದಿಗೆ ಅನ್ಯೋ ನ್ಯವಾಗಿದ್ದರು. ಮಕ್ಕಳು- ಮೊಮ್ಮಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಅವರೊಟ್ಟಿಗೆ ಕಳೆದ ಒಳ್ಳೆಯ ಸಮಯವನ್ನು ನೆನಪಿಸಿಕೊಳ್ಳುವ ಸಲುವಾಗಿ ಜೊತೆಯಾಗಿ ಫೋಟೋ ತೆಗೆದಿದ್ದೇವೆ ಎಂದುತ್ತರಿಸಿದ್ದಾರೆ.

ಕುಟುಂಬದ ಮತ್ತೊಬ್ಬರು ಸದಸ್ಯರ ಪ್ರಕಾರ,ಈ ಚಿತ್ರವನ್ನು ಅರ್ಥಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಸಾವು ಒಂದು ವಿದಾಯವಾಗಿದ್ದು ಅಳುವ ಮೂಲಕವೇ ವಿದಾಯ ಹೇಳ ಬೇಕಾಗಿಲ್ಲ, ನಾವು ನಗುತ್ತಾ ಅಜ್ಜಿಗೆ ವಿದಾಯ ಸಲ್ಲಿಸಿದ್ದೇವೆ. ಕೇರಳದ ಶಿಕ್ಷಣ ಸಚಿವರು ಕೂಡ ಈ ಮಾತನ್ನು ಸಮರ್ಥಿಸಿ ಕೊಂಡಿದ್ದಾರೆ. ಅಳುವ ಮುಖೇನವೇ ವ್ಯಕ್ತಿಗೆ ವಿದಾಯ ಹೇಳಬೇಕಿಲ್ಲ, ಸಂತೋಷದಿಂದ ಕಳೆದಿರುವ ಅಜ್ಜಿಗೆ ಮಂದಹಾಸ ಬೀರುತ್ತಾ ವಿದಾಯ ಹೇಳುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಪ್ರೀತಿ ಪಾತ್ರರಾಗಿದ್ದು ಸತ್ತು ಹೋದಾಗ ವ್ಯಕ್ತಿಯನ್ನು ಕುಟುಂಬಸ್ಥರೆಲ್ಲಾ ನಗುನಗುತ್ತಾ ಬಾರದ ಲೋಕಕ್ಕೆ ಕಳಿಸಿಕೊಟ್ಟಿದ್ದಾರೆ.

Leave A Reply

Your email address will not be published.