ಗಂಡ ಅವನಲ್ಲ ಅವಳು | ಮದುವೆಯಾಗಿ 8 ವರ್ಷಗಳ ಬಳಿಕ ತಿಳಿದ ಸತ್ಯ
ನವದೆಹಲಿ: ಮದುವೆಯಾಗಿ 8 ವರ್ಷ ಕಳೆದ ನಂತರ ತನ್ನ ಪತಿ
ಮೊದಲು ಮಹಿಳೆಯಾಗಿದ್ದಳು ಎಂಬ ಸತ್ಯ ತಿಳಿದುಬಂದಿದ್ದು, ಗುಜರಾತ್‍ನ ವಡೋದರಾದಲ್ಲಿ ಮಹಿಳೆಯೊಬ್ಬರು ಶಾಕ್ ಆಗಿದ್ದಾಳೆ.
40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿರುವುದು ತಿಳಿದು ಕಂಗಲಾಗಿದ್ದಾಳೆ.
ಈ ಸಂಬಂಧ ಮಹಿಳೆ ಬುಧವಾರ ಗೋತ್ರಿ ಪೊಲೀಸ್‍ನಲ್ಲಿ ದೂರು ದಾಖಲಿಸಿದ್ದು, ತನ್ನ ಪತಿ ವಿರಾಜ್ ವರ್ಧನ್ ವಂಚನೆ ಮತ್ತು ಅಸ್ವಾಭಾವಿಕ ಲೈಂಗಿಕತೆಗೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಎಫ್‍ಐಆರ್‌ನಲ್ಲಿ ಅವರ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿದ್ದಾಳೆ.
ಶೀತಲ್ ಮೊದಲ ಪತಿ ರಸ್ತೆ ಅಪಘಾತದಲ್ಲಿ ನಿಧನರಾದರು. ಆಗ ಅವರಿಗೆ ಹದಿನಾಲ್ಕು ವರ್ಷದ ಮಗಳಿದ್ದಳು. ಎರಡನೇ ಮದುವೆಯ ಬಗ್ಗೆ ಅವರಿಗೆ ಆಲೋಚನೆ ಬಂದಿತು. ನಂತರ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಒಂದನ್ನು ಸಂಪರ್ಕಿಸಿದರು. ಆಗ ವಿರಾಜ್ ವರ್ಧನ್ ಎನ್ನುವವರ ಪರಿಚಯವಾಯಿತು. 2014ರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿರಾಜ್ ವರ್ಧನ್ ಅವರೊಂದಿಗೆ ಶಾಸ್ತ್ರೋಕ್ತವಾಗಿ ಶೀತಲ್ ಮದುವೆಯಾದರು.
ಫೆಬ್ರವರಿ 2014 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿರಾಜ್ ವರ್ಧನ್ ಮಹಿಳೆ ಮದುವೆಯಾಗಿದ್ದು, ನಂತರ ಹನಿಮೂನ್‍ಗಾಗಿ ಕಾಶ್ಮೀರಕ್ಕೆ ತೆರಳಿದ್ದರು. ಆದರೆ ವ್ಯಕ್ತಿ ಈ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದರು. ಸದಾ ಮುನಿಸಿಕೊಳ್ಳುವ ಮೂಲಕ ನನ್ನಿಂದ ದೂರ ಉಳಿದಿದ್ದರು. ನಂತರ ಮಹಿಳೆ ಆತನ ಮೇಲೆ ಒತ್ತಡ ಹೇರಿದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ ಸಂಭವಿಸಿದ ಅಪಘಾತದಿಂದ ತಾನು ಲೈಂಗಿಕ ಕ್ರಿಯೆ ಹೊಂದಲು ಅಸಮರ್ಥನಾಗಿದ್ದೇನೆ ಎಂದು ವ್ಯಕ್ತಿ ಪತ್ನಿ ಬಳಿ ಹೇಳಿಕೊಂಡಿದ್ದು, ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಸರಿಯಾಗಲಿದೆ ಎಂದು ಆರೋಪಿ ಹೇಳಿ ನಂಬಿಸಿದ್ದನು.
ಆದರೆ ಜನವರಿ 2020ರಲ್ಲಿ, ಸ್ಥೂಲಕಾಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ಸುಳ್ಳು ಹೇಳಿದ ವಿರಾಜ್, ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಈ ವಿಷಯವನ್ನು ಶೀತಲ್ ಅವರಿಗೆ ಈ ವಿಷಯ ತಿಳಿದು ಆಕೆ ಆಘಾತಕ್ಕೆ ಒಳಗಾದರು. ಅಷ್ಟಕ್ಕೆ ಸುಮ್ಮನಾಗದ ವಿರಾಜ್ ಅಸಹಜ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಲು ಒತ್ತಾಯಿಸಲಾರಂಭಿಸಿದರು. ಈ ವಿಷಯವನ್ನು ಬಹಿರಂಗಪಡಿದಿರೆ ಭಯಂಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಬೆದರಿಸಿದದ್ದಾಗಿ ಮಹಿಳೆ ಪೊಲೀಸರಿಗೆ ಹೇಳಿದ್ದಾಳೆ.
ಉಪಾಯಗಾಣದ ಶೀತಲ್ ಪೊಲೀಸರಿಗೆ ಈ ವಿಷಯ ತಿಳಿಸಿ ಪ್ರಕರಣ ದಾಖಲಿಸಿದರು. ದೆಹಲಿ ನಿವಾಸಿಯಾಗಿರುವ ಆರೋಪಿ ವಿರಾಜ್ ಇದೀಗ ವಡೋದರಾ ಪೊಲೀಸರ ಬಂಧನದಲ್ಲಿದ್ದಾರೆ.