ಬಿಸ್ಲೆರಿ ಮೇಲೆ ಟಾಟಾ ಕಣ್ಣು | ಬಾರಿ ಮೊತ್ತದ ಬೇಡಿಕೆ
ಭಾರತದ ಅತಿ ದೊಡ್ಡ ಪ್ಯಾಕೇಜ್ಡ್ ವಾಟರ್ ಕಂಪನಿ ಆದ ರಮೇಶ್ ಚೌಹಾಣ್ ಒಡೆತನದ ಬಿಸ್ಲೆರಿ ಇಂಟರ್ನ್ಯಾಷನಲ್ ಪಾಲು ಪಡೆಯಲು ಟಾಟಾ ಗ್ರೂಪ್ ಮುಂದಾಗಿದೆ. ಈ ಸಂಬಂಧ ತನ್ನ ಆಫರ್ ಅನ್ನು ಕಂಪನಿಯ ಮುಂದಿಟ್ಟಿದೆ.
ಈಗಾಗಲೇ ಟಾಟಾ ಕನ್ಸ್ಯೂಮರ್ ಕಂಪನಿಯು ಡೆಡ್ಲಿ ಟೀ, ಎಯ್ಟ್ ಓ ಕ್ಲಾಕ್ ಕಾಫಿ ಮತ್ತಿತರ ಬ್ರಾಂಡ್ಗಳಲ್ಲಿ ಪಾಲನ್ನು ಹೊಂದಿದೆ. ಧಾನ್ಯಗಳು, ಉಪ್ಪು ಮತ್ತು ಬೆಳೆ ಕಾಳುಗಳನ್ನು ಮಾರಾಟ ಮಾಡುತ್ತಿದ್ದು, ಸ್ಟಾರ್ ಬಕ್ಸ್ ಕೆಫೆಗಳನ್ನು ನಿರ್ವಹಿಸುತ್ತಿದೆ.
ಟಾಟಾ ಕನ್ಸುಮರ್ ನೌರಿಶ್ ಕೊ ಅಡಿಯಲ್ಲಿ ತನ್ನದೇ ಆದ ಬಾಟಲ್ ವಾಟರ್ ವ್ಯವಹಾರವನ್ನು ಡಾಟ ಹೊಂದಿದೆಯಾದರೂ ಇದು ಸಣ್ಣ ಮಟ್ಟದಲ್ಲಿದೆ.
ಬಿಸ್ಲೆರಿಯು 120ಕ್ಕೂ ಹೆಚ್ಚು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ನಾಕು ಸಾವಿರಕ್ಕೂ ಹೆಚ್ಚು ವಿತರಕರ ಜಾಲವನ್ನು ಹೊಂದಿದೆ. ಭಾರತದ ಅತ್ಯಂತ 5,000 ಟ್ರಕ್ ಗಳನ್ನು ಇದು ನಿರ್ವಹಿಸುತ್ತಿದೆ. ಹೀಗಾಗಿ ಬೃಹತ್ ಬ್ರಾಂಡ್ ಮೇಲೆ ಟಾಟಾ ಕಣ್ಣಿಟ್ಟಿದೆ.