ಟ್ರಾಫಿಕ್ ಪೊಲೀಸ್ ಜೊತೆ ಮಾತಿಗಿಳಿಯುವ ಮುಂಚೆ ಇರಲಿ ಎಚ್ಚರ | ಹೊಸದಾಗಿ ಬಂದಿದೆ ಈ ನಿಯಮ
ವಾಹನ ಸವಾರರಿಗೆ ಹೊಸ-ಹೊಸ ನಿಯಮಗಳು ಜಾರಿ ಆಗುತ್ತಲೇ ಇರುತ್ತದೆ. ಅದರಂತೆ ಇದೀಗ ಹೊಸ ನಿಯಮವೊಂದು ಬಂದಿದ್ದು, ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಬೈಯುವಂತಿಲ್ಲ. ಒಂದು ವೇಳೆ ಜೋರು ಮಾಡಿದ್ರೆ ಅದಿಕ್ಕೂ ಬೀಳುತ್ತೆ ದಂಡ!
ಹೌದು. ವಾಹನ ಸವಾರರ ದಾಖಲೆ ಪರಿಶೀಲನೆ ಗೆ ವಾಹನ ನಿಲ್ಲಿಸಿದಾಗ ಅದೆಷ್ಟೋ ಜನ ಟ್ರಾಫಿಕ್ ಪೊಲೀಸ್ ಗೆ ಬೈಯುತ್ತಾರೆ. ಆದರೆ ಈಗ ಈ ರೀತಿ ಪೊಲೀಸರ (Police) ಮೇಲೆ ಕೂಗಾಡುವಂತಿಲ್ಲ. ನಿಮ್ಮ ಬಳಿ ವಾಹನದ ಎಲ್ಲಾ ದಾಖಲೆಗಳು ಇದ್ದರೂ ಸಹ ಪೊಲೀಸರು ಅದನ್ನೆಲ್ಲಾ ನೋಡಿ ನಿಮ್ಮನ್ನು ಬಿಡುವವರೆಗೂ ಸಮಾಧಾನದಿಂದ ಇರಬೇಕು. ಇಲ್ಲ ಎಂದರೆ ಸುಮ್ಮನೆ ನೀವು 2000 ರೂಪಾಯಿ ಭಾರಿ ದಂಡವನ್ನು ನೀಡಬೇಕಾಗುತ್ತದೆ.
ಇಂತಹ ಹೊಸ ಸಂಚಾರ ನಿಯಮಗಳು ಜಾರಿಗೆ ಬಂದಿವೆ. ವಾಸ್ತವವಾಗಿ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ವಾಹನದ ಕಾಗದಪತ್ರಗಳನ್ನು ಅಥವಾ ಯಾವುದೇ ರೀತಿಯಲ್ಲಿ ಪರಿಶೀಲಿಸುವಾಗ ನೀವು ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ ನಿಯಮ 179 MVA ಪ್ರಕಾರ ಅವರು ನಿಮಗೆ 2000 ರೂಪಾಯಿಯ ದಂಡ ನೀಡುವ ಹಕ್ಕನ್ನು ಹೊಂದಿದ್ದಾರೆ.
ಒಂದು ವೇಳೆ, ಪೊಲೀಸರು ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ, ನೀವು ದೂರು ನೀಡುವ ಮತ್ತು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ. ಹೊಸ ಸಂಚಾರ ನಿಯಮಗಳ ಪ್ರಕಾರ ಸರಿಯಾದ ಹೆಲ್ಮೆಟ್ ಧರಿಸದಿದ್ದರೂ ಸಹ ಪೊಲೀಸರು ನಿಮ್ಮ ಮೇಲೆ 2000 ರೂಪಾಯಿಯ ದಂಡ ಹಾಕಬಹುದು. ಮೋಟಾರು ವಾಹನ ಕಾಯ್ದೆಯ ಪ್ರಕಾರ ನೀವು ಮೋಟರ್ ಸೈಕಲ್, ಸ್ಕೂಟರ್ ಓಡಿಸುವಾಗ ಹೆಲ್ಮೆಟ್ ಧರಿಸದಿದ್ದರೆ ನಿಯಮ 194 ಡಿ MVA ಪ್ರಕಾರ ನಿಮ್ಮ ಮೇಲೆ 1000 ರೂಪಾಯಿಯ ದಂಡ ವಿಧಿಸಲಾಗುವುದು.