Knowledge : ಈ ವಸ್ತುಗಳನ್ನು ಹೋಟೆಲ್ ನಿಂದ ತಂದರೆ ಅಪಾಯ ತಪ್ಪಿದ್ದಲ್ಲ!!!
ಕೆಲಸದ ನಿಮಿತ್ತ ಅಥವಾ ನಾವು ಬೇರೆ ಕಡೆ ಪ್ರಯಾಣಿಸುವಾಗ ಹೊಟೇಲ್ ನಲ್ಲಿ ತಂಗುವುದು ಸಾಮಾನ್ಯ. ಹೀಗೆ ತಂಗುವಾಗ ಹೊಟೇಲ್ ರೂಮಿನಲ್ಲಿ ತರಹೇವಾರಿ ವಸ್ತುಗಳು ಆಕರ್ಷಣೆಯ ಜೊತೆಗೆ ರೂಮಿನ ಚಂದ ಹೆಚ್ಚಿಸಲು ಇಟ್ಟಿರುತ್ತಾರೆ. ಅದರಲ್ಲಿ ಸೋಪ್, ಶಾಂಪೂ, ಟವೆಲ್, ಸ್ವಚ್ಛವಾಗಿರುವ ಬಿಳಿಯ ಬೆಡ್ ಶೀಟ್, ವಾಟರ್ ಬಾಟಲ್ ಹೀಗೆ ನಾನಾ ರೀತಿಯ ವಸ್ತುಗಳು ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತವೆ.
ನಾವು ರೂಮಿನಿಂದ ಚೆಕ್ ಔಟ್ ಮಾಡುವ ವೇಳೆ ತಿಳಿದೋ ಅಥವಾ ತಿಳಿಯದೆಯೋ ಒಂದಿಷ್ಟು ವಸ್ತುಗಳು ನಮ್ಮ ಬ್ಯಾಗ್ ಜಾಗ ಪಡೆದುಕೊಂಡಿರುತ್ತವೆ. ನಮ್ಮ ಈ ನಡೆ ಸರಿಯೋ ತಪ್ಪೊ ಎಂದು ವಿಮರ್ಶೆ ಮಾಡಿಕೊಳ್ಳದೆ, ಸಣ್ಣ ಆಸೆಗೆ ಬಿದ್ದು , ಬೇರೆಯವರ ಮುಂದೆ ತಲೆ ತಗ್ಗಿಸಿ, ನಗೆಪಾಟಲಿಗೆ ಗುರಿಯಾಗುವ ಸನ್ನಿವೇಶ ಎದುರಾಗುವ ಸಾಧ್ಯತೆಗಳಿವೆ.
ಹಾಗಾಗಿ ಹೋಟೆಲ್ ನಲ್ಲಿ ತಂಗುವಾಗ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಅರಿತಿರಬೇಕು. ಹೋಟೆಲ್ ರೂಮ್ ನಲ್ಲಿ ಉಳಿದುಕೊಳುವುದಾದರೆ, ಖಂಡಿತವಾಗಿಯೂ ನೀರಿನ ಬಾಟಲಿ,ಅಥವಾ ರೂಮಿ ನಲ್ಲೆ ನೀರಿಗೆ ಬದಲಿ ವ್ಯವಸ್ಥೆ ಮಾಡಿರುತ್ತಾರೆ. ರೂಮಿನಿಂದ ಚೆಕ್ ಔಟ್ ಮಾಡುವಾಗ ಈ ನೀರಿನ ಬಾಟಲಿ ಒಯ್ದರೆ ಅದು ತಪ್ಪಲ್ಲ. ಆದರೆ, ಮಿನಿ ಬಾರ್ ನಲ್ಲಿರುವ ಬಾಟಲ್ ಗಳಲ್ಲಿ ಬಿಯರ್ ಬಾಟಲಿ, ನೀರಿನ ಬಾಟಲಿ ಮತ್ತಿತರ ವಸ್ತುಗಳಿದ್ದು, ಹಣ ಪಾವತಿಸದೇ ಒಯ್ದರೆ ಪೊಲೀಸರ ಅತಿಥಿಯಾದರೂ ಅಚ್ಚರಿಯಿಲ್ಲ.
ರೂಮಿನಲ್ಲಿ ಟೀ, ಕಾಫಿ ತಯಾರಿಸಲು ಯಂತ್ರ ಇಟ್ಟಿರುವುದು ಎಲ್ಲರಿಗು ಗೊತ್ತಿದೆ. ಅದರ ಜೊತೆಗೆ ಟೀ ಕಿಟ್, ಕಾಫಿ ಕಿಟ್,ಹಾಲಿನ ಪುಡಿ , ಸಕ್ಕರೆ ಹೀಗೆ ಕಾಫಿ ಅಥವಾ ಟೀ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ರೂಮಿಂದ ವೇಕೆಟ್ ಮಾಡುವಾಗ ಒಯ್ಯಬಹುದು. ಹಾಗೆಂದು ಯಂತ್ರವನ್ನಾಗಲಿ, ಹೊಟೇಲ್ ರೂಮಿನ ಹೊರಗಿರುವ ಟೀ ಪ್ಯಾಕೆಟ್ ಗಳನ್ನು ಒಯ್ಯುವಂತಿಲ್ಲ.
ಹೊಟೇಲ್ ರೂಮಿನಲ್ಲಿ ಶೇವಿಂಗ್ ಆಕ್ಸೆಸರೀಸ್, ಸೋಪ್, ಶಾಂಪೂ, ಬಾಡಿ ಲೋಷನ್, ಕಂಡೀಷನರ್, ಶವರ್ ಕ್ಯಾಪ್ ಈ ಕಿಟ್ ಗಳ ಜೊತೆಗೆ ಬಾತ್ರೂಂನಲ್ಲಿ ರುವ ಪೇಸ್ಟ್, ಬ್ರಷ್, ಸೋಪ್ ಇರುವ ಕಿಟ್ ಅನ್ನು ಒಬ್ಬರು ಬಳಸಿದ ವಸ್ತುಗಳನ್ನು ಮತೊಬ್ಬರಿಗೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಈ ಕಿಟ್ ಅನ್ನು ಬಳಕೆದಾರರು ರೂಮಿನಿಂದ ಹೊರಗೆ ಚೆಕ್ ಔಟ್ ಮಾಡುವಾಗ ತೆಗೆದುಕೊಂಡು ಹೋಗಬಹುದು.
ಹೊಟೇಲ್ ನಿಯಮಕ್ಕೆ ವಿರುದ್ಧವಾಗಿ ಹೇರ್ ಡ್ರೈಯರ್, ಬೆಡ್ ಶೀಟ್, ಟಿವಿ ರಿಮೋಟ್ ಗಳನ್ನು ಹೊಟೇಲ್ ರೂಮಿನಿಂದ ಚೆಕ್ ಔಟ್ ಮಾಡುವಾಗ ಬ್ಯಾಗ್ ಗೆ ಹಾಕಿಕೊಂಡರೆ, ಹೊಟೇಲ್ ಸಿಬ್ಬಂದಿ ಅವರ ಮೇಲೆ ಕ್ರಮಕೈಗೊಳ್ಳುವುದರಲ್ಲಿ ಸಂದೇಹವಿಲ್ಲ. ಹೊಟೇಲ್ ರೂಮಿನಲ್ಲಿ ತಂಗುವಾಗ ನಮ್ಮದಲ್ಲದ ಅನಗತ್ಯ ವಸ್ತುಗಳನ್ನು ತರದೆ ಇದ್ದರೆ , ತಾಪತ್ರಯಗಳು ಬರಲು ಸಾಧ್ಯವಿಲ್ಲ.