ಮರುಮದುವೆ ಆಗ್ತಾರಂತೆ ಕೆ.ಎಸ್. ಈಶ್ವರಪ್ಪ ?!
” ನಾನು ಇವತ್ತೇ ಮದುವೆ ಗಂಡು ಆಗೋಕೆ ತಯಾರಿದ್ದೇನೆ ” ಎಂದ ಮಾಜಿ ಸಚಿವ

” ನಾನು ಇವತ್ತೇ ಮದುವೆ ಗಂಡು ಆಗಲು ತಯಾರಾಗಿದ್ದೇನೆ ” ಎಂದು ಹೇಳಿಕೆ ನೀಡಿದ್ದಾರೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಏನಿದು, ಈ ಪ್ರಾಯದಲ್ಲಿ ಅವರು ಮರುಮದುವೆ ಸಡಗರದಲ್ಲಿ ಇದ್ದಾರಾ ಎಂಬ ಅನುಮಾನ ಬರ್ತಿದೆಯೆ?

 

ಹೇಳುವ ಮೂಲಕ ತಾವು ಮಂತ್ರಿಯಾಗಲು ಸಿದ್ಧರಿರುವುದಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜತೆ ಮದುಮಗನಾಗಲು ತಾನು ‘ ಯೆಸ್’ ಎಂದಿದ್ದಾರೆ ಕೆ ಎಸ್ ಈಶ್ವರಪ್ಪನವರು. ಮಂತ್ರಿ ಸ್ಥಾನ ನೀಡದಿದ್ದಕ್ಕೆ ನೀವು ಅಸಮಾಧಾನಗೊಂಡಿದ್ದಾರಾ? ಇದಕ್ಕಾಗಿಯೇ ಸದನಕ್ಕೆ ಹಾಜರಾಗುತ್ತಿಲ್ಲವಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರನ್ನು ಕೇಳಬೇಕು. ನನ್ನನ್ನು ಕೇಳಿದರೆ ನಾನು ಏನು ಹೇಳುವುದಕ್ಕೆ ಆಗುತ್ತದೆ. ಇವತ್ತು ಬಂದು ಮಂತ್ರಿ ಆಗು ಅಂದರೆ ಇವತ್ತೆ ಆಗುತ್ತೇನೆ. ಇದೆಲ್ಲಾ ನನ್ನ ಕೈಯಲ್ಲಿ ಇಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರದ ನಾಯಕರು ಚರ್ಚೆ ಮಾಡಬೇಕು. ಆದರೆ ಅವರು ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಗೊತ್ತಿಲ್ಲ ಈಶ್ವರಪ್ಪನವರು ಹೇಳಿದ್ದಾರೆ.

ಎಷ್ಟು ಖಾಲಿ ಇದೆಯೋ ಅದೆಲ್ಲಾ ಭರ್ತಿ ಮಾಡಲಿ ಎನ್ನುವುದು ನನ್ನ ಅಪೇಕ್ಷೆ. ಆರೋಪ ಮುಕ್ತರಾದ ಮೇಲೆ ಅವಕಾಶ ಕೊಡುತ್ತೇವೆ ಅಂದಿದ್ದರು. ಹಾಗಾಗಿ ನೀವು ಈ ಪ್ರಶ್ನೆಯನ್ನು ಈಗ ಅವರಿಗೆ ಹೋಗಿ ಕೇಳಿ. ನಾನು ಇವತ್ತು ಮದುವೆ ಗಂಡು ಆಗುವುದಕ್ಕೆ ತಯಾರಿದ್ದೇನೆ. ತೀರ್ಮಾನ ಮಾಡಬೇಕಾದವರು ಹಿರಿಯರು. ಅವರೇನು ಮಾಡಲಿಲ್ಲ ಅಂದರೆ ನಾನೇನು ಮಾಡಲಿ ಎಂದು ಹೇಳಿದ್ದಾರೆ.

ನನ್ನ ಮನೆ ದೇವರು ಚೌಡೇಶ್ವರಿ ಈ ಆರೋಪದಿಂದ ನನ್ನನ್ನು ಮುಕ್ತ ಮಾಡಿದ್ದಾಳೆ. ನಾನು ಆರೋಪ ಮುಕ್ತ ಆಗಿರುವುದರಿಂದ ಸಿಎಂ, ಯಡಿಯೂರಪ್ಪ, ಕಟೀಲ್ ಬೇಗ ತೀರ್ಮಾನ ತೆಗೆದುಕೊಳ್ಳಬೇಕು. ನನ್ನ ಪ್ರಕರಣವೇ ಬೇರೆ, ಬೇರೆಯವರ ಪ್ರಕರಣವೇ ಬೇರೆ ಹೀಗಾಗಿ ನಮ್ಮ ನಾಯಕರು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.