ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಸರ್ಕಾರದಿಂದ ವಿಮಾ ಮೊತ್ತ’ದ (KGID) ಮೇಲಿನ ಬೋನಸ್ ಘೋಷಣೆ

ರಾಜ್ಯ ಸರ್ಕಾರಿ ನೌಕರರ ( Karnataka Government Employees ) ಭರ್ಜರಿ ಸಿಹಿ ಸುದ್ದಿಯೊಂದನ್ನು ರಾಜ್ಯ ಸರಕಾರ ನೀಡಿದೆ. ಅದೇನೆಂದರೆ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಬೋನಸ್ ಘೋಷಣೆ ಮಾಡಿ ಸರ್ಕಾರ ಆದೇಶಿಸಿದೆ. ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.85ರಂತೆ ಲಾಭಾಂಶ ನೀಡಿ ಆದೇಶಿಸಿದೆ. ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ‌ ಬಗ್ಗೆ ನಡವಳಿಗಳನ್ನು ಹೊರಡಿಸಿ ಆದೇಶಿಸಿದ್ದಾರೆ.

ದಿನಾಂಕ 01-04-2016ರಿಂದ 31-03-2018ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.85ರಂತೆ ಲಾಭಾಂಶ ( Bonus ) ನೀಡಿ ಆದೇಶಿಸಲಾಗಿದೆ.

ಇದಲ್ಲದೇ ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ 01-04-2018 ರಿಂದ 31-03-2020ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.85ರಂತೆ ಮಧ್ಯಂತರ ಲಾಭಾಂಶವನ್ನು (Interim Bonus ) ನೀಡಲಾಗಿದೆ ಎಂದಿದ್ದಾರೆ.

ಈ ಆದೇಶದಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ 01-04-2016 ರಿಂದ 31-03 2018ಕ್ಕೆ ಅಂತ್ಯಗೊಂಡ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಿ, ಸರ್ಕಾರ ಮಂಜೂರಾತಿ ನೀಡಿದೆ ಎಂದಿದ್ದಾರೆ.

ಇನ್ನೂ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ನಿರ್ವಹಿಸುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ 2016-18ರ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯನ್ನು ಆಧರಿಸಿ, ಈ ಕೆಳಕಂಡಂತೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡಿದೆ.

Leave A Reply