PCOS ಬಗ್ಗೆ ತಿಳಿಯಬೇಕಾದ ಮುಖ್ಯವಾದ ಮಾಹಿತಿ | ಈ ಸಮಸ್ಯೆಯ ನಿಯಂತ್ರಣ ಹೀಗೆ ಮಾಡಿ
ಒತ್ತಡದ ದಿನಚರಿಯನ್ನು ಪಾಲಿಸುವ ಅನೇಕ ಮಹಿಳೆಯರಲ್ಲಿ ಋತು ಚಕ್ರದಲ್ಲಿ ಬದಲಾವಣೆಯಾಗಿ ಪಿಸಿಓಎಸ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಪಿಸಿಓಎಸ್ ಸಮಸ್ಯೆಯಿಂದ ಮುಖ ಹಾಗೂ ದೇಹದ ಭಾಗಗಳಲ್ಲಿ ಅನಗತ್ಯ ಕೂದಲು ಬೆಳೆಯಲು ಕಾರಣವಾಗುತ್ತಿರುವುದಲ್ಲದೆ ಮಧುಮೇಹ ಮತ್ತು ಹೃದಯದ ಕಾಯಿಲೆಗಳಂತಹ ದೀರ್ಘಕಾಲದ ಸಮಸ್ಯೆಗಳಿಗೂ ಕಾರಣವಾಗಬಹುದು.
ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಎಂದರೆ ಪಿಸಿಓಎಸ್ ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮಹಿಳೆಯರಲ್ಲಿ ಹಾರ್ಮೋನ್ ಏರುಪೇರಿನಿಂದಾಗಿ ಉಂಟಾಗುವ ಈ ಸಮಸ್ಯೆ , ಪುರುಷ ಹಾರ್ಮೋನುಗಳನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಪಿಸಿಒಎಸ್ ಸಮಸ್ಯೆ ಇರುವವರಿಗೆ ಅಸಮರ್ಪಕ ಋತುಸ್ರಾವ ಅಥವಾ ಋತುಚಕ್ರ ಇಲ್ಲದಿರುವಿಕೆ ಉಂಟಾಗುತ್ತದೆ. ಅಂದರೆ ವರ್ಷದಲ್ಲಿ ೮ ಬಾರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಮುಟ್ಟಾಗುವುದು. ಕೆಲವರಿಗೆ 4 ತಿಂಗಳು ಅಥವಾ ಹೆಚ್ಚಿನ ಸಮಯ ಮುಟ್ಟಾಗುವುದಿಲ್ಲ. ಅಲ್ಲದೆ ಗರ್ಭದಾರಣೆಯಾಗದೆ ಇರುವ ಸಾಧ್ಯತೆಯಿದೆ.
ಮುಖ ಅಥವಾ ದೇಹದ ಇತರ ಭಾಗಗಳಲ್ಲಿ ಕೂದಲು ಹೆಚ್ಚಾಗಿರುವಿಕೆ, ತಲೆಯ ಕೂದಲು ಉದುರುವಿಕೆ, ಮುಖದಲ್ಲಿ ಮೊಡವೆ, ಸ್ಥೂಲಕಾಯ ಅಥವಾ ಬೊಜ್ಜು ಗರ್ಭಧಾರಣೆ ಧರಿಸಲು ಕಷ್ಟವಾಗುವಿಕೆ, ಖಿನ್ನತೆ ಮತ್ತು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಪಿಸಿಓಎಸ್ ಮಹಿಳೆಯರಲ್ಲಿ 15 ರಿಂದ 44 ವರ್ಷ ವಯಸ್ಸಿನವರಲ್ಲಿ ಕಾಣಸಿಕೊಳ್ಳುವ ಹಾರ್ಮೋನುಗಳ ಸಮಸ್ಯೆಯಾಗಿದೆ. ಈ ವಯಸ್ಸಿನ 2.2 ಮತ್ತು 26.7 ಪ್ರತಿಶತ ಮಹಿಳೆಯರಲ್ಲಿ ಪಿಸಿಓಎಸ್ ಕಾಣಿಸಿಕೊಳ್ಳುತ್ತದೆ.
ಪಿಸಿಓಎಸ್ ಮಹಿಳೆಯ ಅಂಡಾಶಯಗಳ ಮೇಲೆ ಪರಿಣಾಮ ಬೀರುತ್ತದೆ, ಸಂತಾನೋತ್ಪತ್ತಿ ಅಂಗಗಳು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಅನ್ನು ಉತ್ಪಾದಿಸುವ ಮೂಲಕ ಋತುಚಕ್ರವನ್ನು ನಿಯಂತ್ರಿಸುತ್ತವೆ. ಆಂಡ್ರೋಜೆನ್ ಎಂಬ ಸಣ್ಣ ಪ್ರಮಾಣದ ಪುರುಷ ಹಾರ್ಮೋನುಗಳನ್ನು ಸಹ ಉತ್ಪಾದಿಸುತ್ತವೆ. ಆಂಡ್ರೋಜೆನ್ ಜಾಸ್ತಿಯಾದಾಗ ಋತುಚಕ್ರ ಏರುಪೇರಾಗಿ ಪಿಸಿಓಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣಗಳೆಂದರೆ ಹಾರ್ಮೋನ್ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಒತ್ತಡ, ವ್ಯಾಯಾಮದ ಕೊರತೆ, ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಕೂಡ ಪಿಸಿಒಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣ, ಅನುವಂಶೀಯತೆಯ ಪ್ರಭಾವವೂ ಇದೆ.
ಪರಿಹಾರ ಕ್ರಮಗಳು:
ಪ್ರತಿದಿನ ವಾಕಿಂಗ್ ಮನಸ್ಸನ್ನು ಆರಾಮವಾಗಿರಿಸಲು ಮತ್ತು ದೇಹದ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದು ಅಂತಿಮವಾಗಿ ಹಾರ್ಮೋನ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪದ್ಮಾಸನ, ಶವಾಸನ, ಬಟರ್ ಫ್ಲೈ ಫೋಸ್, ಭಾರಧ್ವಜಾಸನ ಈ ಯೋಗಾಸನ ಪಿಸಿಒಎಸ್ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ, ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಕೊಬ್ಬು ಕರಗುವುದು ಹಾಗೂ ಆರೋಗ್ಯ ವೃದ್ಧಿಯಾಗುವುದು.
ಹಸಿ ತರಕಾರಿ, ಸೊಪ್ಪಿನ ಪಲ್ಯ, ಕಾಳು ಪಲ್ಯ ಊಟದ ಜೊತೆ ಇರಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸುವುದು ಉತ್ತಮ. ಪಿಸಿಓಎಸ್‌ಗೆ ಮುಖ್ಯ ಕಾರಣವೆಂದರೆ ಇನ್ಸುಲಿನ್ ಪ್ರತಿರೋಧ, ಆದ್ದರಿಂದ ಸಕ್ಕರೆ ಮತ್ತು ರಿಫೈನರಿ ಕಾರ್ಬೋಹೈಡ್ರೇಟ್‌ಗಳಂತಹ ಸರಳ ಕಾರ್ಬ್‌ಗಳನ್ನು ತಪ್ಪಿಸುವ ಮೂಲಕ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿ ಇರಿಸಿಕೊಳ್ಳಬೇಕು.ಗ್ರೀನ್ ಟೀ ಇನ್ಸುಲಿನ್ ಸೂಕ್ಷ್ಮತೆ ಹಾಗೂ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಸುಧಾರಣೆ ಮಾಡುವಲ್ಲಿ ತುಂಬಾ ಸಹಕಾರಿ. ಇನ್ಸುಲಿನ್ ಮಟ್ಟವು ಅಧೀಕವಾಗಿದ್ದರೆ ಆಗ ಟೆಸ್ಟೊಸ್ಟೆರಾನ್ ಮಟ್ಟವು ಹೆಚ್ಚಾಗುವುದು ಮತ್ತು ಪಿಸಿಒಎಸ್ ನ ಅಸಾಮಾನ್ಯ ಲಕ್ಷಣಕ್ಕೆ ಕಾರಣವಾಗುವುದು. ಪ್ರತಿನಿತ್ಯ ಎರಡರಿಂದ ಮೂರು ಕಪ್ ಗ್ರೀನ್ ಟೀ ಕುಡಿದರೆ ಅದರಿಂದ ಹೆಚ್ಚಿನ ಆರೋಗ್ಯ ಲಾಭಗಳು ಸಿಗುವುದು.
ಹಾರ್ಮೋನುಗಳು ಸರಿಯಾಗಿ ಉತ್ಪತ್ತಿಯಾಗಲು ಪೌಷ್ಟಿಕಾಂಶದ ಬೆಂಬಲವು ತುಂಬಾ ಅವಶ್ಯಕವಾಗಿದೆ. ಪೋಷಕಾಂಶಗಳಾದ ಮೆಗ್ನೀಸಿಯಮ್, ಸತು, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ಫೋಲೇಟ್ ಪಿಸಿಓಎಸ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ತುಳಸಿ ಸೇವನೆ ಮಾಡುವ ಕಾರಣದಿಂದ ಅದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವುದು. ದ್ವಿದಳ ಧಾನ್ಯಗಳು ಬೀನ್ಸ್, ಸೋಯಾ ಬೀನ್ಸ್‌ಗಳಲ್ಲಿ ಸಿಗುವ ಇನೊಸಿಟಾಲ್ ಎಂಬ ವಿಟಮಿನ್‍ನಂತಹ ಅಂಶದಿಂದ ಇನ್ಸುಲಿನ್ ಹೆಚ್ಚಳವಾಗಿ, ಪ್ರತಿರೋಧದ ನಿಯಂತ್ರಣವಾಗಿ ಅಂಡ್ರೊಜನ್ ಹೆಚ್ಚಳವಾಗುವುದನ್ನು ತಡೆಗಟ್ಟುವುದು.
ನಿದ್ರಾಹೀನತೆಯಿಂದಾಗಿ ಒತ್ತಡದ ಮಟ್ಟವು ಕಾಡುವುದು ಮತ್ತು ಹಾರ್ಮೋನು ಅಸಮತೋಲನ ಕಂಡುಬರುವುದು. ನಿದ್ರೆಯಲ್ಲಿ ವ್ಯತ್ಯಯವಾದರೆ ಆಗ ಮಹಿಳೆಯರಲ್ಲಿ ಪಿಸಿಒಎಸ್ ಕಾಡುವುದು ಹೆಚ್ಚು. ಇದನ್ನು ಕಡಿಮೆ ಮಾಡಿಕೊಳ್ಳಲು 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಹೀಗಾಗಿ ಎಲ್ಲಾ ಪೋಷಕಾಂಶಗಳು ಸಿಗುವ ರೀತಿಯಲ್ಲಿ, ದಿನದಲ್ಲಿ ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸಿದರೆ ಪಿಸಿಓಎಸ್ ಸಮಸ್ಯೆಯಿಂದ ಹೊರಬರಬಹುದಾಗಿದೆ.