Google Hangouts : ನವೆಂಬರ್ 1 ರಿಂದ ಗೂಗಲ್ ಹ್ಯಾಂಗೌಟ್ಸ್ ಸ್ಥಗಿತ
ತನ್ನದೇ ವೈಶಿಷ್ಟ್ಯದಿಂದ ಜನರ ಮನದಲ್ಲಿ ಹೆಸರು ಪಡೆದಿರುವ ಗೂಗಲ್ 2020 ರಲ್ಲಿ ಗೂಗಲ್ ಚಾಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅಂದಿನಿಂದ ಕಂಪನಿಯು ಗೂಗಲ್ ಹ್ಯಾಂಗ್ಔಟ್ನಿಂದ ಗೂಗಲ್ ಚಾಟ್‌ಗೆ ಬದಲಾಯಿಸಲು ತನ್ನ ಬಳಕೆದಾರರನ್ನು ಪ್ರೋತ್ಸಾಹಿಸುತ್ತಿದೆ. ಗೂಗಲ್ ಹ್ಯಾಂಗೌಟ್ ಉಚಿತ ಅಪ್ಲಿಕೇಶನ್ ಆಗಿದ್ದು, ಸಂದೇಶಗಳನ್ನು ಕಳುಹಿಸಲು ಮತ್ತು ಉತ್ತಮ ಗುಣಮಟ್ಟದ ಧ್ವನಿ ಹಾಗೂ ವೀಡಿಯೊ ಕರೆಗಳನ್ನು ಮಾಡಲು ನೆರವಾಗುತ್ತಿದೆ.
9 ವರ್ಷಗಳ ಹಿಂದೆ ಆರಂಭಗೊಂಡ ಗೂಗಲ್ ಹ್ಯಾಂಗೌಟ್ ಇದೀಗ ನವೆಂಬರ್ 1 ರಿಂದ ಮಲ್ಟಿ ಪ್ಲಾಟ್‌ಫಾರ್ಮ್ಇನ್‌ಸ್ಟಾಂಗ್ ಮೆಸೇಜಿಂಗ್ ಆ್ಯಪ್ ಗೂಗಲ್ ಹ್ಯಾಂಗೌಟ್ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಕಂಪನಿಯು ಈ ವರ್ಷದ ಆರಂಭದಲ್ಲಿ ತನ್ನ ಹ್ಯಾಂಗ್ಔಟ್ಸ್ ಪ್ಲಾಟ್‌ಫಾರ್ಮ್ ಅನ್ನು ಸ್ಥಗಿತಗೊಳಿಸಿ ಅದನ್ನು ಡೀಫಾಲ್ಟ್ ಚಾಟ್ ಅಪ್ಲಿಕೇಶನ್‌ಗೆ ಸರಿಸುವುದಾಗಿ ಘೋಷಿಸಿದ್ದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಗೂಗಲ್ ತನ್ನ ಹ್ಯಾಂಗೌಟ್ ಗ್ರಾಹಕರಿಗೆ ನೂತನ ಗೂಗಲ್ ಚಾಟ್ ಆ್ಯಪ್ ಸೇರಿಕೊಳ್ಳಲು ನೋಟಿಫಿಕೇಶನ್ ನೀಡಿದೆ.
ಹ್ಯಾಂಗೌಟ್ ಸ್ಥಗಿತಗೊಂಡ ಬಳಿಕ ಬಳಕೆದಾರರಿಗೆ ಚಾಟ್ ಹಿಸ್ಟರಿ, ಡೇಟಾ ಕಣ್ಮರೆಯಾಗುತ್ತವೆ. ಹಾಗಾಗಿ ಸಂದೇಶಗಳ ನಕಲು ಬೇಕಿದ್ದಲ್ಲಿ ಮೆಸೇಜ್ ಅನ್ನು ಹ್ಯಾಂಗ್ಔಟ್ಸ್ನಿಂದ ತೆಗೆದುಹಾಕುವ ಮೊದಲು ಬಳಕೆದಾರರ ಚಾಟ್, ಡೇಟಾವನ್ನು ಹಿಸ್ಟರಿ ಆಯ್ಕೆಯಲ್ಲಿ ತೆರಳಿ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ. ಇದಲ್ಲದೆ ಗೂಗಲ್ ಹ್ಯಾಂಗೌಟ್ ಬಳಕೆದಾರರು ಈಗಾಗಲೇ ತಮ್ಮ ಹ್ಯಾಂಗೌಟ್ ಮೂಲಕ ನಡೆಸಿರುವ ಚಾಟ್ ಹಿಸ್ಟರಿ, ಮೆಸೇಜ್ ಸಂಪೂರ್ಣವಾಗಿ ಗೂಗಲ್ ಚಾಟ್‌ಗೆ ರವಾನೆಯಾಗಿ, ಗ್ರಾಹಕರ ಸಂಪೂರ್ಣ ಹಿಸ್ಟರಿ ಚಾಟ್‌ನಲ್ಲಿ ದೊರೆಯಲಿದೆ. 2023ರ ಜನವರಿಯಿಂದ ವೆಬ್ ವರ್ಶನ್ ಗೂಗಲ್ ಹ್ಯಾಂಗೌಟ್ ಕೂಡ ಸ್ಥಗಿತಗೊಳ್ಳಲಿದೆ.
ಗೂಗಲ್ ಟೇಕೌಟ್ ಮೂಲಕ ಗೂಗಲ್ ಹ್ಯಾಂಗೌಟ್ ಚಾಟ್, ಡೇಟಾ, ಮೀಡಿಯಾ ಡೌನ್ಲೋಡ್ ಮಾಡಿಕೊಳ್ಳಲು ಹ್ಯಾಂಗೌಟ್ ಆ್ಯಪ್ಸ್ ಕ್ಲಿಕ್ ಮಾಡಿ, ನೆಕ್ಸ್ಟ್ ಸ್ಟೆಪ್ ಕ್ಲಿಕ್ ಮಾಡಬೇಕು. ಬಳಿಕ ಒನ್ ಟೈನ್ ಡೌನ್ಲೋಡ್ ಫಾರ್ ಬ್ಯಾಕ್ ಅಪ್ ಕ್ಲಿಕ್ ಮಾಡಬೇಕು. ಫೈಲ್ ಟೈಪ್ ಅನ್ನು ಕೂಡ ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು. ಬಳಿಕ ಎಕ್ಸ್‌ಪೋರ್ಟ್ ಮೀಡಿಯಾ ಕ್ಲಿಕ್ ಮಾಡಬೇಕು. ಈ ವೇಳೆ ಗೂಗಲ್ ಹ್ಯಾಂಗೌಟ್ ಫೈಲ್ ರವಾನೆಯಾದ ಸಂದೇಶ ಕಳುಹಿಸುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಹ್ಯಾಂಗೌಟ್ ಸೈನ್ ಇನ್ ವೇಳೆ ನೀಡಿರುವ ಇ ಮೇಲ್‌ಗೆ ಸಂದೇಶ ಬರಲಿದ್ದು, ಮೇಲ್‌ನಲ್ಲಿ ಬಂದಿರುವ ಫೈಲ್ ಡೌನ್ಲೋಡ್ ಮಾಡಿಕೊಳ್ಳಬೇಕು.