ರೊಮ್ಯಾಂಟಿಕ್ ರೈಡ್ ಹೊರಟಿರೋ ಅಜ್ಜ ಅಜ್ಜಿ | ಏನ್ ಡ್ರೈವ್ ಗುರೂ!!!

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ….ಎಂಬ ಮಾತಿನಂತೆ ಸಾಗುವ ಪಯಣ ಸರಿಯಾಗಿ ಸ್ಪಷ್ಟವಾಗಿದ್ದರೆ ಗುರಿ ತಲುಪಲು ಹಿಂಜರಿಯಬೇಕಾಗಿಲ್ಲ. ವಯಸ್ಸಾದ ಮಹಿಳೆಯೊಬ್ಬರು, ಪತಿಯನ್ನು ಹಿಂದೆ ಕೂರಿಸಿಕೊಂಡು ಪ್ರಯಾಣಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿ ಹೆಚ್ಚಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಣ್ಣು ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಮಾತನ್ನು ಅಲ್ಲಗಳೆದು, ಸ್ತ್ರೀಶಕ್ತಿ ಜಾಗೃತವಾಗುತ್ತಾ ಹೋಗಿ ಗಂಡು- ಹೆಣ್ಣು ಎಂಬ ಬೇಧ- ಭಾವದ ಕಂಡಿ ಕಳಚಿ ಇಬ್ಬರೂ ಸಮಾನರು ಎಂಬ ತತ್ವ ಜಾಗೃತವಾದಾಗ ಪರಸ್ಪರ ಸಂಘರ್ಷಗಳು ಹುಟ್ಟುವುದಿಲ್ಲ. ಎಲ್ಲೆಡೆಯೂ ಪತ್ನಿಯನ್ನು ಹಿಂದೆ ಕೂರಿಸಿಕೊಂಡು ಪ್ರಯಾಣಿಸುವುದು ಅತೀ ಸಾಮಾನ್ಯ. ಪತಿಯನ್ನು, ಪತ್ನಿಯು ತನ್ನ ಹಿಂದೆ ಕೂರಿಸಿಕೊಂಡು ಗಾಡಿ ಓಡಿಸುವುದು ಈಗಿಗಲಂತೂ ಸಾಮಾನ್ಯ.

ವಯಸ್ಸಾದ ಮಹಿಳೆ ಗಾಡಿ ಓಡಿಸುತ್ತಿದ್ದು, ಅವರ ಪತಿ ಹಿಂದೆ ಆಸೀನರಾಗಿರುವ ಅಪರೂಪದ ವಿಡಿಯೋ ವೈರಲ್ ಆಗಿದೆ. ಕಲಿಯುವಿಕೆಗೆ ಎಂದಿಗೂ ಲಿಂಗಬೇಧವಿಲ್ಲ, ವಯೋಬೇಧವಿಲ್ಲ, ಬೇಕಿರುವುದು ದೃಢಮನಸ್ಸು ಎಂಬುದನ್ನು ಸಾಬೀತುಪಡಿಸಿರುವ ವಿಡಿಯೋದಲ್ಲಿರುವ ಮಹಿಳೆಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇವರಿಂದ ಉಳಿದವರಿಗೆ ಸ್ಫೂರ್ತಿ ಪಡೆದು ಸಾಧನೆ ಮಾಡಲು ಪ್ರೇರಣೆ ಯಾದರೂ ಅಚ್ಚರಿಯಿಲ್ಲ. ಸುಸ್ಮಿತಾ ಡೋರಾ ಎಂಬ ಫೋಟೋಗ್ರಾಫರ್​ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕಪಲ್​ ಗೋಲ್ಸ್​ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು 3ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

https://www.instagram.com/reel/CiCPJt4pP7i/?utm_source=ig_web_copy_link

Leave A Reply

Your email address will not be published.