ಮದುವೆಯ ಗುಟ್ಟನ್ನು ರಟ್ಟು ಮಾಡಿದ ಧನು | ಯಾವಾಗ ಮದ್ವೆ ಆಗ್ತೀನಿ ಅಂತ ಬಾಯಿ ಬಿಟ್ಟ ಡಾಲಿ
ಜಯನಗರ ಫೋರ್ಥ್ ಬ್ಲಾಕ್ ಎಂಬ ಯು ಟ್ಯೂಬ್ ಕಂಟೆಂಟ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು ಧನಂಜಯ್. ವಿಲನ್ ಆಗಿ ತಾನು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆಯನ್ನಿಟ್ಟ ಡಾಲಿ ಟಗರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸಖತ್ತಾಗಿ ನಟಿಸಿದ್ದಾರೆ. ‘ಡಾಲಿ’ ಖ್ಯಾತಿಯ ನಟ ಧನಂಜಯ್ ಅವರು ‘ವಿಜಯ ಕರ್ನಾಟಕ’ದ ಜೊತೆಗಿನ ಫೇಸ್‌ಬುಕ್ ಲೈವ್ ವೇಳೆ ಲವ್, ಮದುವೆ, ಸಿನಿಮಾ, ಲಾಕ್‌ಡೌನ್ ಮುಂತಾದ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದರು ಸಖತ್ ಗಮ್ಮತ್ತಾಗಿ ಮಾತನಾಡಿದ್ದಾರೆ.
ಡಾಲಿ ಧನಂಜಯ್ ಸಿನಿಮಾದಿಂದ ಸಿನಿಮಾಗೆ ಬೇರೆ ಬೇರೆ ಅವತಾರ ತಾಳುತ್ತಿದ್ದಾರೆ. ಅವರು ನಿರ್ವಹಿಸುವ ಪ್ರತಿ ವಿಭಿನ್ನ ಪಾತ್ರವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ, ಈಗ ಡಾಲಿ ಜೋಕರ್ ಆಗಿದ್ದಾರೆ! ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹೀಗೊಂದು ಫೋಟೋ ವೈರಲ್ ಆಗಿದೆ.
ವಿಶ್ವಾದ್ಯಂತ ತೆರೆಕಂಡ ಹಾಲಿವುಡ್ನ ‘ಜೋಕರ್’ ಸಿನಿಮಾ ಎಲ್ಲಡೆ ಸದ್ದು ಮಾಡುತ್ತಿದೆ. ಈ ಚಿತ್ರದ ಪೋಸ್ಟರ್ಗೆ ಡಾಲಿ ಧನಂಜಯ್ ಮುಖವನ್ನು ಅಂಟಿಸಿದ್ದಾರೆ. ಎಡಿಟ್ ಮಾಡಿದ ಈ ಫೋಟೋ ನೋಡಿದವರಿಗೆ ಹಾಲಿವುಡ್ನ ಜೋಕರ್ ಪೋಸ್ಟರ್ಅನ್ನು ಮರೆಸುವಂತಿದೆ. ಕೆಲವರು ಇದನ್ನು ಅಸಲಿ ಎಂದು ನಂಬಿದ್ದಾರೆ. ಹೀಗಾಗಿ, ಯಾವುದು ಈ ಸಿನಿಮಾ? ಯಾರು ಡೈರೆಕ್ಟರ್? ಎಂಬಿತ್ಯಾದಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಡಾಲಿ ಮುಂದಿನ ಸಿನಿಮಾ ‘ಪಾಪ್ಕಾರ್ನ್ ಮಂಕಿ ಟೈಗರ್’ ಫಸ್ಟ್ ಲುಕ್ ಬಳಕೆ ಮಾಡಿಕೊಂಡು ಜೋಕರ್ ಪೋಸ್ಟರ್ ಎಡಿಟ್ ಮಾಡಲಾಗಿದೆಯಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಸಂತೋಷ ವ್ಯಕ್ಯಪಡಿಸಿದ್ದಾರೆ. “ಸಕತ್ತಾಗಿ ಎಡಿಟ್ ಮಾಡುತ್ತೀರಿ. ನಿಮ್ಮ ಕಲ್ಪನೆಗೆ ನನ್ನ ಒಂದು ಸಲಾಮ್,”ಎಂದಿದ್ದಾರೆ.
ಧನಂಜಯ್ ಕೈಯಲ್ಲಿ ಸದ್ಯ ‘ಪಾಪ್ಕಾರ್ನ್ ಮಂಕಿ ಟೈಗರ್’ ಸೇರಿ 7-8 ಸಿನಿಮಾಗಳಿವೆ. ದುನಿಯಾ ಸೂರಿ ನಿರ್ದೇಶನ ಮಾಡುತ್ತಿರುವ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಡಾಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಅಭಿನಯದ ‘ಯುವರತ್ನ’ ಸಿನಿಮಾದಲ್ಲೂ ಡಾಲಿ ಬಣ್ಣ ಹಚ್ಚುತ್ತಿದ್ದಾರೆ.
ಇವೆಲ್ಲದರ ನಡುವೆ ಇವರ ಸುದ್ದಿ ಒಂದು ವೈರಲ್ ಆಗ್ತಾ ಇದೆ. ಒಂದು ಸಂದರ್ಶನದಲ್ಲಿ ತಮ್ಮ ಮದುವೆಯ ಬಗ್ಗೆ ಸತ್ಯವನ್ನು ಬಯಲು ಮಾಡಿದ್ದಾರೆ. ” ಯಾಕೆ ನನಗೆ ಮದುವೆ? ಪ್ರಭಾಸ್ ಗೆ ಎಷ್ಟು ವಯಸ್ಸಾಯಿತು, ಅವರಿನ್ನೂ ಮದುವೆ ಆಗಿಲ್ಲ. ಅವರು ಯಾವಾಗ ಆಗುತ್ತರೋ ಆಗ್ಲೇ ನಾನು ಆಗೋದು” ಅಂತ ಖಡಕ್ ಆಗಿ ಉತ್ತರವನ್ನು ನೀಡಿದ್ದಾರೆ.