ಮೊಬೈಲ್ ಬಳಕೆದಾರರೇ ಎಚ್ಚರ! ನಿಮ್ಮ ಖಾತೆನೂ ಆಗಬಹುದು ಖಾಲಿ | ಈ ವಂಚನೆಯಿಂದ ಪಾರಾಗಲು ಇಲ್ಲಿದೆ ಸೂತ್ರ
ವಿದ್ಯುತ್ ಬಿಲ್, ಫೋನ್ ಬಿಲ್, ವಾಟರ್ ಬಿಲ್ ಗಳ ಪಾವತಿ ಆನ್ಲೈನ್ ಶಾಪಿಂಗ್, ಹಣಕಾಸು ವ್ಯವಹಾರಗಳು ಹೀಗೆ ಮೊಬೈಲು ಬ್ಯಾಂಕಿಂಗ್ ಅನ್ನುವುದು ಬದುಕನ್ನು ಸುಲಭಗೊಳಿಸಿದೆ. ಆದರೆ, ಎಚ್ಚರ ತಪ್ಪಿದರೆ ನಿಮ್ಮ ಖಾತೆಯಲ್ಲಿನ ಹಣ ಕ್ಷಣದಲ್ಲಿಯೇ ಬರಿದಾಗುತ್ತದೆ.
ಹೌದು. ಆಂಡ್ರಾಯ್ಡ್ ಮೊಬೈಲ್ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು, ಇದೀಗ ” ಸೋವಾ (SOVA)” ಎನ್ನುವ ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ವೈರಸ್ ಲಗ್ಗೆ ಇಟ್ಟಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಸೆಕ್ಯೂರಿಟಿ ಏಜೆನ್ಸಿ ಸಲಹೆ ನೀಡಿದೆ.
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್ ದಾಳಿ ಮಾಡುತ್ತಿದೆ. ಅಮೆರಿಕ, ರಷ್ಯಾ ಮತ್ತು ಸ್ಪೆಂಡ್ ಬಳಿಕ ಈಗ ಭಾರತೀಯ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ.
ಜುಲೈನಲ್ಲಿ ಮೊದಲ ಸಲ ಈ ವೈರಸ್ ಭಾರತದಲ್ಲಿ ಕಂಡು ಬಂತು. ಈಗ ಮತ್ತಷ್ಟು ಅಪಗ್ರೇಡ್ ಆಗಿದ್ದು ಹಾವಳಿ ಮಿತಿ ಮೀರುತ್ತಿದೆ. ಮೊಬೈಲ್ ಪ್ರವೇಶಿಸುವ ಈ ವೈರಸ್ ಅನ್ನು ರಿಮೂವ್ ಮಾಡುವುದು ಕಷ್ಟ. ಏಕೆಂದರೆ ಇದು ಆಂಡ್ರಾಯ್ಡ್ ಆಪ್ ಗಳ ಜೊತೆಯಲ್ಲಿ ಅಡಗಿ ಕೊಳ್ಳುತ್ತದೆ.
ವಂಚನೆಯಿಂದ ಪಾರಾಗಲು ಆರು ಸೂತ್ರಗಳು ಯಾವುದು?
*ಮೊಬೈಲ್ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವವರು ತಮ್ಮ ಖಾತೆಗೆ ಎರಡು ಹಂತದ ಅಥೆಂಟಿಕೇಶನ್ ವ್ಯವಸ್ಥೆಯನ್ನು ಬಳಸಬೇಕು
*ಬ್ಯಾಂಕಿಂಗ್ ಆಪ್ ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕು
*ಕಡ್ಡಾಯವಾಗಿ ಉತ್ತಮವಾದ ಆಂಟಿವೈರಸ್ ಅನ್ನು ಮೊಬೈಲ್ ನಲ್ಲಿ ಬಳಸಬೇಕು.
*ಮೊಬೈಲ್ ಗೆ ಬರುವ ಯಾವುದೇ ಲಿಂಕ್ ಗಳನ್ನು ಯೋಚಿಸದೆ ಕ್ಲಿಕ್ ಮಾಡಬಾರದು.
*ಆಪ್ ಗಳು, ಓ ಎಸ್ ಮತ್ತು ಬ್ರೌಸರ್ ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿ. ಅಧಿಕೃತ ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡ ಅಪ್ಲಿಕೇಶನ್ಗಳನ್ನು ಮಾತ್ರ ಬಳಕೆ ಮಾಡಿ *ಪಬ್ಲಿಕ್ ವೈಫೈ ಬೆಳಗ್ಗೆ ಮಾಡುವುದನ್ನು ಆದಷ್ಟು ತಪ್ಪಿಸಿ.