ಈಕೆ ಬುರ್ಖಾ ತೆಗೆದು ಮುಖ ತೋರಿಸುತ್ತಿದ್ದಂತೆ ಪ್ರಜ್ಞೆ ತಪ್ಪಿ ಬೀಳೋ ಅಂಗಡಿ ಮಾಲೀಕರು | ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡುವ ಮೂಲಕ ಕಳ್ಳತನ!

ಇಂದು ಯಾವೆಲ್ಲ ರೀತಿಲಿ ಕಳ್ಳತನ ಮಾಡುತ್ತಾರೆ ಎಂದು ಹೇಳುವುದೇ ಅಸಾಧ್ಯ. ವೆರೈಟಿ ವೆರೈಟಿಯಾಗಿ ಆಲೋಚನೆ ಮಾಡಿ ದೊಡ್ಡ ಪ್ಲಾನ್ ಮೂಲಕವೇ ಕೃತ್ಯಕ್ಕೆ ಇಳಿಯುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಜಾದು ಮೂಲಕವೇ ದುಡ್ಡು ಎಗರಿಸಿದ್ದಾರೆ.

 

ಹೌದು. ಗ್ರಾಹಕರಂತೆ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು ಜ್ಯೂವೆಲರಿ ಶಾಪ್ ಮಾಲೀಕರೊಬ್ಬರ ಮೇಲೆ‌ ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡಿ 85 ಸಾವಿರ ರೂಪಾಯಿ ಹಣ ದೋಚಿ ಹೋಗಿರುವ ಘಟನೆ ಬೆಂಗಳೂರಿನ ಯಲಹಂಕದ ಅಟ್ಟೂರು ಲೇಔಟ್ ಜ್ಯುವೆಲರಿ ಶಾಪ್​ನಲ್ಲಿ ನಡೆದಿದೆ.

ಮಹಿಳೆ ಬ್ಲ್ಯಾಕ್ ಮ್ಯಾಜಿಕ್​ನ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಕಲಿ ಬಂಗಾರದ‌ ಆಭರಣ ತಂದು ಕೈಚಳಕ ತೋರಿದ್ದಾಳೆ. ಈಕೆ ಬುರ್ಖಾ ತೆಗೆದು ಮುಖ‌ ತೋರಿಸುತ್ತಿದ್ದಂತೆಯೇ ಅಂಗಡಿ ಮಾಲೀಕ ಪ್ರಜ್ಞೆ ತಪ್ಪಿದ್ದಾರೆ. ನಂತರ ಆಕೆ ಹೇಳಿದಂತೆ ಸಾವಿರಾರು ರೂಪಾಯಿ ಹಣವನ್ನು ಕೂಡ ನೀಡಿದ್ದಾನೆ.

ಇದೇ ರೀತಿ‌ ಯಲಹಂಕ ಆರ್.ಟಿ ನಗರ ಸೇರಿದಂತೆ ಹಲವೆಡೆ ಮಹಿಳೆ ವಂಚನೆ ಮಾಡಿರುವುದು ತಿಳಿದುಬಂದಿದೆ. ಮುಖ‌ ತೋರಿಸಿ ಕೈ ಮುಟ್ಟುತ್ತಿದ್ದಂತೆಯೇ ಅಂಗಡಿಯವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ನಂತರ ಆಕೆ ಹೇಳಿದಂತೆ ಹಣ, ಒಡವೆ ಕೊಡುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಚಿನ್ನದಂಗಡಿಯ ಮಾಲೀಕರಿಗೆ ಆತಂಕ ಎದುರಾಗಿದೆ.

ಈ ಬಗ್ಗೆ ದೂರು ನೀಡಿದರೂ ಯಲಹಂಕ ಉಪನಗರ ಪೊಲೀಸರ ನಿರ್ಲಕ್ಷ್ಯ ತೋರುತ್ತಿರುವುದಾಗಿ ಆರೋಪಿಸಲಾಗಿದೆ. ಎಫ್​ಐಆರ್ ದಾಖಲಿಸಿ‌ ತನಿಖೆ ನಡೆಸದೆ ಪೊಲೀಸರು ಕೈತೊಳೆದುಕೊಳ್ಳುತ್ತಿರುವುದಾಗಿ ಅಂಗಡಿ ಮಾಲೀಕರು ದೂರಿದ್ದಾರೆ.

Leave A Reply

Your email address will not be published.