Realme Phone : ರೂ.7,999ನ ಹೊಸ ಫೋನ್ ಮಾರುಕಟ್ಟೆಯಲ್ಲಿ | ಗ್ರಾಹಕರು ಫುಲ್ ಖುಷ್
ಬಜೆಟ್ ಪ್ರಿಯರು ಫುಲ್ ಫಿದಾ ತನ್ನದೇ ಟ್ರೇಡ್ಮಾರ್ಕ್ ರೂಪಿಸಿಕೊಂಡು ಜನರಿಗೆ ಚಿರಪರಿಚಿತವಾಗಿರುವ ರಿಯಲ್ ಮಿ ಹೊಸ ಪ್ರಯೋಗಗಳನ್ನು ಆಗಾಗ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ Realme C33 ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ರಿಯಲ್ ಮಿ ನಾರ್ಜೋ 50i ಪ್ರೈಮ್ ಬಿಡುಗಡೆ ಮಾಡಿದೆ.
ಭಾರತದಲ್ಲಿ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡಿ ಹೆಸರಾಗಿರುವ ರಿಯಲ್‌ಮಿ ಈಗ ರಿಯಲ್‌ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿದೆ. ಈ ಫೋನ್ 5,000 mAh ಶಕ್ತಿಯ ಬ್ಯಾಟರಿ ಹೊಂದಿದ್ದು, 8 ಮೆಗಾಪಿಕ್ಸೆಲ್ AI ಕ್ಯಾಮರಾ ಹೊಂದಿದೆ. ಹಾಗೂ ಎರಡು ವೇರಿಯಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಅನಾವರಣಗೊಂಡಿದೆ.
ಈಗಾಗಲೇ ಸಾಲು ಸಾಲು ರಿಯಲ್ ಮಿ ಸ್ಮಾರ್ಟ್ ಫೋನ್‌ಗಳು ಬಿಡುಗಡೆಗೆ ಸಜ್ಜಾಗಿ ನಿಂತಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್‌ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್ ಮಿ ಕಂಪನಿ 2022 ರಲ್ಲಿ ಸರಣಿ ಮೊಬೈಲ್ ಗಳನ್ನು ಪರಿಚಯಿಸಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. ಈ ಸಾಲಿನಲ್ಲಿ ರಿಯಲ್‌ಮಿ ನಾರ್ಜೋ 50i ಪ್ರೈಮ್ ಕೂಡ ಸೇರಿದ್ದು , ಇದೀಗ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ನಲ್ಲಿದೆ.
ರಿಯಲ್‌ಮಿ ನಾರ್ಜೋ 50i ಪ್ರೈಮ್ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್ಪ್ಲೆ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಒಳಗೊಂಡಿದೆ. ಜೊತೆಗೆ 88.7 ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 400 ನಿಟ್ ಬ್ರೈಟ್ನೆಸ್ ಅನ್ನು ಹೊಂದಿದೆ.
ವಾಟರ್‌ಡ್ರಾಪ್-ಶೈಲಿಯ ನಾಚ್ಡ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 88.7% ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು ಯುನಿಸೊಕ್ T612 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
Realme Narzo 50i Prime ಮೈಕ್ರೊ SD ಕಾರ್ಡ್ (1TB) ಮೂಲಕ ಸ್ಟೋರೇಜ್ ವಿಸ್ತರಣೆಗೆ ಬೆಂಬಲವನ್ನು ಹೊಂದಿದೆ. ರಿಯಲ್ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದು 3GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 4GB RAM ಮತ್ತು 64GB ರೂಪಾಂತರದದ ಬೆಲೆ 8,999 ರೂ. ಆಗಿದೆ.
ರಿಯಲ್‌ಮಿ ನಾರ್ಜೋ 50i ಪ್ರೈಮ್ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 400 ನಿಟ್ಸ್ ಗರಿಷ್ಠ ಬೈಟ್‌ನೆಸ್ ಅನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಯುನಿಸೆಕ್ T612 ಪ್ರೊಸೆಸರ್‌ನಲ್ಲಿ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್ ಮಿ R ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಸಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ರಿಯಲ್‌ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11, ಬ್ಲೂಟೂತ್ 5.0, GPS/ A-GPS, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಮತ್ತು ರಿಯಲ್ ಮಿ ಭಾರತದ ಅಧಿಕೃತ ವೆಬ್‌ಸೈಟ್‌ನಲ್ಲೂ ಮೊಬೈಲ್ ಲಭ್ಯವಿದೆ.