ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9?

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್. ಅದೇನು ಮಾಯೇನೋ ಏನು ‘Bigboss Bigboss Bigboss Bigboss’ ಎನ್ನುವ ಸಾಂಗ್ ಕೇಳಿಸುತ್ತಿದ್ದಂತೆ ಎಲ್ಲಿದ್ದರೂ ಒಮ್ಮೆಗೆ ಇಣುಕಿ ನೋಡದೆ ಇರಲು ಅಸಾಧ್ಯ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ ನಡುವೆ ಆದ್ರೂ ಗುಸು-ಗುಸು, ಪಿಸು-ಪಿಸು ಪ್ರೀತಿ ಬೆಂಕಿ ಹಚ್ಚಿಕೊಳ್ಳುತ್ತಾ ಅನ್ನೋದು.

ಕಳೆದ ತಿಂಗಳಷ್ಟೇ ಪ್ರಾರಂಭವಾಗಿದ್ದ ‘ಬಿಗ್ ಬಾಸ್ ಓಟಿಟಿ ಸಖತ್ ಆಗಿ ಹಿಟ್ ಆಗಿದ್ದು, ಕನ್ನಡ’ದ ಮೊದಲ ಸೀಸನ್ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಈ ವಾರಾಂತ್ಯ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಯಾರು ಟಾಪ್ ಒನ್ ಎಂದು ನೋಡೋ ಕುತೂಹಲವಷ್ಟೇ ಉಳಿದಿದೆ. ಆದ್ರೆ, ಪ್ರೇಕ್ಷಕರಿಗೆ ಮಾತ್ರ ಮಜಾ ಕಡಿಮೆ ಆಗೋದಿಲ್ಲ. ಯಾಕಂದ್ರೆ, ಓಟಿಟಿ ಮುಕ್ತಾಯಗೊಳ್ಳುತ್ತಿದ್ದಂತೆ ಟಿವಿಯಲ್ಲಿ ಬರಲಿದ್ದಾರೆ ಬಿಗ್ ಬಾಸ್.

ಹೌದು. ಓಟಿಟಿ ಮುಕ್ತಾಯದ ಒಂದು ವಾರದ ಗ್ಯಾಪ್​ನ ನಂತರ, ಅಂದರೆ ಸೆ. 25ರಿಂದ ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಶೋ ಹಳಬರು ಮತ್ತು ಹೊಸಬರ ಸಮ್ಮಿಲನವಾಗಲಿದೆ. ಅಂದರೆ, ಆಯ್ಕೆಯ ಓಟಿಟಿ ಸ್ಪರ್ಧೆಗಳು ಸೇರಿದಂತೆ ಇವರ ಜೊತೆಗೆ ಇನ್ನೂ ಹೊಸ ಸ್ಪರ್ಧಿಗಳು ಮನೆ ಪ್ರವೇಶಿಸಲಿದ್ದಾರೆ. ಇಲ್ಲಿಯವರೆಗೆ ವೂಟ್ ಸೆಲೆಕ್ಟ್​ನಲ್ಲಿ 24 ತಾಸುಗಳ ಕಾಲ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್ ಓಟಿಟಿ ಕನ್ನಡ’, ಇನ್ನು ಮುಂದೆ ಗಂಟೆಗಳ ಪ್ರಕಾರ ಟಿವಿಯಲ್ಲಿ ಬರಲಿದ್ದು, ವಾರಾಂತ್ಯದಲ್ಲಿ ಸುದೀಪ್ ಮಾತುಕತೆಗೆ ಬರಲಿದ್ದಾರೆ.

ಸದ್ಯ ಸೀಸನ್ -9 ಸ್ಪರ್ಧಿಗಳು ಯಾರೂ ಎಂಬ ಕುತೂಹಲ ಹೆಚ್ಚುತ್ತಿದ್ದು, ಅಲ್ಲಿಂದಲ್ಲಿಗೆ ಕೆಲವೊಂದು ಹೆಸರುಗಳು ಕೇಳಿ ಬರುತ್ತಿದೆ. ಈ ಪೈಕಿ, ಇತ್ತೀಚೆಷ್ಟೇ ‘ಜೊತೆಜೊತೆಯಲಿ’ ಧಾರಾವಾಹಿಯಿಂದ ಹೊರಬಂದ ನಟ ಅನಿರುದ್ಧ, ‘ಕಮಲಿ’ ಧಾರಾವಾಹಿಯ ಅಮೂಲ್ಯ ಓಂಕಾರ್ ಗೌಡ ಮುಂತಾದವರು ಹೆಸರುಗಳು ಕೇಳಿಬರುತ್ತಿದೆ.

ಆದರೆ, ಈ ಕುರಿತು ಸ್ವತಃ ಅನಿರುದ್ಧ್​ ಅವರೇ ಪ್ರತಿಕ್ರಿಯಿಸಿದ್ದಾರೆ. ‘ನಾನು ಬಿಗ್​ಬಾಸ್​ಗೆ ಹೋಗುತ್ತಿಲ್ಲ’ ಎಂದು ಅನಿರುದ್ಧ್​ ಅವರು ಟ್ವೀಟ್​ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅವರ ಅಭಿಮಾನಿಗಳು ಖುಷಿಯಿಂದ ಶುಭಕೋರುತ್ತಲೇ ಇದ್ದಾರೆ. ಆದರೆ, ಇದನ್ನು ಅಲ್ಲಗೆಳೆದಿರುವ ಅನಿರುದ್ಧ್​, ನಾನು ಬಿಗ್​ಬಾಸ್​ಗೆ ಹೋಗುತ್ತಿಲ್ಲ. ನಾನು ಸಾಮಾಜಿಕ ಕೆಲಸ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave A Reply