Airtel 5G : ಇನ್ನು ಮುಂದೆ ಕೆಲವೇ ದಿನಗಳಲ್ಲಿ ಏರ್ಟೆಲ್ 5G ನಿಮಗಾಗಿ | ಇದಕ್ಕಾಗಿ ಹೊಸ ಸಿಮ್ ಬೇಕಾ ? ಬೇಡ್ವಾ?

ತಂತ್ರಜ್ಞಾನ ಬೆಳೆದಂತೆ ಎಲ್ಲದರಲ್ಲೂ ಕೂಡ ಅಪ್ಡೇಟ್ ಆಗುತ್ತಾ ಬದಲಾವಣೆ ಜಗದ ನಿಯಮ ಎಂದು ಎಲ್ಲರೂ ಬದಲಾವಣೆಗೆ ಒಗ್ಗಿಕೊಂಡು ಸಾಗುತ್ತಿದ್ದಾರೆ.

 

3 ವರ್ಷದ ಹಿಂದೆ ಜಿಯೋ ಸಿಮ್, ಫ್ರೀ ಇಂಟರ್ನೆಟ್, ಫ್ರೀ ಕಾಲ್ ಆಪ್ಷನ್ ನೀಡಿ, ಟೆಲಿಕಾಂ ಇಂಡಸ್ಟ್ರಿಯಲ್ಲಿ ತನ್ನದೇ ಪಾರುಪತ್ಯ ವಹಿಸಿಭಾರತಿ ಏರ್ಟೆಲ್, ಬಿಎಸ್ಎನ್ಎಲ್ ಅನ್ನು ಹಿಂದಿಕ್ಕಿ ಎಲ್ಲರ ಕೈಯಲ್ಲೂ ಜಿಯೋ ಫೋನ್, ಸಿಮ್ ನದ್ದೆ ಕಾರುಬಾರು ಎನ್ನುವಷ್ಟು ಪ್ರಭಾವ ಬೀರಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ಇದೀಗ ಏರ್ಟೆಲ್ 5ಜಿ ಆಯ್ದ ಮೆಟ್ರೊ ನಗರಗಳಲ್ಲಿ ಅಕ್ಟೋಬರ್ ವೇಳೆ ಲಭ್ಯವಾಗಲಿದ್ದು,ಆರಂಭದಲ್ಲಿ ಡೆಲ್ಲಿ, ಮುಂಬೈ, ಚೆನ್ನೈ ಸೇರಿದಂತೆ ಕೆಲ ಮುಖ್ಯ ನಗರಗಳಲ್ಲಿ 5ಜಿ ಕಾರ್ಯನಿರ್ವಹಿಸಲಿದೆ. ಏರ್ಟೆಲ್ 5ಜಿ 2023ರ ವೇಳೆ ಬಹುತೇಕ ಎಲ್ಲ ಕಡೆಗಳಲ್ಲಿ ಸೇವೆ ನೀಡಲು ಅಣಿಯಾಗುತ್ತಿದೆ. ಭಾರತದಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಆನಂದಿಸಲು ಬಳಕೆದಾರರು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಈಗಾಗಲೇ ರಿಲಯನ್ಸ್ ಒಡೆತನದ ಜಿಯೋ (Jio) ಟೆಲಿಕಾಂ ಕಂಪನಿ ದೀಪಾವಳಿ ವೇಳೆಗ 5 ಜಿ ಸೇವೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ , ಭಾರ್ತಿ
ಅತಿ ವೇಗದ ಇಂಟರ್ನೆಟ್ ಕನೆಕ್ಷನ್ 5G ಅನ್ನು ಸದ್ಯದಲ್ಲೇ ಎಲ್ಲ ಜನರಿಗೆ ಲಭ್ಯವಾಗಲಿದೆ ಎಂದು ಹೇಳಿಕೊಂಡಿದೆ.

ಭಾರತದೆಲ್ಲೆಡೆ 5G ಸೇವೆಗಳನ್ನು ಆರಂಭಿಸುವ ಸಲುವಾಗಿ ಏರ್‌ಟೆಲ್ ಕಂಪೆನಿಯು ನೋಕಿಯಾ, ಎರಿಕ್ಸನ್ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳ ಜೊತೆಗೆ 5G ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತದ 12 ವಲಯಗಳಲ್ಲಿ 5G ಒದಗಿಸಲು ಏರ್‌ಟೆಲ್ ಎರಿಕ್ಸನ್‌ನೊಂದಿಗೆ ಕೆಲಸ ಮಾಡುತ್ತಿದೆ.

ಇದೀಗ ಭಾರತದಲ್ಲಿ ನಡೆದ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಏರ್‌ಟೆಲ್ 900 MHz, 1800 MHz, 2100 MHz, 3300 MHz, ಮತ್ತು 26 GHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಲು ಏರ್‌ಟೆಲ್ ತಯಾರಿ ನಡೆಸಿದೆ.ದೇಶದಲ್ಲಿ ನಡೆದ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಏರ್‌ಟೆಲ್ 43,084 ರೂ. ಕೋಟಿ ವೆಚ್ಚ ಮಾಡಿ ಒಟ್ಟು 19867.8 MHz ಏರ್‌ವೇವ್‌ಗಳಿಗೆ ಬಿಡ್ ಮಾಡಿದೆ. ಏರ್‌ಟೆಲ್‌ನಲ್ಲಿ ಈ ಸ್ಪೆಕ್ಟ್ರಮ್‌ಗಳು ಮುಂದಿನ 20 ವರ್ಷಗಳವರೆಗೆ ಇರುತ್ತವೆ.

ಏರ್‌ಟೆಲ್ 3.5 GHz ಸ್ಪೆಕ್ಟ್ರಮ್ ಅನ್ನು ಬಳಸಿಕೊಂಡು ಎರಿಕ್ಸನ್‌ನೊಂದಿಗೆ ಗ್ರಾಮೀಣ ಭಾರತದಲ್ಲಿ 5G ಪ್ರಯೋಗಗಳನ್ನು ನಡೆಸುವ ಮೂಲಕ 5G ನೆಟ್‌ವರ್ಕ್‌ನೊಂದಿಗೆ ಅತ್ಯುತ್ತಮ ಗರಿಷ್ಠ ಡೌನ್‌ಲೋಡ್ ವೇಗವನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಇತ್ತೀಚಿಗಷ್ಟೇ ತಿಳಿದುಬಂದಿತ್ತು. ಇಷ್ಟೇ ಅಲ್ಲದೇ, ಏರ್‌ಟೆಲ್ ತನ್ನ 5G ನೆಟ್‌ವರ್ಕ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಿದ ಹಲವಾರು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದೆ.

ಕಂಪನಿಯು ಪ್ರಸ್ತುತ ನಾಲ್ಕು ಡೇಟಾ ಬೂಸ್ಟರ್ ಪ್ಯಾಕ್‌ಗಳನ್ನು ಹೊಂದಿದೆ. ಅಲ್ಲದೇ ,ಏರ್ಟೆಲ್ 5ಜಿ ನೆಟ್‌ವರ್ಕ್ ಈಗಿರುವ 4ಜಿ ನೆಟ್‌ವರ್ಕ್‌ಗಿಂತ 20-30 ಸಮಯ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ನೆಟ್ ವರ್ಕ್ ಸ್ಟೈಸಿಂಗ್ ಎಂಬ ಫೀಚರ್ ನೀಡುತ್ತಿದ್ದು ಇದರಿಂದ ಗ್ರಾಹಕರಿಗೆ ಹೆಚ್ಚು ನೆರವಾಗಲಿದೆ.

ಹಳೆಯ ಮೊಬೈಲ್‌ನಲ್ಲಿ ಈಗಿರುವ ಏರ್ಟೆಲ್ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್‌ನ ಅಗತ್ಯವಿಲ್ಲ. ಗ್ರಾಹಕನ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್ ಸೆಟ್ಟಿಂಗ್‌ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು.

ಇನ್ನು ಏರ್ಟೆಲ್ ಹೆಚ್ಚಿನ ಸುಂಕದ ಯೋಜನೆಗಳೊಂದಿಗೆ 5G ಸೇವೆಗಳನ್ನು ನೀಡುವ ಸಾಧ್ಯತೆಯಿದೆ . ಮನರಂಜನೆಯ ಜೊತೆಗೆ ವರ್ಕ್ ಫ್ರಮ್ ಹೋಂ ಮಾಡುವವರಿಗೆ ಹೆಚ್ಚು ನೆರವಾಗಲಿದೆ.

Leave A Reply

Your email address will not be published.