ಉಡುಪಿ: ಹೊಂಡ-ಗುಂಡಿಗಳಿಂದ ತುಂಬಿ ಅವ್ಯವಸ್ಧೆಯಲ್ಲಿರುವ ರಸ್ತೆಯಲ್ಲಿ ಏಕಾಏಕಿ ಇದೇನಾಯಿತು!??

ಉಡುಪಿ: ಹೊಂಡ-ಗುಂಡಿಗಳಿಂದ ತುಂಬಿರುವ ನಗರದ ರಸ್ತೆಗಳ ಅವ್ಯವಸ್ಥೆಯ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸುವ ಮೂಲಕ ಸುದ್ದಿಯಾಗಿದ್ದಲ್ಲದೇ, ಆ ಮೂಲಕ ಜನಪ್ರತಿನಿಧಿಗಳ ಕಣ್ಣು ತೆರೆಸುವ ವಿಶೇಷ ಪ್ರಯತ್ನಯೊಂದು ಉಡುಪಿಯಲ್ಲಿ ನಡೆದಿದೆ.

 

ಉಡುಪಿ-ಮಣಿಪಾಲ ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯಲ್ಲಿ ರಸ್ತೆ ತುಂಬಾ ಹೊಂಡಗುಂಡಿಗಳೇ ತುಂಬಿದೆ. ಈ ಅವ್ಯವಸ್ಥೆ ಜನಪ್ರತಿನಿಧಿಗಳ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗೆ ಸಿದ್ಧವಾದರು.

ಗುಂಡಿಗಳಿಂದ ತುಂಬಿರುವ ರಸ್ತೆಗೆ ತೆಂಗಿನ ಕಾಯಿ ಒಡೆದು, ಆರತಿ ಎತ್ತಿದಲ್ಲದೇ ಉರುಳು ಸೇವೆ ನಡೆಸಿ ಪ್ರತಿಭಟನೆ ನಡೆಸಿದರು. ಉಡುಪಿ ನಗರ ಇನ್ನೂ ಬೆಳೆವಣಿಗೆಯಲ್ಲಿರುವ ನಗರವಾಗಿದ್ದು, ಮೂರು ವರ್ಷಗಳಿಂದ ರಸ್ತೆ ಸಮಸ್ಯೆ ಉಂಟಾಗಿದ್ದರೂ ಯಾರೂ ಪ್ರಶ್ನಿಸುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.

ದಿನನಿತ್ಯ ನೂರಾರು ಮಂದಿ ಓಡಾಡುವ ರಸ್ತೆ ಇದಾಗಿದ್ದು,ಜನಪ್ರತಿನಿಧಿಗಳ ಕಾರುಗಳು ಸಹ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.ಸ್ವತಃ ಮುಖ್ಯಮಂತ್ರಿಯವರೇ ಈ ರಸ್ತೆಯಲ್ಲಿ ಸಂಚರಿಸಿದ್ದು, ಅವರಿಗೂ ಈ ಸಮಸ್ಯೆ ಕಣ್ಣಿಗೆ ಕಾಣಿಸಲಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Leave A Reply

Your email address will not be published.