5.5 ಲಕ್ಷ ಮಂದಿಯಲ್ಲಿ ನಿದ್ದೆ ಸ್ಪರ್ಧೆಯಲ್ಲಿ ಈಕೆ ಗೆದ್ದಳು | ನಿದ್ದೆ ಮಾಡಿ ಗೆದ್ದ ಮೊತ್ತವೆಷ್ಟು ಗೊತ್ತಾ ?

ನಿದ್ರೆ ಮಾಡುವುದಕ್ಕೆ ಸಂಬಳ ಸಿಗುವಂತಿದ್ದಿದ್ದರೆ ಈ ರೀತಿಯ ಯೋಚನೆ ಎಲ್ಲರಿಗೂ ಬಂದಿರುತ್ತದೆ. ಆದರೆ ಕೋಲ್ಕತ್ತದ ಅದೃಷ್ಟಶಾಲಿ ಯುವತಿಯೊಬ್ಬರು ನಿದ್ರೆ ಮಾಡಿಯೇ ಬರೋಬ್ಬರಿ 5 ಲಕ್ಷ ರೂ. ಗೆದ್ದು ಬಿಟ್ಟಿದ್ದಾರೆ. ನಿದ್ದೆ ಮಾಡಿ ಇರುವ ಅವಕಾಶ ಕೈ ಚೆಲ್ಲಿ ಕುಳಿತು ಕೊಳ್ಳುವವರ ಮಧ್ಯೆ ಈಕೆ ನಿದ್ದೆಯನ್ನೆ ಬಂಡವಾಳ ಮಾಡಿಕೊಂಡು ದುಡ್ಡು ಮಾಡಿಕೊಂಡಿದ್ದಾಳೆ.

 

ತ್ರಿಪರ್ಣ ಚಕ್ರವರ್ತಿ(26) ವೇಕ್‌ ಫಿಟ್‌ ಸೀಸ್ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದರು. ದೇಶಾದ್ಯಂತ ಒಟ್ಟು 5.5 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, ಆ ಪೈಕಿ 15 ಸರ್ಧಿಗಳನ್ನು ಸಂಸ್ಥೆ ಆಯ್ದುಕೊಂಡಿತ್ತು. ನಾಲ್ವರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು.

ಅವರಲ್ಲಿ ಯಾರು 100 ದಿನಗಳ ಕಾಲ ಪ್ರತಿದಿನ 9 ಗಂಟೆ ಯಾವುದೇ ಅಡೆತಡೆ ಇಲ್ಲದೆ ನಿದ್ರೆ ಮಾಡುತ್ತಾರೆ ಎಂದು ಪರೀಕ್ಷೆ ಮಾಡಲಾಗಿದೆ. ನಾಲ್ವರ ಪೈಕಿ ತ್ರಿಪರ್ಕ ತಮ್ಮ ನಿದ್ರೆಯಲ್ಲಿ ಶೇ.95 ದಕ್ಷತೆ ತೋರಿಸಿದ್ದಾರೆ.

ಪ್ರತಿ ದಿನ 9 ಗಂಟೆಗಳ ಕಾಲ ಅತ್ಯುತ್ತಮ ನಿದ್ರೆ ಮಾಡಿದ ಹಿನ್ನೆಲೆ ಅವರನ್ನು ಭಾರತದ ‘ಸೀಪ್ ಜಾಂಪಿಯನ್ ” ಎಂದು ವೇಕ್ ಫಿಟ್ ಸಂಸ್ಥೆ ಕರೆದಿದೆ. ಹಾಗೆಯೇ 5 ಲಕ್ಷ ಬಹುಮಾನವನ್ನೂ ಕೊಟ್ಟಿದೆ.

Leave A Reply

Your email address will not be published.